ವಿಟ್ಲ: ‘20 ವರ್ಷಗಳಿಂದ ಸೇತುವೆ ಕಾಮಗಾರಿಗೆ ಅದ್ಯತೆ ನೀಡಿಲ್ಲ. ಕೇರಳ ಸಂಪರ್ಕ ಕಲ್ಪಿಸುವ ಮೂರು ಸೇತುವೆ ನಿರ್ಮಿಸುವ ಪ್ರಸ್ತಾವನೆ ಇದೆ. ಸುಳ್ಯ ಭಾಗ ಸೇರಿ ವಿವಿಧ ಭಾಗದಲ್ಲಿ ಬೇಡಿಕೆಯಿದೆ. ಸಂಪರ್ಕ ಸಮೀಪ ಆಗುವ ಸ್ಥಳಗಳಲ್ಲಿ ಅಭಿವೃದ್ಧಿ ನಡೆಸಲಾಗುವುದು. ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ’ ಎಂದು ಲೊಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಮಾಣಿಲ ಗ್ರಾಮದ ಕಾಮಜಾಲು ಪೂನಡ್ಕ ಮೂಲಕ ಕೇರಳ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಸ್ಥಳ ವೀಕ್ಷಣೆ ಮಾಡಿ ಶನಿವಾರ ಅವರು ಮಾತನಾಡಿದರು.

ಪೂನಡ್ಕ ಸೇತುವೆ ಸುಮಾರು 50 ವರ್ಷದ ಹಿಂದಿನ ಬೇಡಿಕೆ ಎಂದು ತಿಳಿದು ಸ್ಥಳ ಪರಿಶೀಲನೆಗೆ ಬಂದಿದ್ದೇನೆ. ಕಾಲು ಸಂಕ ಹಾಗೂ ಸೇತುವೆಗಳ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗಿದೆ. ಪೂನಡ್ಕ ಸೇತುವೆ ಬಗ್ಗೆ ಸಾಧಕ ಬಾಧಕ ನೋಡಿ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಸೇತುವೆಯ ಸಂಪೂರ್ಣ ಖರ್ಚು ಕರ್ನಾಟಕವೇ ಭರಿಸಲಿದೆ ಎಂದು ಹೇಳಿದರು.

ಜಿಲ್ಲೆಯಾದ್ಯಂತ ಕೆಲವು ಸೇತುವೆ ಹೊಸದಾಗಿ ಮಾಡಿದರೆ, ವಿಸ್ತರಣೆ ಸೇರಿ ಕೆಲವನ್ನು ದುರಸ್ತಿ ಮಾಡಲಾಗುತ್ತಿದೆ. ಎಸ್.ಎಚ್.ಡಿ.ಪಿ. ಕಾಮಗಾರಿ ಸದ್ಯ ಉತ್ತಮವಾಗಿ ನಡೆಯುತ್ತಿದ್ದು, ಹಿಂದಿನ ಅವಧಿಯ ವಿಚಾರ ತಿಳಿದಿಲ್ಲ. ಪುತ್ತೂರು ಶಾಸಕ ನೀಡಿದ ಹಲವು ಯೋಜನೆಯನ್ನು ನೀಡಲಾಗಿದೆ. ಮಳೆಗೆ ಕಾಮಗಾರಿ ಹಾನಿಯಾಗಬಾರದೆಂಬ ನಿಟ್ಟಿನಲ್ಲಿ ಇಲಾಖೆಯ ಕಾಮಗಾರಿಗಳನ್ನು ಅಕ್ಟೋಬರ್ ಬಳಿಕವೇ ನಡೆಸಲಾಗುತ್ತಿದ್ದು, ಗುತ್ತಿಗೆಯನ್ನು ಏಪ್ರಿಲ್ನಲ್ಲಿ ಮಾಡಲಾಗುತ್ತಿದೆ ಎಂದರು.

ಶಾಸಕ ಅಶೋಕ್ ಕುಮಾರ್ ರೈ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕುಕ್ಕಾಜೆ ಶ್ರೀಕೃಷ್ಣ ಗುರೂಜಿ, ಪ್ರಮುಖರಾದ ಎಂ.ಎಸ್.ಮಹಮ್ಮದ್, ಗೋಪಾಲಕೃಷ್ಣ ನಾಯಕ್ ಮುಕ್ವೆ, ಶ್ರೀಧರ್ ಬಾಳೆಕಲ್ಲು, ವಿಷ್ಣು ಕುಮಾರ್ ಕೊಮ್ಮುಂಜೆ, ಜಯರಾಮ್ ಬಲ್ಲಾಳ್, ಕೃಷ್ಣ ಪೂಜಾರಿ, ಗಣೇಶ್ ಭಟ್ ದೇಲಂತಮಜಲು, ವಿಷ್ಣು ಕನ್ನಡಗುಳಿ, ರಾಮಕೃಷ್ಣ ಅಡ್ಯಂತಾಯ, ಕರೀಂ ಕುದ್ದುಪದವು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-29-2005705464

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.