ಬೆಂಗಳೂರು: ‘ಪಶ್ಚಿಮ ಏಷ್ಯಾ ದೇಶಗಳಿಂದ ಬಂದಿರುವ ಪ್ರವಾಸಿಗರಿಗೆ ಯುದ್ಧದ ಪರಿಣಾಮ ತಾಯ್ನಾಡಿಗೆ ಮರಳುವುದು ಕಷ್ಟಸಾಧ್ಯವಾಗಿದೆ. ಆ ಪ್ರವಾಸಿಗರ ಆತಿಥ್ಯ ವಹಿಸಿಕೊಳ್ಳಲು ರಾಜ್ಯ ಸರ್ಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಗರದ ಅರಮನೆ ಮೈದಾನದಲ್ಲಿ (ತ್ರಿಪುರ ವಾಸಿನಿ) ಹಮ್ಮಿಕೊಂಡಿರುವ ಮೂರು ದಿನಗಳ ‘ಯಾತ್ರೆ ಮತ್ತು ಪ್ರವಾಸೋದ್ಯಮ ಮೇಳ’ಕ್ಕೆ (ಟಿಟಿಎಫ್) ಶುಕ್ರವಾರ ಚಾಲನೆ ನೀಡಿ, ಮಾತನಾಡಿದರು.

‘ಪಶ್ಚಿಮ ಏಷ್ಯಾ ಸಂಘರ್ಷವು ಭಾರತದ ಮೇಲೆ ನೇರ ಪರಿಣಾಮ ಬೀರದಿದ್ದರೂ, ವಿದೇಶಿ ಪ್ರವಾಸಿಗರ ಪ್ರಯಾಣವನ್ನು ಅನಿಶ್ಚಿತತೆಯ ತೆಕ್ಕೆಗೆ ದೂಡಿದೆ. ವೀಸಾ ಮತ್ತು ಪ್ರಯಾಣ ನಿರ್ಬಂಧಗಳಿಂದಾಗಿ ಅನೇಕರು ತಮ್ಮ ತಾಯ್ನಾಡಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಪರಿಸ್ಥಿತಿ ತಿಳಿಯಾಗುವವರೆಗೆ, ಅವರ ವಾಸ್ತವ್ಯ ಇಲ್ಲಿ ಆರಾಮದಾಯಕವಾಗಿರಲು ವೀಸಾ ನಿರ್ವಹಣೆ ಸೇರಿದಂತೆ ಅಗತ್ಯ ಸಹಾಯಕ್ಕೆ ನೆರವಾಗುತ್ತೇವೆ’ ಎಂದು ಭರವಸೆ ನೀಡಿದರು.

30 ಕೋಟಿ ಭೇಟಿ: ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಕೆ.ವಿ. ತ್ರಿಲೋಕ್ ಚಂದ್ರ, ‘ರಾಜ್ಯಕ್ಕೆ ವಾರ್ಷಿಕ 30 ಕೋಟಿಯಷ್ಟು ದೇಶೀಯ ಹಾಗೂ ಸುಮಾರು 20 ಲಕ್ಷ ವಿದೇಶಿಯರು ಭೇಟಿ ನೀಡುತ್ತಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸಲು ಇಂತಹ ಮೇಳವನ್ನು ಆಯೋಜಿಸುತ್ತಿದ್ದೇವೆ. ರಾಜ್ಯದಲ್ಲಿ ಎಲ್ಲ ರೀತಿಯ ಪ್ರವಾಸಿ ಸ್ಥಳಗಳಿವೆ. ಕರಾವಳಿ ಪ್ರವಾಸೋದ್ಯಮಕ್ಕೂ ಇನ್ನಷ್ಟು ಉತ್ತೇಜನ ನೀಡಲಾಗುತ್ತಿದೆ. ಪ್ರವಾಸಿ ಸ್ಥಳಗಳಿಗೆ ಮೂಲಸೌಕರ್ಯ ಒದಗಿಸುವ ಜತೆಗೆ, ಹೂಡಿಕೆಗೂ ಅವಕಾಶ ಮಾಡಿಕೊಡಲಾಗಿದೆ. ದೇಶ–ವಿದೇಶದ 150ಕ್ಕೂ ಹೆಚ್ಚು ಸಂಸ್ಥೆಗಳ ಪ್ರತಿನಿಧಿಗಳನ್ನು ಈ ಮೇಳ ಆಕರ್ಷಿಸಿದೆ’ ಎಂದು ಹೇಳಿದರು.

ಮೂರು ದಿನಗಳ ಈ ಮೇಳದಲ್ಲಿ ಗೋವಾ, ಕರ್ನಾಟಕ, ಮೇಘಾಲಯ, ತೆಲಂಗಾಣ, ಗುಜರಾತ್, ತಮಿಳುನಾಡು, ಜಾರ್ಖಂಡ್ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮಂಡಳಿಗಳು ಭಾಗವಹಿಸಿವೆ. ಪ್ರವಾಸ ಆಯೋಜಿಸುವ ಖಾಸಗಿ ಕಂಪನಿಗಳು, ಹೋಟೆಲ್ ಉದ್ಯಮಗಳು, ವಿಮಾನಯಾನ ಸೇರಿ ಪ್ರಯಾಣ ಸಂಸ್ಥೆಗಳೂ ಪಾಲ್ಗೊಂಡಿವೆ.

ಉದ್ಘಾಟನಾ ಸಮಾರಂಭದಲ್ಲಿ ಪ್ರವಾಸೋದ್ಯಮ ಸಚಿವಾಲಯದ ನಿರ್ದೇಶಕಿ ಸಂಧ್ಯಾ ಹರಿದಾಸ್, ಪ್ರಾದೇಶಿಕ ನಿರ್ದೇಶಕ ಡಿ. ವೆಂಕಟೇಶನ್ ಹಾಗೂ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಶಂಕಿನಮಠ ಉಪಸ್ಥಿತರಿದ್ದರು.

ವಸ್ತು ಸಂಗ್ರಹಾಲಯ ಸ್ಥಾಪನೆ

‘ಐತಿಹಾಸಿಕ ಸ್ಥಳಗಳಲ್ಲಿ ಉತ್ಖನನ ಯೋಜನೆಗಳು ಮತ್ತು ತೆರೆದ ವಸ್ತುಸಂಗ್ರಹಾಲಯಗಳ ಅಭಿವೃದ್ಧಿಯತ್ತ ಗಮನಹರಿಸಲಾಗುತ್ತಿದೆ. ಲಕ್ಕುಂಡಿಯಲ್ಲಿ ಉತ್ಖನನ ಸಂದರ್ಭದಲ್ಲಿ ದೊರೆತ ಐತಿಹಾಸಿಕ ವಸ್ತುಗಳ ಪ್ರದರ್ಶನಕ್ಕೆಂದೇ ಒಂದು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು. ಅಲ್ಲಿ ಸುಮಾರು 1500 ಕಲಾಕೃತಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಸುಮಾರು 3500 ವಸ್ತುಗಳನ್ನು ಸಂಶೋಧಿಸಲಾಗಿದೆ. ಇತ್ತೀಚೆಗೆ ಒಂದು ಕುಟುಂಬವು 600 ವರ್ಷಗಳಷ್ಟು ಹಳೆಯದಾದ ಆಭರಣವನ್ನು ದಾನ ಮಾಡಿದೆ. ಇದನ್ನು ದೇವಿಗೆ ಅಲಂಕರಿಸಲು ಬಳಸಲಾಗುತ್ತಿತ್ತು. ಇದರ ಮೌಲ್ಯ ಸುಮಾರು ₹ 5 ಕೋಟಿಯೆಂದು ತಜ್ಞರು ಅಂದಾಜಿಸಿದ್ದಾರೆ’ ಎಂದು ಎಚ್.ಕೆ. ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.