ಹೊರ್ತಿ: ‘ಇಂಡಿ ಮತಕ್ಷೇತ್ರದ ಸರಳ, ಸಜ್ಜನಿಕ ರಾಜಕಾರಣಿ ಮತ್ತು ದೂರದೃಷ್ಟಿಯುಳ್ಳ ನಾಯಕ ಶಾಸಕ ಯಶವಂತರಾಯಗೌಡ ವಿ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಚಡಚಣ ತಾಲ್ಲೂಕಿನ ಕಾತ್ರಾಳ ಗ್ರಾಮದ ಕಾಂಗ್ರೆಸ್ ಯುವ ಮುಖಂಡ ಮತ್ತು ಶ್ರೀಧರ ಮಂಗಳೂರ ಅವರು ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಯಶವಂತರಾಯಗೌಡರು ಸತತ ಮೂರು ಬಾರಿ ಇಂಡಿ ಶಾಸಕರಾಗಿ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಅವರ ಈ ಜನಪ್ರಿಯತೆಯ ಹಿಂದೆ ಇರುವ ಪ್ರಮುಖ ಕಾರಣ ಅಭಿವೃದ್ಧಿಯೇ ಆಗಿದೆ. ವಿದ್ಯಾವಂತ ಮತ್ತು ದೂರದೃಷ್ಟಿಯುಳ್ಳ ನಾಯಕರಾದ ಅವರ ಮಾತು ಮತ್ತು ಕೃತಿಯಲ್ಲಿ ಏಕರೂಪತೆಯನ್ನು ಹೊಂದಿದ್ದು, ಭೀಮಾಶಂಕರ ಖಾರ್ಖಾನೆಯ ಪ್ರಾರಂಭ, ಕೆರೆ ತುಂಬುವ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನ, ಇಂಡಿ ಲಿಂಬೆಗೆ ಜಿ ಐ ಟ್ಯಾಗ್ ದೊರಕಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಅವಕಾಶ ಕಲ್ಪಿಸಿರುವುದು ಸೇರಿದಂತೆ ಅನೇಕ ಐತಿಹಾಸಿಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಇಂಡಿ: ಇಂಡಿ ಮತಕ್ಷೇತ್ರದಿಂದ 3 ಬಾರಿ ಗೆದ್ದು ಶಾಸಕರಾದ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಅಥವಾ ಮಂತ್ರಿ ಸ್ಥಾನ ನೀಡಬೇಕು ಎಂದು ಇಂಡಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರ ನಾಯಕ ಆಗ್ರಹಿಸಿದ್ದಾರೆ.

‘ಯಶವಂತರಾಯಗೌಡ ಪಾಟೀಲರು ಸಿ.ಎಂ ಸಿದ್ದರಾಮಯ್ಯ ಸಂಪುಟದಲ್ಲೇ (ಮೂರು ವರ್ಷಗಳ) ಹಿಂದೆಯೇ ಮಂತ್ರಿ ಸ್ಥಾನ ಸಿಗಬೇಕಾಗಿತ್ತು. ಆದರೂ ಅವರು ಅಸಮಧಾನಗೊಳ್ಳಲಿಲ್ಲ. ಮುಖ್ಯಮಂತ್ರಿ ಉಪಮುಖ್ಯಂತ್ರಿಗಳ ಮನಸ್ಸು ಗೆದ್ದು, ಜಾಣ್ಮೆಯಿಂದ ಸಾವಿರಾರು ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮೂಲಕ ರಾಜಕಾರಣಕ್ಕೆ ಬಂದಿರುವ ಯಶವಂತರಾಯಗೌಡರಿಗೆ ಸರ್ಕಾರಿ ಆಡಳಿತ ಯಂತ್ರವನ್ನು ಜಾಣ್ಮೆಯಿಂದ ಕೆಲಸ ಮಾಡಿಸಿಕೊಳ್ಳುವ ಎದೆಗಾರಿಕೆ ಇದೆ. ದಕ್ಷತೆ, ಬದ್ಧತೆ, ಅಧ್ಯಯನಶೀಲತೆ ಗುಣವುಳ್ಳ ಯಶವಂತರಾಯಗೌಡರಿಗೆ ಹೊಸ ಸಚಿವ ಸಂಪುಟದಲ್ಲಿ ಮಂತ್ರಿ ಅಥವಾ ಸಚಿವ ಸ್ಥಾನ ನೀಡಬೇಕು’ ಎಂದು ಶೇಖರ ನಾಯಕ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-26-920604076

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.