ನ್ಯೂ ಜೆರ್ಸಿ: ಬನ್ನಂಜೆ ಗೋವಿಂದಾಚಾರ್ಯರು ಮಾಧ್ವಸಂಪ್ರದಾಯದವರಾಗಿದ್ದರೂ ಪ್ರಖರ ಪಾಂಡಿತ್ಯ, ಆಳವಾದ ಅಧ್ಯಯನ ಮತ್ತು ಜ್ಞಾನಪ್ರಸರಣಗಳಿಂದ ತ್ರಿಮತಸ್ಥರಿಗೂ ಮಾನ್ಯರಾಗಿದ್ದವರು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಈ ಮೂರೂ ಚಿಂತನೆಗಳನ್ನು ಅವರು ವಸ್ತುನಿಷ್ಠವಾಗಿ ಮತ್ತು ಸಹಿಷ್ಣುತೆಯಿಂದ ಅರಿತುಕೊಂಡು ಇತರರಿಗೂ ಬೋಧಿಸಿದವರು. ಭಗವಂತನ ನಲ್ನುಡಿ ಎಂದು ಭಗವದ್ಗೀತೆಗೆ ಅವರು ಬರೆದ ವ್ಯಾಖ್ಯಾನ ಅನನ್ಯವಾದುದು. ಗೋವಿಂದಾಚಾರ್ಯರು ಹಾಕಿಕೊಟ್ಟ ಜೀವನಾದರ್ಶ ಮತ್ತು ಜ್ಞಾನಪಿಪಾಸುತನ ನಮಗೆಲ್ಲರಿಗೂ ಅನುಕರಣೀಯ ಎಂದು ಡಾ. ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.

ಮೇ 9ರಂದು ನ್ಯೂ ಜೆರ್ಸಿಯಲ್ಲಿರುವ ಪುತ್ತಿಗೆಮಠ ಶ್ರೀ ಕೃಷ್ಣವೃಂದಾವನದ ಆನಂದತೀರ್ಥ ಮಂಟಪ ಸಭಾಂಗಣದಲ್ಲಿ ನಡೆದ ‘ಬನ್ನಂಜೆ-90 ವಿಶ್ವನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬನ್ನಂಜೆಯವರು ಬರೆದ ಕೆಲವು ಭಾವಗೀತೆಗಳ ಗಾಯನದ ಹಾಡುಗಬ್ಬವನ್ನು ಕವಿತಾ ಉಡುಪ ನಡೆಸಿಕೊಟ್ಟರು.

ರಮೇಶ್ ಲಕ್ಷ್ಮೀಶನ್ ನಿರ್ದೇಶನದಲ್ಲಿ ದ್ವಾದಶಸ್ತೋತ್ರದ ಕನ್ನಡ ಅವತರಣಿಕೆಯ ವೃಂದಗಾನ, ದೀಪ್ತಿ ಗಡ್ ನಿರ್ದೇಶನದಲ್ಲಿ ಮಕ್ಕಳು ಪ್ರಸ್ತುತಪಡಿಸಿದ ‘ಉಡುಪಿಯ ಕಂಡೀರಾ ಕೃಷ್ಣನ ಕಂಡೀರಾ’ ಗಾಯನ, ಇಂಗ್ಲಿಷ್ ವ್ಯಾಖ್ಯಾನ ಮತ್ತು ಭಗವದ್ಗೀತೆಯ ಶ್ಲೋಕಗಳನ್ನೂ ಒಳಗೊಂಡಿದ್ದ ವಿಶೇಷ ಪ್ರಸ್ತುತಿ ನಡೆಯಿತು.

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ವಿಡಿಯೊ ಸಂದೇಶದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಬನ್ನಂಜೆಯವರ ಪುತ್ರಿಯರಾದ ವೀಣಾ ಬನ್ನಂಜೆ ಮತ್ತು ಕವಿತಾ ಉಡುಪ ಹಾಗೂ ಪುತ್ತಿಗೆ ಮಠದ ಆಡಳಿತಾಧಿಕಾರಿ ಪ್ರಸನ್ನ ಆಚಾರ್ಯ, ನ್ಯೂಯಾರ್ಕ್ನ ಪ್ರೊ.ಪಿ.ಆರ್.ಮುಕುಂದ್, ನ್ಯೂಜೆರ್ಸಿಯ ದೀಪಕ್ ಶರ್ಮ, ಕೆನಡಾದ ಬಿ.ಎಂ.ರಮೇಶ್, ವಾಷಿಂಗ್ಟನ್ ಡಿಸಿಯ ಜಯಕೃಷ್ಣ ನೆಲಮಂಗಲ, ಅಟ್ಲಾಂಟಾದ ಸುಪರ್ಣಾ ಪೊಯಪಾಕ್ಕಂ ಮುಂತಾದವರು ಉಪಸ್ಥಿತರಿದ್ದರು.

ಬನ್ನಂಜೆ ಗೋವಿಂದಾಚಾರ್ಯರ 90ನೇ ಜಯಂತಿ ಸಂದರ್ಭದಲ್ಲಿ ವರ್ಷದುದ್ದಕ್ಕೂ ಕರ್ನಾಟಕದ ವಿವಿದೆಡೆಗಳಲ್ಲಿ‘ಬನ್ನಂಜೆ ವಿಶ್ವನಮನ’ ಕಾರ್ಯಕ್ರಮ ನಡೆದಿತ್ತು. ಇದೀಗ ಅಮೆರಿಕದಲ್ಲೂ ಕಾರ್ಯಕ್ರಮ ಆಯೋಜನೆಯಾಗುತ್ತಿದೆ. ನ್ಯೂಜೆರ್ಸಿಯ ನಂತರ ಮೇ 16ರಂದು ಹ್ಯೂಸ್ಟನ್, ಮೇ 17ರಂದು ಫೀನಿಕ್ಸ್, ಮತ್ತು ಮೇ 26ರಂದು ಸ್ಯಾನ್ ಹೋಸೆಯಲ್ಲಿಯೂ ಕಾರ್ಯಕ್ರಮ ನಡೆಯಲಿದೆ.

ವರದಿ: ಶ್ರೀವತ್ಸ ಜೋಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.