ಹವಾಮಾನ ವೈಪರೀತ್ಯದ ಕುರಿತು ಜನರಲ್ಲಿ ಜಾಗೃತಿ ಹಾಗೂ ಪರಿಸರವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 23ನ್ನು ವಿಶ್ವ ಹವಾಮಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 1950ರಲ್ಲಿ ಸ್ಥಾಪನೆಯಾದ ವಿಶ್ವ ಹವಾಮಾನ ಸಂಸ್ಥೆಯ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ.

ಈ ಹಿಂದೆ ಹಿಮಗಡ್ಡೆಯ ವೀಕ್ಷಣೆಗೆ ಉತ್ತರ ಭಾರತದ ರಾಜ್ಯಗಳಿಗೆ ಹೋಗಬೇಕಾಗಿತ್ತು. ಆದರೆ ಕಾಲ ಬದಲಾಗಿದೆ. ಹವಾಮಾನದಲ್ಲಿನ ವ್ಯಾಪಕ ಬದಲಾವಣೆಯಿಂದಾಗಿ ಕರ್ನಾಟಕದಲ್ಲಿ, ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಆಲಿಕಲ್ಲಿನ ರಾಶಿ ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿತ್ತು. ಹಿಮದ ರಾಶಿ ಕಂಡು ಜನರು ಕೂಡ ಸಂತಸಪಟ್ಟಿದ್ದರು.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಧ್ಯಾಹ್ನದವರೆಗೂ ಸೂರ್ಯ ಎಲ್ಲರ ನೆತ್ತಿಯನ್ನು ಸುಡುತ್ತಿದ್ದ. ವಿಪರೀತ ಬಿಸಿಲಿನ ಬೇಗೆಯಲ್ಲಿದ್ದಾಗ ಸೂರ್ಯ ನಿಧಾನವಾಗಿ ಪಶ್ಚಿಮದ ಕಡೆಗೆ ವಾಲತೊಡಗಿದ. ಇದ್ದಕ್ಕಿದ್ದಂತೆ ಧಾರವಾಡ ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲಿ ಕಪ್ಪು ಮೊಡ ಆವರಿಸಿಕೊಂಡಿತು. ನೋಡ ನೋಡುತ್ತಲೇ ಜೋರು ಮಳೆ ಆರಂಭವಾಯಿತು. ಮಳೆಯ ಜೊತೆಗೆ ಗುಂಡಿನಂತೆ ಆಲಿಕಲ್ಲುಗಳು ಧರೆಗೆ ಅಪ್ಪಳಿಸಿದವು. ಕೆಲವೇ ಗಂಟೆಗಳಲ್ಲಿ ರಸ್ತೆಯ ಮೇಲೆ 1 ಅಡಿಗೂ ಎತ್ತರದ ಆಲಿಕಲ್ಲಿನ ಹೊದಿಕೆ ನಿರ್ಮಾಣವಾಗಿತ್ತು.

ಮಾರ್ಚ್ 17ರಂದು ಸುರಿದ ಭೀಕರ ಮಳೆಗೆ ರಾಜ್ಯದ 17 ಜಿಲ್ಲೆಗಳು ಕಾಶ್ಮೀರದಂತೆ ಭಾಸವಾಗಿದ್ದವು. ಒಂದೆಡೆ ಮಕ್ಕಳು ಖುಷಿಯಿಂದ ಆಲಿಕಲ್ಲುಗಳೊಂದಿಗೆ ಆಟವಾಡಿದರೆ, ಮತ್ತೊಂದೆಡೆ ಬೆಳೆದು ನಿಂತ ಬೆಳಗೆಳಿಗೆ ಹಾನಿಯಾಯಿತಲ್ಲ ಎಂದು ರೈತರು ಹೌಹಾರಿದರು. ಕರ್ನಾಟಕದಲ್ಲಿ ಇದ್ದಕ್ಕಿಂದಂತೆ ಆಲಿಕಲ್ಲು ಮಳೆಯಾಗಲು ಕಾರಣವೇನು? ಆಲಿಕಲ್ಲು ಮಳೆ ಹೇಗೆ ಉಂಟಾಗುತ್ತದೆ? ಆಲಿಕಲ್ಲನ್ನು ಸೇವಿಸಬಹುದೇ? ಎಂಬ ಮಾಹಿತಿಯನ್ನು ತಿಳಿಯೋಣ.

ಕರ್ನಾಟಕದಲ್ಲಿ ಧಿಡೀರ್ ಮಳೆಗೆ ಕಾರಣವೇನು?

ಮಾರ್ಚ್ ತಿಂಗಳು ಬೇಸಿಗೆಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ಮಳೆ ಸುರಿಯುವುದು ತೀರ ಅಪರೂಪ. ಆದರೆ ರಾಜ್ಯದಲ್ಲಿ ಸುರಿದ ಈ ರಣ ಮಳೆಗೆ ಹಲವು ವೈಜ್ಞಾನಿಕ ಕಾರಣಗಳನ್ನು ತಜ್ಞರು ನೀಡುತ್ತಾರೆ. ಅವುಗಳೆಂದರೆ,

ಟ್ರಾಫ್ (ವಾಯುಭಾರ ಕುಳಿ): ಭೂಮಿ ಹಾಗೂ ವಾತಾವರಣದ ನಡುವೆ ಒಂದು ಪದರ ನಿರ್ಮಾಣವಾಗುತ್ತದೆ. ಇದು ಹತ್ತಾರು ಕಿ.ಮೀ ಗಳ ವರೆಗೂ ಉದ್ದವಾಗಿರಬಹುದು. ಇದನ್ನು ಕಡಿಮೆ ಒತ್ತಡದ ಪ್ರದೇಶ ಎಂದೂ ಕರೆಯಬಹುದು.

ಈ ಪದರ ಉತ್ತರ ಒಳನಾಡಿನಿಂದ ಆರಂಭವಾಗಿ, ತಮಿಳುನಾಡಿ ಗಲ್ಫ್ ಆಫ್ ಮನ್ನಾರ್ವರೆಗೂ ವಿಸ್ತರಿಸಿತ್ತು. ಈ ಕಡಿಮೆ ಒತ್ತಡದ ಪ್ರದೇಶ ಸಮುದ್ರದಿಂದ ಬರುವಂತಹ ತಣ್ಣನೆಯ ಗಾಳಿಯನ್ನು ತನ್ನತ್ತ ಸೆಳೆಯುತ್ತದೆ. ಇದರಿಂದ ಇಲ್ಲಿನ ಪ್ರದೇಶದ ಹೆಚ್ಚು ತಂಪಾಗುತ್ತದೆ.

ಮೆಡಿಟರೇನಿಯನ್ ಕಡೆಯಿಂದ ಬಿಸುವ ತಂಪಾದ ಗಾಳಿ

ಬೇಸಿಗೆಯ ಬಿಸಿಲಿಗೆ ಭೂಮಿಯು ಕಾದಿರುತ್ತದೆ. ಈ ನಡುವೆ ಭೂಮಿಯ ಶಾಖ ಆಕಾಶದಂತ್ತ ಮೇಲ್ಮುಖವಾಗಿ ಹೋಗುತ್ತದೆ. ಅದೇ ಸಮಯದಲ್ಲಿ ಮೆಡಿಟರೇನಿಯನ್ ಕಡೆಯಿಂದ ಬಿಸುವ ತಂಪಾದ ಗಾಳಿಗೆ ಭೂಮಿಯ ಶಾಖ ಡಿಕ್ಕಿ ಹೊಡೆಯುತ್ತದೆ. ಇದರಿಂದ ಭೀಕರ ಮೋಡಗಳು ಸೃಷ್ಟಿಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.

ಮುಖ್ಯವಾಗಿ ಈ ಎರಡು ಕಾರಣಗಳಿಂದಾಗಿ ಕರ್ನಾಟಕದಲ್ಲಿ ಭಾರೀ ಪ್ರಮಾಣದ ಆಲಿಕಲ್ಲಿನ ಮಳೆ ಸುರಿಯಲು ಕಾರಣವಾಗಿದೆ ಎಂದು ಹವಾಮಾನ ಇಲಾಖೆ ಹೇಳುತ್ತದೆ.

ಆಲಿಕಲ್ಲು ಹೇಗೆ ಸೃಷ್ಟಿಯಾಗುತ್ತದೆ?

ಕಡು ಕಪ್ಪು ಮೋಡಗಳು (Cumulonimbus clouds) ಆಲಿಕಲ್ಲು ನಿರ್ಮಾಣವಾಗಲು ಪ್ರಮುಖ ಪಾತ್ರ ವಹಿಸುತ್ತದೆ. ಮೋಡಗಳು ಸಾಮಾನ್ಯವಾಗಿ ಆಕಾಶದ ತುಂಬಾ ಪದರದಂತೆ ಹರಡಿಕೊಳ್ಳುತ್ತವೆ. ಆದರೆ ಕಡು ಕಪ್ಪು ಮೋಡಗಳು ಭೂಮಿಯಿಂದ ಆಕಾಶದ ಎತ್ತರದ ವರೆಗೆ ಲಂಬವಾಗಿ ನಿಲ್ಲುತ್ತವೆ.

ಈ ಮೋಡಗಳ ಉದ್ದ 6 ಕಿ.ಮೀ ಯಿಂದ 12 ಕಿ.ಮೀ ವರೆಗೂ ಇರುತ್ತವೆ. ಕೆಲ ಸಂದರ್ಭದಲ್ಲಿ ಇವುಗಳ ಉದ್ದ ಇನ್ನಷ್ಟು ಹೆಚ್ಚಾಗಲೂಬಹುದು. ಭೂಮಿಯಿಂದ ಸುಮಾರು 12 ಕಿ.ಮೀ ಎತ್ತರದಲ್ಲಿ ತಾಪಮಾನವು ಸೊನ್ನೆ ಡಿಗ್ರಿಗೆ ಕುಸಿಯುತ್ತದೆ. ಭೂಮಿಯಿಂದ ಸುಮಾರು 4 ಕಿ.ಮೀ ಯಿಂದ 12 ಕಿ.ಮೀ ನಡುವಿನ ಪ್ರದೇಶದಲ್ಲಿ ಆಲಿಕಲ್ಲು ಸೃಷ್ಟಿಯಾಗುತ್ತವೆ.

ಮೋಡಗಳಿಂದ ಮಳೆ ಹನಿಗಳು ಭೂಮಿಗೆ ಬೀಳುವ ಸಂದರ್ಭದಲ್ಲಿ ಈ ಮೋಡಗಳಲ್ಲಿರುವ ಗಾಳಿ ಮೇಲ್ಮುಖವಾಗಿ ಬೀಸುತ್ತಿರುತ್ತದೆ. ಇದರಿಂದಾಗಿ ಮಳೆ ಹನಿಗಳು ಭೂಮಿಗೆ ಬೀಳಲು ಸಾಧ್ಯವಾಗದೆ ಪುನಃ ಮೇಲ್ಮುಖವಾಗಿ ಚಲಿಸುತ್ತವೆ. ಗಾಳಿಯ ಒತ್ತಡಕ್ಕೆ ಅನುಗುಣವಾಗಿ ಮತ್ತು ಅಲ್ಲಿರುವ ಅತಿ ತಂಪು ವಾತಾವರಣದಿಂದಾಗಿ ಹನಿಗಳು ಮಂಜು ಗಡ್ಡೆಗಳಾಗಿ ರೂಪುಗೊಳ್ಳುತ್ತವೆ.

ಇವುಗಳ ತೂಕ ಹೆಚ್ಚಾದಂತೆ ಗಾಳಿಯ ಒತ್ತಡ ಕಡಿಮೆಯಾಗಿ ತಕ್ಷಣ ಭೂಮಿಗೆ ವೇಗವಾಗಿ ಬಂದು ಅಪ್ಪಳಿಸುತ್ತವೆ. ಈವರೆಗೆ ಅತಿ ದೊಡ್ಡ ಆಲಿಕಲ್ಲಿನ ಮಳೆ ಬಾಂಗ್ಲಾದೇಶದಲ್ಲಿ ಸುರಿದಿದೆ. 1986 ರ ಏಪ್ರಿಲ್ 14ರಂದು ಸುರಿದ ಈ ಮಳೆಯಲ್ಲಿ 1.2 ಕೆ.ಜಿ. ತೂಕದ ಆಲಿಕಲ್ಲು ಬಿದ್ದಿತ್ತು. ಇದು ಈವರೆಗೆ ಬಿದ್ದ ಅತೀ ಹೆಚ್ಚು ತೂಕ ಆಲಿಕಲ್ಲು.

ಆಲಿಕಲ್ಲು ಸೇವಿಸಬಹುದಾ?

ವರದಿಗಳ ಪ್ರಕಾರ ಆಕಾಶದಿಂದ ಭೂಮಿಗ ಬೀಳುವ ಆಲಿಕಲ್ಲುಗಳು ವಾತಾವರಣದಲ್ಲಿರುವ ಮಾಲಿನ್ಯವನ್ನು ಅಂಟಿಸಿಕೊಂಡು ಭೂಮಿಗೆ ಬರುತ್ತವೆ. ವಾತಾವರಣದಲ್ಲಿರುವ ಧೂಳಿನ ಕಣಗಳು, ನೈಟ್ರೋಜನ್ ಡೈ ಆಕ್ಸೈಡ್, ಸಲ್ಫರ್ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಅಲ್ಲದೇ ಸೀಸ, ಸತು, ತಾಮ್ರ, ಕಬ್ಬಿಣವನ್ನೂ ಒಳಗೊಂಡು ಇದರಲ್ಲಿ ಭಾರವಾದ ಲೋಹಗಳು ಇರುತ್ತವೆ. ಮಾತ್ರವಲ್ಲ ಹಾನಿಕಾರಕ ಬ್ಯಾಕ್ಟೀರಿಯಾದಿಂದ ಇದನ್ನು ಸೇವಿಸಿದರೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೆಪಟೈಟಿಸ್ಗೂ ಕಾರಣವಾಗಬಹುದು.

1888 ರ ಏಪ್ರಿಲ್ 30ರಂದು ಉತ್ತರ ಪ್ರದೇಶದಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿದ 250 ಕ್ಕೂ ಹೆಚ್ಚು ಜನರು ಮತ್ತು 1600 ಜಾನುವಾರುಗಳು ಸಾವನ್ನಪ್ಪಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.