ಯಾದಗಿರಿ: ‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮೇ 9ರಂದು ನಡೆಯುವ ‘ಬಿಎಸ್ವೈ ಅಭಿಮಾನೋತ್ಸವ’ ಕಾರ್ಯಕ್ರಮಕ್ಕೆ ಯಾದಗಿರಿ ಮತಕ್ಷೇತ್ರದಿಂದ ಸಾವಿರಾರು ಅಭಿಮಾನಿಗಳು ತೆರಳುವರು’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ.ಶರಣಭೂಪಾಲ ರೆಡ್ಡಿ ತಿಳಿಸಿದರು.

‘ಜನರ ದಶಕಗಳ ಬೇಡಿಕೆಯನ್ನು ಅರಿತ ಯಡಿಯೂರಪ್ಪ ಅವರು 2009ರಲ್ಲಿ ಕಲಬುರಗಿ ಜಿಲ್ಲೆಯಿಂದ ಯಾದಗಿರಿಯನ್ನು ವಿಭಜಿಸಿ ರಾಜ್ಯದ 30ನೇ ಜಿಲ್ಲೆಯನ್ನಾಗಿ ಮಾಡಿದರು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸೈಕಲ್ ಏರಿ ಹಳ್ಳಿ-ಹಳ್ಳಿಗಳನ್ನು ಸುತ್ತಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಕಲ್ಪಿಸಿದವರು. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ, ರೈತಬಂಧುವಾದರು. ರೈತರಿಗೆ ಆರ್ಥಿಕ ಶಕ್ತಿ ತುಂಬಲು ಅವರ ಸಾಲ ಮನ್ನಾ ಮಾಡಿದರು’ ಎಂದರು.

‘ಯಾದಗಿರಿ ಜಿಲ್ಲಾ ಕೇಂದ್ರದ ಸಂಕೀರ್ಣಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಿದರು. ಯಾದಗಿರಿ ಅಪಾರ ಕೊಡುಗೆ ನೀಡಿದ್ದು, ನಗರದ ಯಾವುದಾದರು ಒಂದು ರಸ್ತೆ, ವೃತ್ತಕ್ಕೆ ಯಡಿಯೂರಪ್ಪ ಅವರ ಹೆಸರು ಇರಿಸಬೇಕು’ ಎಂದು ಹೇಳಿದರು.

ಮುಖಂಡರಾದ ಭೀಮಣ್ಣಗೌಡ ಕ್ಯಾತನಾಳ, ಶರಣಭೂಪಾಲರೆಡ್ಡಿ ಗುರುಸುಣಗಿ, ಹಣಮಂತ ಇಟಗಿ, ವೀಣಾ ಮೋದಿ, ಸುನಿತಾ ಚವ್ಹಾಣ್, ಭೀಮರೆಡ್ಡಿಗೌಡ ಚಟ್ನಳ್ಳಿ, ಮಲ್ಲನಗೌಡ ಬಿಳ್ಹಾರ, ಶಿವರಾಜ ಪಾಟೀಲ, ಉದಯ ರಾಯಕೋಟಿ, ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ಚಂದ್ರಶೇಖರ್ ಕಡೆಸೂರ್, ಮಲ್ಲು ಕೋಲಿವಾಡ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-30-2048120944

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.