ಸಾಗರ: ‘ಇಲ್ಲಿನ ಜಾಮಿಯಾ ಮಸೀದಿ ಹಾಗೂ ಮಜ್ಲಿಸೆ–ಎ–ಮುಂತಜಿಮಾ ಮುಸ್ಲಿಮಿನ್ ಸಮಿತಿಯು ವಕ್ಫ್ ಮಂಡಳಿಯ ನಿಯಮ ಮೀರಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಆರೋಪಿಸಿ ಮುಸ್ಲಿಂ ಸಮುದಾಯದವರು ಗುರುವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

‘ವಕ್ಫ್ ಮಂಡಳಿಯ ನಿಯಮಗಳ ಪ್ರಕಾರ ಒಂದು ಸಮಿತಿ ಮೂರು ವರ್ಷಗಳವರೆಗೆ ಆಡಳಿತ ನಡೆಸಬಹುದು. ಆದರೆ ಇಲ್ಲಿನ ಜಾಮಿಯಾ ಮಸೀದಿ ಹಾಗೂ ಮಜ್ಲಿಸೆ– ಎ– ಮುಂತಜಿಮಾ ಮುಸ್ಲಿಮಿನ್ ಸಮಿತಿ ಪದಾಧಿಕಾರಿಗಳು ಅವಧಿ ಮುಗಿದಿದ್ದರೂ ಮುಂದುವರಿದಿದ್ದಾರೆ’ ಎಂದು ದೂರಲಾಗಿದೆ.

‘ಜಾಮಿಯಾ ಮಸೀದಿ ಹಾಗೂ ಮಜ್ಲಿಸೆ–ಎ– ಮುಂತಜಿಮಾ ಮುಸ್ಲಿಮಿನ್ ಸಮಿತಿ ವತಿಯಿಂದ ದೊಡ್ಡಮಟ್ಟದ ಅವ್ಯವಹಾರ ನಡೆದಿರುವ ಆರೋಪಗಳಿವೆ. ಈ ಕುರಿತು ಸಮಗ್ರ ತನಿಖೆಯಾಗಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

‘ಈಗಿರುವ ಸಮಿತಿಯ ಅವಧಿ ಮುಗಿದಿರುವುದರಿಂದ ನೂತನ ಸಮಿತಿ ರಚನೆ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡಬೇಕು’ ಎಂದು ಆಗ್ರಹಿಸಲಾಗಿದೆ.

ಪ್ರಮುಖರಾದ ತೌಫಿಕ್ ಅಹ್ಮದ್, ಮುಸೂದ್ ಅಹ್ಮದ್, ಜಮೀರ್ ಅಹ್ಮದ್ ಖಾನ್, ಮುದಸಿರ್ ಅಹ್ಮದ್ ಖಾನ್, ಸೈಯದ್ ಜುಲ್ಫಿ, ಬಿಲಾಲ್ ಅಹ್ಮದ್, ಅಸಾದುಲ್ಲಾ, ಜಬೀವುಲ್ಲಾ, ನವೀದ್ ಅಹ್ಮದ್, ಅನೀಸ್ ಅಹ್ಮದ್ ಖಾನ್, ಜಿಶಾನ್, ತಾಹೀರ್ ಅಹ್ಮದ್, ಅಜ್ಮಲ್ ಅಲಿಖಾನ್, ಆಸೀಫ್ ಅಹ್ಮದ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260307-42-1474376939

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.