ಯಾದಗಿರಿ: ಬಾಗಿಲು ಹಾಕಿದ್ದ ಲ್ಯಾಬ್ ಒಂದನ್ನು ತೆರೆಯಲು ₹ 50 ಸಾವಿರ ಲಂಚ ಪಡೆದ ಆರೋಪದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಡಿಎಚ್ಒ) ಹಿರಿಯ ಆರೋಗ್ಯ ತಪಾಸಣಾ ಅಧಿಕಾರಿ ಹಾಗೂ ಮಧ್ಯವರ್ತಿಯಾಗಿದ್ದ ಖಾಸಗಿ ಲ್ಯಾಬ್ನ ಟೆಕ್ನಿಷಿಯನ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

ಹಿರಿಯ ಆರೋಗ್ಯ ಅಧಿಕಾರಿ ಸೂಗೂರಪ್ಪ ತಿಪ್ಪಣ್ಣ ಹಾಗೂ ಖಾಸಗಿ ಲ್ಯಾಬ್ ಟೆಕ್ನಿಷಿಯನ್ ಸಂತೋಷ ಶರಣಪ್ಪಗೌಡ ಲಂಚ ಪಡೆದ ಆರೋಪಿಗಳು. ಶ್ರೀ ಸಾಯಿ ರಾಮ್ ಡೈಗ್ನೋಸ್ಟಿಕ್ ಲ್ಯಾಬ್ನ ರಾಹುಲ್ ಸಾಬಣ್ಣ ಕೊಲ್ಲೂರು ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಪ್ರಕರಣ ಒಂದರಲ್ಲಿ ರಾಹುಲ್ ಸಾಬಣ್ಣ ಅವರ ಶ್ರೀಸಾಯಿ ರಾಮ್ ಡೈಗ್ನೋಸ್ಟಿಕ್ ಲ್ಯಾಬ್ಗೆ ಬೀಗ ಹಾಕಲಾಗಿತ್ತು. ಲ್ಯಾಬ್ನ ಬೀಗ ತೆಗೆಯಲು ಆರೋಪಿಯು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಧ್ಯವರ್ತಿ ಮೂಲಕ ₹50 ಸಾವಿರ ಲಂಚದ ಹಣವನ್ನು ಪಡೆಯುವಾಗ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್. ಇನಾಮದಾರ್, ಇನ್ಸ್ಪೆಕ್ಟರ್ ಸಿದ್ದರಾಯ ಬಳ್ಳೂರಗಿ ಅವರಿದ್ದ ತಂಡವು ದಾಳಿ ಮಾಡಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-30-939037685

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.