ಯಾದಗಿರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲೆಂದು ಪ್ರಾರ್ಥಿಸಿ ನಗರದ ಅಮೃತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

‘ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದಾಗ ಖಂಡ್ರೆ ಅವರು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಸರ್ವ ಸಮಾಜದ ಅಭಿವೃದ್ಧಿ ಕಾಳಜಿ ವಹಿಸಿದ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು’ ಎಂದು ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

ಈ ವೇಳೆ ನೀಲಕಂಠ ಶೀಲವಂತ ಮಾತನಾಡಿ, ‘ಖಂಡ್ರೆ ಅವರಿಗೆ ಡಿಸಿಎಂ ಹುದ್ದೆ ನೀಡಿದರೆ ವೀರಶೈವ ಸಮುದಾಯಕ್ಕೆ ನ್ಯಾಯ ನೀಡಿದಂತಾಗುತ್ತದೆ. ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲ ಅವರ ನಂತರ ಕಾಂಗ್ರೆಸ್ನಲ್ಲಿ ಈವರೆಗೆ ವೀರಶೈವರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ’ ಎಂದು ಹೇಳಿದರು.

ಜಿಲ್ಲಾ ಲಿಂಗಾಯತ ಬಣಜಿಗ ಸಮಾಜದ ಅಧ್ಯಕ್ಷ ಬನ್ನಪ್ಪ ಸುಂಕದ, ಗಂಗಾಧರ ಜಿವಣಗಿ, ಪ್ರಕಾಶ ಬಲ್ಕಲ್, ಶಿವಕುಮಾರ ಇಡ್ಲೂರು, ವಿಶ್ವನಾಥ ಪೊಲೀಸ್ ಪಾಟೀಲ, ಬನದೇಶ ಗವಿಮಠ, ಮಹೇಶ ಜಗನ್ನಾಥ, ಅನೀಲಕುಮಾರ ಲೇವಡಿ, ನಾಗಣ್ಣ ಯಾಟಕಲ್, ಭೀಮಣ್ಣಗೌಡ ಬಿರಾದರ, ಸತೀಶ ಪಸಾರ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ, ಸಂಗಣ್ಣಗೌಡ, ಸೂಗಪ್ಪ ಚಾಮಾ, ಅಶೋಕ ಮೊಳಕೇರಿ, ಸಂಗು ಗುಳಗಿ, ಮಲ್ಲಿಕಾರ್ಜುನ ಜಕಾತಿ, ಬನಪ್ಪ ತಡಿಬಿಡಿ, ಬಂದೀಶ ಉಟ್ಕೂರ, ಶರಣು ಪಡಶೆಟ್ಟಿ, ಪ್ರಕಾಶ ಬಲ್ಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-30-975413543

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.