ದೋಹಾ: ಕರ್ನಾಟಕ ಸಂಘ ಕತಾರ್ನ 2026–2028 ಅವಧಿಗೆ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧಿಕಾರ ಸ್ವೀಕರಿಸಿದ್ದಾರೆ. ಇದರೊಮದಿಗೆ, ಕತಾರ್ನ ಕನ್ನಡ ಸಮುದಾಯದಲ್ಲಿ ಹೊಸದೊಂದು ಅಧ್ಯಾಯ ಶುರುವಾದಂತಾಗಿದೆ.

'ವಿನಯ ಹಾಗೂ ಬದ್ಧತೆಯಿಂದ ಜವಾಬ್ದಾರಿ ಸ್ವೀಕರಿಸುತ್ತೇನೆ' ಎಂದು ತಿಳಿಸಿರುವ ಸುಬ್ರಹ್ಮಣ್ಯ, ‘ಸಮುದಾಯಕ್ಕೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಗೌರವದ ಸಂಗತಿ‘ ಎಂದಿದ್ದಾರೆ.

ನಿಕಟ ಪೂರ್ವ ಅಧ್ಯಕ್ಷ ರವಿ ಶೆಟ್ಟಿ ಮತ್ತು 2024ರಿಂದ 2026ರ ವರೆಗೆ ಇದ್ದ ಆಡಳಿತ ಸಮಿತಿಯ ಕೊಡುಗೆಯನ್ನೂ ಸ್ಮರಿಸಿ, ಸಂಘದ ಅಭಿವೃದ್ದಿಗೆ ಬಲವಾದ ಅಡಿಪಾಯ ಹಾಕಿಕೊಟ್ಟದ್ದಕ್ಕೆ ಶ್ಲಾಘಿಸಿದ್ದಾರೆ.

ಸಂಘದ ಎಲ್ಲಾ ಸಮಿತಿ ಸದಸ್ಯರು, ಸಮುದಾಯ ಮುಖಂಡರು ಮತ್ತು ಸದಸ್ಯರ ನಿರಂತರ ಸೇವೆ ಹಾಗೂ ಸಮರ್ಪಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಅವಧಿಯಲ್ಲಿ ಕನ್ನಡ ಸಮುದಾಯದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು, ಸಂಸ್ಕೃತಿಯನ್ನು ಉತ್ತೇಜಿಸುವುದು ಮತ್ತು ಎಲ್ಲರಿಗೂ ಅರ್ಥಪೂರ್ಣ ಅವಕಾಶಗಳನ್ನು ಸೃಷ್ಟಿಸುವುದು ತಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

'ಒಗ್ಗಟ್ಟಿನಿಂದ ಮತ್ತು ಉದ್ದೇಶಪೂರ್ವಕವಾಗಿ ನಾವು ಮುಂದೆ ಸಾಗಿದರೆ, ಇನ್ನಷ್ಟು ಮೈಲಿಗಲ್ಲುಗಳನ್ನು ಸಾಧಿಸಬಹುದು' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸಂಘ ಕತಾರ್, ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಾಯಕ ಸಂಸ್ಥೆಯಾಗಿದ್ದು, ಕತಾರ್ನ ಕನ್ನಡಿಗರ ಪ್ರಮುಖ ವೇದಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.