
ಯಡಿಯೂರಪ್ಪ ಅವರು ತಮ್ಮ 50 ವರ್ಷಗಳ ಹೋರಾಟದ ಹಾದಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಅಧಿಕಾರ ಇದ್ದಾಗ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ್ದಾರೆ. ಅಧಿಕಾರ ಇಲ್ಲದಿದ್ದಾಗ ಸಾಮಾನ್ಯರ ಜೊತೆ ನಿಂತು ಹೋರಾಟ ಮಾಡಿದ್ದಾರೆ. ಹೋರಾಟದ ಮೂಲಕವೇ ಅವರ ಹಾದಿ ಸಾಗಿ ಬಂದಿದೆ. ಹೋರಾಟದ ಮೂಲಕ ಮುಖ್ಯಮಂತ್ರಿ ಗಾದಿವರೆಗೂ ಸಾಗಿದ ಅಪರೂಪದ ರಾಜಕಾರಣಿಯಾಗಿದ್ದಾರೆಶಿವರಾತ್ರೀಶ್ವರ ದೇಶೀಕೇಂದ್ರ ಸ್ವಾಮೀಜಿ, ಸುತ್ತೂರು ಮಠ
ಬಿ.ಎಸ್.ಯಡಿಯೂರಪ್ಪ ಅವರ ಮೌಲ್ಯಯುತವಾಗಿ ರಾಜಕಾರಣ ಮಾಡಿದ್ದಾರೆ. ಇದು ಕೇವಲ ಬಿಎಸ್‌ವೈ ಅಭಿಮಾನೋತ್ಸವ ಅಷ್ಟೇ ಅಲ್ಲ. ಮೌಲ್ಯಯುತ ರಾಜಕಾರಣದ ಸಂಭ್ರಮೋತ್ಸವವೂ ಆಗಿದೆ. ಹೋರಾಟದ ಹಾದಿಯಲ್ಲಿ ಬಂದ ಅವರು ಬಡವರಿಗೆ ನ್ಯಾಯ ನೀಡುವ ಕೆಲಸ ಮಾಡಿದ್ದಾರೆ. ಅಭಿಮಾನೋತ್ಸಕ್ಕೆ ಹರಿದು ಬಂದಿರುವ ಜನಸಾಗರವನ್ನು ನೋಡಿದರೆ ಯಡಿಯೂರಪ್ಪ ಅವರ ಮೇಲೆ ಜನರಿಗೆ ಇರುವ ಪ್ರೀತಿ ತಿಳಿಯುತ್ತದೆನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ಬಿಎಸ್‌ವೈ ಅಭಿಮಾನೋತ್ಸವಕ್ಕೆ ಹರಿದು ಬಂದಿರುವ ಜನಸಾಗರವನ್ನು ಕಂಡು ಮನಸ್ಸು ತುಂಬಿ ಬಂದಿದೆ. ಈ ಸಮಾರಂಭಕ್ಕೆ ಬಂದದ್ದು ಸಾರ್ಥಕ ಎನಿಸಿದೆ. ಯಡಿಯೂರಪ್ಪ ಒಮ್ಮೆಲೆ ಅಧಿಕಾರ ಅನುಭವಿಸಿದವರಲ್ಲ. ಸಾಮಾನ್ಯರ ಜತೆ ಸಾಮಾನ್ಯರಾಗಿ ಬೆರೆತು ಹೋರಾಟ ಮಾಡಿ ಅಧಿಕಾರದ ಗದ್ದುಗೆ ಏರಿದ್ದಾರೆ. ಮಠ, ಮಂದಿರಗಳಿಗೆ ಅಪಾರ ಅನುದಾನ ನೀಡಿರುವ ಅವರ ಎಲ್ಲಾ ಸಮಾಜಗಳ ಪ್ರೀತಿ ಸಂಪಾದನೆ ಮಾಡಿದ್ದಾರೆರೇಣುಕಾ ವೀರಸೋಮೇಶ್ವರ ಸ್ವಾಮೀಜಿ, ರಂಭಾಪುರಿ ಮಠ
ಬಿ.ಎಸ್.ಯಡಿಯೂರಪ್ಪ ಅವರು ನೀರಾವರಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಂಡ್ಯಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವರು ಧಾರ್ಮಿಕ ವಾತಾವರಣದಲ್ಲಿ ಉತ್ತಮ ಸಂಸ್ಕಾರ ಪಡೆದು ಬಂದಿದ್ದಾರೆ. ಬಡ ಜನರಿಗಾಗಿ ತುಡಿಯುವ ಹೃದಯ ಅವರದುಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಮಠ, ಸಿರಿಗೆರೆ
ಹಲವರು ರಾಜಕೀಯವಾಗಿ ತುಳಿಯಲು ಪ್ರಯತ್ನಿಸಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಇಂಗ್ಲಿಷ್ ಅಕ್ಷಗಳಲ್ಲಿ ‘ಐ’ ಹೊರತುಪಡಿಸಿ ಮಿಕ್ಕೆಲ್ಲಾ ಪದಗಳು ಬೆಂಡಾಗುತ್ತವೆ. ಅದೇ ರೀತಿಯಾಗಿ ಯಡಿಯೂರಪ್ಪ ಅವರು ತಮ್ಮ ಇಡೀ ಜೀವನಲ್ಲಿ ‘ಐ’ ಮಾದರಿಯಲ್ಲಿ ಯಾರಿಗೂ ಬೆಂಡಾಗಲಿಲ್ಲ. ಆನೆ, ಸಿಂಹಕ್ಕೆ ಸಿಂಹಾಸನ ಬೇಕಿಲ್ಲ. ಕುಂತ ಜಾಗವೇ ಸಿಂಹಾಸನವಾಗುತ್ತದೆ. ಯಡಿಯೂರಪ್ಪ ಅಂಥದ್ದೇ ವ್ಯಕ್ತಿತ್ವ ಹೊಂದಿದ್ದಾರೆದಿಂಗಾಲೇಶ್ವರ ಸ್ವಾಮೀಜಿ, ಶಿರಹಟ್ಟಿ ಫಕೀರ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.