ಸೌದಿ ಅರೇಬಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ಸ್ವಯಂಸೇವಕ ವಿಭಾಗವಾದ ಹಜ್ ವಾಲೆಂಟಿಯರ್ ಕೋರ್ (ಎಚ್ ವಿ ಸಿ) ಈ ಬಾರಿಯ ಹಜ್ ಯಾತ್ರೆಯ ಸಂದರ್ಭದಲ್ಲೂ ಯಾತ್ರಾರ್ಥಿಗಳಿಗೆ ಸೇವೆಗಳನ್ನು ಒದಗಿಸಿದೆ.

ಕರ್ನಾಟಕದಿಂದ ಆಗಮಿಸುವ ಹಜ್ ಯಾತ್ರಿಕರಿಗೆ ಮಾರ್ಗದರ್ಶನ, ವಸತಿ ಕೇಂದ್ರಗಳ ಮಾಹಿತಿ, ದಾರಿ ತಪ್ಪಿದವರಿಗೆ ನೆರವು, ಲಗೇಜ್ ಸಾಗಣೆ ಸಹಾಯ, ನೀರು ಮತ್ತು ಆಹಾರ ವಿತರಣೆ ಸೇರಿದಂತೆ ಹಲವು ಸೇವೆಗಳನ್ನು ತಂಡ ನಿರ್ವಹಿಸುತ್ತಿದೆ.

ಮದೀನಾ ಮತ್ತು ಮೆಕ್ಕಾದ ಜಿದ್ದಾ ವಿಮಾನ ನಿಲ್ದಾಣಗಳಿಂದ ಬರುವ ಯಾತ್ರಾರ್ಥಿಗಳನ್ನು ಸ್ವಾಗತಿಸುವ ತಂಡವು ಹಜ್ ಕರ್ಮಗಳ ಪೂರ್ಣ ಧಾರ್ಮಿಕ ವಿಧಿ ವಿಧಾನಗಳ ಪ್ರಕ್ರಿಯೆಗಳಲ್ಲಿ 24 ಗಂಟೆಗಳ ಕಾಲ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಆರೋಗ್ಯ ಸಮಸ್ಯೆ ಎದುರಾದ ಯಾತ್ರಿಕರಿಗೆ ಆಸ್ಪತ್ರೆ ಸಂಪರ್ಕ ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯ ವ್ಯವಸ್ಥೆಯನ್ನೂ ಒದಗಿಸಲಾಗುತ್ತಿದೆ.

ಲಕ್ಷಾಂತರ ಯಾತ್ರಾರ್ಥಿಗಳು ಸೇರುವ ಸಂಧರ್ಭ ಪ್ರತ್ಯೇಕವಾಗಿ ಕನ್ನಡಿಗ ವಯೋವೃದ್ಧ ಮತ್ತು ಮಹಿಳೆಯರಿಗೆ ಕನ್ನಡ, ಉರ್ದು ಹಾಗೂ ಮಲಯಾಳ ಭಾಷೆಗಳಲ್ಲಿ ಸ್ವಯಂಸೇವಕರು ಮಾಹಿತಿ ನೀಡುತ್ಯಾರೆ. ಸೌದಿ ಸರ್ಕಾರ ಕಲ್ಪಿಸಿರುವ ತಾತ್ಕಾಲಿಕ ವಸತಿ ಸ್ಥಳಕ್ಕೆ ತಲುಪಲು ಯಾತ್ರಾರ್ಥಿಗಳಿಗೆ ಸಹಾಯ ಮಾಡುತ್ತಾರೆ.

ಈ ತಂಡದ ಸೇವೆಯನ್ನು ಗುರುತಿಸಿ ಸೌದಿ ಅರೇಬಿಯಾದ ಆರೋಗ್ಯ ಇಲಾಖೆ ಪ್ರಶಂಸಾ ಪತ್ರವನ್ನೂ ನೀಡಿದೆ. ಕೆಸಿಎಫ್ ಹತ್ತು ವರ್ಷಗಳಿಂದ 'ಗಲ್ಫ್ ಇಶಾರ' ಕನ್ನಡ ಮಾಸಿಕವನ್ನು ಪ್ರಕಟಿಸುತ್ತಿದೆ.

ವರದಿ: ಇಕ್ಬಾಲ್ ಕಾಜೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.