ಹೈದರಾಬಾದ್: ಹೈದರಾಬಾದ್ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದ ಪ್ರಯಾಣಿಕರ ಲಾಂಜ್ ಬಳಿ ಬೀದಿನಾಯಿಯೊಂದು ಕಾಣಿಸಿಕೊಂಡಿದೆ.

ವಿಮಾನ ನಿಲ್ದಾಣದಲ್ಲಿ ಬೀದಿನಾಯಿ ಕಾಣಿಸಿಕೊಂಡಿರುವ ವಿಡಿಯೊ ಸಾಕಷ್ಟು ಗಮನ ಸೆಳೆದಿದ್ದು ಸಾರ್ವಜನಿಕರು ಆಘಾತ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭದ್ರತೆಯ ಕಣ್ತಪ್ಪಿಸಿ ಒಳ ಬಂದಿದ್ದ ನಾಯಿ, ಪ್ರಯಾಣಿಕರ ಲಾಂಜ್ನಲ್ಲಿ ಟೇಬಲ್ ಮೇಲೆ ಬಿದ್ದಿದ್ದ ತಿಂಡಿ ತಿನಿಸುಗಳನ್ನು ತಿಂದಿದೆ. ಬಳಿಕ ಭದ್ರತಾ ಅಧಿಕಾರಿಗಳು ನಾಯಿಯನ್ನು ಸ್ಥಳಾಂತರಿಸಿದ್ದಾರೆ.

ಆದರೆ, ಅಲ್ಲಿಯೇ ಇದ್ದ ಕೆಲವರು ಈ ಘಟನೆಯನ್ನು ವಿಡಿಯೊ ಮಾಡಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಬೀದಿನಾಯಿ ಕಾಣಿಸಿಕೊಂಡಿರುವುದು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ಅಧಿಕಾರಿಗಳು ಇದೊಂದು ‘ಪ್ರತ್ಯೇಕ’ ಘಟನೆಯಾಗಿದ್ದು, ವಿಮಾನ ನಿಲ್ದಾಣದ ಸುತ್ತಮುತ್ತ ಆಹಾರ ತ್ಯಾಜ್ಯ ಪದಾರ್ಥಗಳು ಸಿಗದಂತೆ ನೋಡಿಕೊಳ್ಳಲು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಜೊತೆ ಮಾತನಾಡಿದ್ದೇವೆ. ಅಲ್ಲದೇ ನಿಲ್ದಾಣದ ಒಳಗೆ ಆಹಾರದ ತ್ಯಾಜ್ಯವನ್ನು ಎಲ್ಲೂ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.