ಚಿತ್ರದುರ್ಗ: ನಾಡಿನ ಉತ್ತರ–ದಕ್ಷಿಣ ಬೆಸೆಯುವ ಮಧ್ಯ ಕರ್ನಾಟಕದ ಕೋಟೆ ನಾಡನ್ನು ಕಾವಿಯ ರಂಗು, ಕೇಸರಿಯ ಗುಂಗು ಆವರಿಸಿಕೊಂಡು,

ಮಾಜಿ ಮುಖ್ಯಮಂತ್ರಿ, ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿಮಾನದ ಮಳೆಯಲ್ಲಿ ತೋಯಿಸಿತು. ಬಿಸಿಲ ಝಳ ಲೆಕ್ಕಿಸದೇ

ಸಾಗರೋಪಾದಿಯಲ್ಲಿ ಹರಿದು ಬಂದ ಜನಸ್ತೋಮ ಕರುನಾಡಿಗೆ ಮತ್ತೊಮ್ಮೆ ‘ಕಮಲ’ ಮುಡಿಗೇರಿಸುವ ಸಂಕಲ್ಪವನ್ನು ಮಾಡಿತು.

ಯಡಿಯೂರಪ್ಪನವರು ಚುನಾವಣಾರಾಜಕೀಯದಲ್ಲಿ 50 ವರ್ಷ ಪೂರ್ಣ ಗೊಳಿಸಿದ ಸಂದರ್ಭದಲ್ಲಿ ಅವರ ಕುಟುಂಬಸ್ಥರು, ಅಭಿಮಾನಿಗಳು ಚಿತ್ರದುರ್ಗದ ಮಾದಾರ ಚನ್ನಯ್ಯ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬಿಎಸ್ವೈ ಅಭಿಮಾನೋತ್ಸವ’ವು 2028ರ ವಿಧಾನಸಭೆ ಚುನಾವಣೆಗೆ ಕಹಳೆಯನ್ನೂ ಮೊಳಗಿಸಿತು.

ಜಾತಿಯ ಮಿತಿಯಲ್ಲದೇ ನೂರಾರುಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ ಗಳು ಕಾವಿಯ ಬಣ್ಣವನ್ನು ತುಂಬಿಸಿದರೆ, ಕೇಸರಿ ಪತಾಕೆಗಳು ನಗರದುದ್ದಕ್ಕೂರಾರಾಜಿಸುತ್ತಿದ್ದವು. ‘ಬಿಎಸ್ವೈ ಬಿಎಸ್ವೈ’ ಘೋಷಣೆಗಳು ಚಿತ್ರದುರ್ಗದ ಕೋಟೆಯಲ್ಲಿ ಅನುರಣಿಸುತ್ತಲೇ ಇದ್ದವು. ಯಡಿಯೂರಪ್ಪ ಅಭಿಮಾನಿಗಳು ನಾಡಿನ ನಾಲ್ಕೂ ದಿಕ್ಕಿನಿಂದ ಬೆಟ್ಟದಂತೆ ಬಂದಿಳಿದಿದ್ದರು.

ಸಭೆಯ ಪ್ರಮುಖ ಆಕರ್ಷಣೆ ಆಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, 2028ರ ಚುನಾವಣೆಯ ತಯಾರಿ ಈ ನೆಲದಿಂದಲೇ ಆರಂಭವಾಗಲಿ ಎಂದು ಕರೆ ಕೊಟ್ಟರು.

ಅಪೂರ್ವ ಮೈಲುಗಲ್ಲಿನ ಈ ಅಭಿಮಾನೋತ್ಸವದಲ್ಲಿ ಹಾಜರಾಗಲು ಸಾಧ್ಯವಾಗಿಲ್ಲ. ಜನಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿಸಿಕೊಂಡ ನಾಯಕನನ್ನು ಗೌರವಿಸಲು ನೆರೆದಿರುವ ಜನಸ್ತೋಮದೊಂದಿಗೆ ನನ್ನ ಮನಸ್ಸು ಬೆರೆತುಕೊಂಡಿದೆ
ಪ್ರಧಾನಿ ನರೇಂದ್ರ ಮೋದಿ ಸಂದೇಶ

ಮೋದಿ ಬರ್ತಾರೆ, ಅಧಿಕಾರಕ್ಕೆ ತರ್ತೇವೆ: ಅಮಿತ್ ಶಾ

‘ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತಿರಬಹುದು. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಾರೆ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ 2028ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದರು. ‘2014ರಲ್ಲಿ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕರ್ನಾಟಕದಿಂದ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಲು ನಿರ್ಧರಿಸಿದ್ದೆವು. ಆದರೆ, ಅವರು ತಿರಸ್ಕರಿಸಿ, ರಾಜ್ಯ ರಾಜಕಾರಣದಲ್ಲೇ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದರು’ ಎಂದರು. ‘ಕೇಂದ್ರ ಸಚಿವ ಸಂಪುಟ ರಚನೆ ಮಾಡುವಾಗ ಗುಜರಾತ್ ಭವನಕ್ಕೆ ಯಡಿಯೂರಪ್ಪ ಅವರಿಂದ ಒಂದು ಪತ್ರ ಬಂತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವುದಕ್ಕಾಗಿ ಪಕ್ಷ ಸಂಘಟನೆ ಮಾಡುತ್ತಿದ್ದು, ಕೇಂದ್ರ ಸಚಿವ ಸ್ಥಾನ ಬೇಡ ಎಂದು ಅವರು ಬರೆದಿದ್ದರು’ ಎಂದರು.

ಕಾರ್ಯಕರ್ತರು ಕೊಟ್ಟ ಶಕ್ತಿ: ಯಡಿಯೂರಪ್ಪ

‘ಐವತ್ತು ವರ್ಷಗಳಿಂದ ನಾಡಿನ ಜನರ ಸೇವೆಗೆ ಜೀವನ ಸಮರ್ಪಣೆ ಮಾಡಿಕೊಂಡು ಬಂದಿದ್ದೇನೆ. ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಬಂದವನಲ್ಲ. ಅನಿರೀಕ್ಷಿತವಾಗಿ ತಿರುವುಗಳ ನಡುವೆ ಬೆಳೆದೆ. ಅಭಿಮಾನೋತ್ಸವದ ಸಾಗರದಲ್ಲಿ ಜನರು ನನ್ನನ್ನು ತೇಲಿಸಿದ್ದಾರೆ’ ಎಂದು ಹೇಳುತ್ತಾ ಯಡಿಯೂರಪ್ಪ ಗದ್ಗದಿತರಾದರು.

ಅಭಿಮಾನೋತ್ಸವದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ‘ಹೋರಾಟ, ಸಂಘಟನೆಯನ್ನು ತಪಸ್ಸು ಎಂದು ಸ್ವೀಕರಿಸಿದ್ದೆ. ಆರ್ಎಸ್ಎಸ್ ಸಂಸ್ಕಾರ ನೀಡಿತು. ಅಧಿಕಾರಕ್ಕಾಗಿ ಎಂದೂ ಹೋರಾಟ ಮಾಡಲಿಲ್ಲ. ಮುಖ್ಯಮಂತ್ರಿ ಹುದ್ದೆಯನ್ನು ಕನಸಿನಲ್ಲೂ ಕಂಡಿರಲಿಲ್ಲ. ಸಂಘಟನೆ, ಕಾರ್ಯಕರ್ತರ ಶ್ರಮ, ಬೆಂಬಲದಿಂದಾಗಿ ಶಿಕಾರಿಪುರದಿಂದ ವಿಧಾನಸೌಧದ ಮೂರನೇ ಮಹಡಿ ಏರಿದೆ’ ಎಂದು ಸ್ಮರಿಸಿದರು.

‘ಜನರಿಗಾಗಿ ಹೋರಾಟ ಮಾಡಿದ್ದೇನೆ. ಕೊನೆ ಉಸಿರು ಇರುವವರೆಗೆ ವಿರಮಿಸುವುದಿಲ್ಲ. ದೇವರು ಶಕ್ತಿ ಕೊಟ್ಟಿರುವವರೆಗೆ ಜನರಿಗಾಗಿ ಕೆಲಸ ಮಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.