ಯಲಬುರ್ಗಾ: ‘ಬಿಜೆಪಿಯ ಸಿದ್ದಾಂತ ಮೆಚ್ಚಿ ಕೋಟ್ಯಂತರ ಜನರು ಪಕ್ಷಕ್ಕೆ ನೋಂದಾಯಿಸಿದ ಪರಿಣಾಮ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿದೆ. ಇದರ ಹಿರಿಮೆ ಕಾರ್ಯಕರ್ತರಿಗೆ ಸಲ್ಲುತ್ತದೆ’ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮುಧೋಳ, ಚಿಕ್ಕಮ್ಯಾಗೇರಿ ಹಾಗೂ ಯಲಬುರ್ಗಾ ವ್ಯಾಪ್ತಿಯ ಮಹಾಶಕ್ತಿ ಕೇಂದ್ರ ಬಿಎಲ್ಎ–2 ಹಾಗೂ ಬೂತ್ ಅಧ್ಯಕ್ಷರ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಹಿಂದುಳಿದವರ ಹೆಸರಲ್ಲಿ ಅಧಿಕಾರಕ್ಕೆ ಬರುತ್ತಿದ್ದ ಕಾಂಗ್ರೆಸ್ ನಂತರ ಅವರ ಅಭಿವೃದ್ದಿಯನ್ನು ಸಂಪೂರ್ಣ ಕಡೆಗಣಿಸಿದೆ. ಕಳೆದ 12ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವವೇ ಮೆಚ್ಚುವಂತಹ ಆಡಳಿತ ಕೊಟ್ಟಿದೆ. ಮುಂದೆಯೇ ಇದಕ್ಕಿಂತಲೂ ಉತ್ತಮ ರೀತಿಯ ಜನಪರ ಆಡಳಿತವನ್ನು ಕೊಡಲಿದೆ ಎಂದರು.

‘ಪ್ರತಿಯೊಬ್ಬರು ತಮ್ಮದೇ ಆದ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಾ ಬಂದರೆ ಹಳ್ಳಿಯಿಂದ ದಿಲ್ಲೆಯವರೆಗೂ ಬಿಜೆಪಿಯದ್ದೇ ಕಾರುಬಾರು ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಪ್ರತಿ ಬೂತ್ನ ಪದಾಧಿಕಾರಿಗಳು ಪಕ್ಷ ಸಂಘಟನೆಯಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕು’ ಎಂದರು.

ಯಲಬುರ್ಗಾ ಮಂಡಳ ಅಧ್ಯಕ್ಷ ಮಾರುತಿ ಗಾವರಾಳ, ವೀರಣ್ಣ ಹುಬ್ಬಳ್ಳಿ, ಬಸವಲಿಂಗಪ್ಪ ಭೂತೆ, ಶಿವಶಂಕರ ದೇಸಾಯಿ ಮಾತನಾಡಿದರು.

ಮುಖಂಡರಾದ ಶಕುಂತಲಾದೇವಿ ಮಾಲಿಪಾಟೀಲ, ಬಸವರಾಜ ಗೌರ, ತಾಪಂ ಮಾಜಿ ಸದಸ್ಯ ಶರಣಪ್ಪ ಈಳಗೇರ, ಮಹಿಳಾ ಘಟಕದ ಅಧ್ಯಕ್ಷೆ ಸಮತೋಷಾಮಜಿ ಜೋಷಿ, ಶರಣಪ್ಪ ಬಣ್ಣದಬಾವಿ, ರತನ್ ದೇಸಾಯಿ, ಅಮರೇಶ ಹುಬ್ಬಳ್ಳಿ, ಶಿವಕುಮಾರ ನಾಗಲಾಪುರುಮಠ, ಅಯ್ಯನಗೌಡ ಕೆಂಚಮ್ಮನವರ, ರವಿ ಕಲಬುರ್ಗಿ, ಕಲ್ಲಪ್ಪ ಕರಮುಡಿ ಸೇರಿ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-35-1652882840

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.