‘ಬೆಂಗಳೂರು: ‘ಎಲ್ಲಾ ರಾಜಕೀಯ ಪಕ್ಷಗಳು ಸಮನ್ವಯ ಸಾಧಿಸಿ ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಶೇ 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ವಿಧಾನ ಪರಿಷತ್ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಲಹೆ ನೀಡಿದರು.

ಕನ್ನಡ ಜನಶಕ್ತಿ ಕೇಂದ್ರವು ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್.ಘಂಟಿ ಅವರಿಗೆ ‘ಯಶೋಧರಾ ದಾಸಪ್ಪ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಹಿಂದೆ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ಮಹಿಳಾ ಮೀಸಲಾತಿ ತರುವ ಪ್ರಯತ್ನ ಮಾಡಿದ್ದರು. ನಂತರ ಸೋನಿಯಾ ಗಾಂಧಿ ಅವರು ಇದಕ್ಕೆ ಬಲ ತುಂಬಿದ್ದರು. ಮೂರು ವರ್ಷದ ಹಿಂದೆ ಎನ್ಡಿಎ ಸರ್ಕಾರ ಮರು ಪ್ರಯತ್ನ ಆರಂಭಿಸಿ ಸುಮ್ಮನಾದರೂ ಈಗ ಏಕಾಏಕಿ ಅದನ್ನು ತರುವ ಪ್ರಯತ್ನ ಮಾಡಿತು. ಆದರೆ, ಇದರ ಹಿಂದೆ ಬೇರೆ ಉದ್ದೇಶ ಇದ್ದಂತೆ ಇತ್ತು. ರಾಜಕೀಯ ಬಿಟ್ಟು ಮೀಸಲಾತಿ ಮೂಲಕ ಮಹಿಳೆಯರಿಗೆ ಶಕ್ತಿ ತುಂಬುವ ಪ್ರಯತ್ನ ಎಲ್ಲಾ ಪಕ್ಷಗಳಿಂದ ಆಗಬೇಕು. ಮಹಿಳೆಯರು ಇದನ್ನು ಗಟ್ಟಿಯಾಗಿ ಕೇಳಬೇಕು’ ಎಂದು ಅವರು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಮಲ್ಲಿಕಾ ಎಸ್.ಘಂಟಿ ಮಾತನಾಡಿ, ‘ಹಿಂದಿನ ರಾಜಕಾರಣ ಈಗಿಲ್ಲ. ಯಾವುದೇ ಹೋರಾಟ, ಬರಹಕ್ಕೂ ಬೆಲೆ ಇಲ್ಲದಾಗಿದೆ. ಅಷ್ಟರ ಮಟ್ಟಿಗೆ ಸಮಾಜ ಕಲುಷಿತಗೊಂಡಿದೆ. ಈಗ ಏನಾದರೂ ಬರೆದರೆ ಮುಖ ಇಲ್ಲದ ವಿಶ್ವವಿದ್ಯಾಲಯಗಳಾಗಿರುವ ಸಾಮಾಜಿಕ ಮಾಧ್ಯಮಗಳ ಮೂಲಕ ಹೊಡೆತ ನೀಡಲು ಹಲವರು ಕಾಯ್ದುಕೊಂಡಿರುತ್ತಾರೆ. ಹಾಗೆಂದು ಸತ್ಯ ಹೇಳದೇ ಇರಲು ಆಗುವುದಿಲ್ಲ. ಒಂದಿಷ್ಟು ಮೌನ ವಹಿಸಿದರೂ ನನ್ನ ಪೂರ್ಣ ಧ್ವನಿಯಂತೂ ಅಡಗಿಲ್ಲ’ ಎಂದು ಅವರು ಹೇಳಿದರು.

‘ಯಶೋಧರಮ್ಮ ದಾಸಪ್ಪ ಅವರು ಪಾನ ನಿಷೇಧ ಮಾಡದ್ದಕ್ಕೆ ಸಚಿವ ಸ್ಥಾನವನ್ನೇ ತ್ಯಜಿಸಿ ಮಾದರಿಯಾದರು. ಈಗ ರಾಜಕಾರಣದಲ್ಲಿ ಅದನ್ನೆಲ್ಲ ನಿರೀಕ್ಷಿಸಲು ಆಗುವುದಿಲ್ಲ. ಕುರ್ಚಿ ಬಿಟ್ಟು ಏಳದವರು, ಎಷ್ಟೇ ಜಗ್ಗಿದರೂ ಅಧಿಕಾರ ಬಿಟ್ಟುಕೊಡದವರು ಹೆಚ್ಚಾಗಿದ್ದಾರೆ. ಇದರ ನಡುವೆ ಹೆಣ್ಣು ಮಕ್ಕಳು ರಾಜಕೀಯಕ್ಕೆ ಬಂದರೆ ಅವರಿಗೆ ಧ್ವನಿ ಇಲ್ಲದ ಹಾಗೆ ಮಾಡಲಾಗುತ್ತದೆ. ಮೌನ ಗೌರಿಯರನ್ನು ಕೂರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರಿಸಿದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಕಸಾಪ ನಿಕಟಪೂರ್ವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-4-1182473116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.