ನವದೆಹಲಿ: ರಾತ್ರಿ ಸಮಯದಲ್ಲಿ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯ ಆಕಾಶ ವೀಕ್ಷಣೆಯ ಅಪರೂಪದ ವಿಡಿಯೊವೊಂದನ್ನು ಇಂಡಿಗೊ ಏರ್ಲೈನ್ಸ್ ಪೈಲಟ್ ಹಂಚಿಕೊಂಡಿದ್ದಾರೆ.

ಇಂಡಿಗೊ ವಿಮಾನದ ಕಾಕ್ಪಿಟ್ನಿಂದ ರಾತ್ರಿಯ ಸಮಯದಲ್ಲಿ ತೆಗೆದ ವಿಡಿಯೊ ಇದಾಗಿದೆ. ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಕತ್ತಲಿನ ನಡುವೆ ಬೆಳಗುತ್ತಿರುವ ಭಾರತ-ಪಾಕ್ ಗಡಿಯು ಹೆಚ್ಚಿನ ಆಕರ್ಷಣೆಗೆ ಕಾರಣವಾಗಿದೆ.

ಕ್ಯಾಪ್ಟನ್ ಪ್ರದೀಪ್ ಕೃಷ್ಣನ್ ಎಂಬವರು ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವನ್ನು ಹಂಚಿದ್ದಾರೆ. ಎರಡು ದೇಶಗಳನ್ನು ವಿಭಜಿಸುತ್ತಿರುವ ಬೆಳಕಿನ ರೇಖೆ ವಿಡಿಯೊದಲ್ಲಿ ಕಾಣಬಹುದಾಗಿದೆ.

'ರಾತ್ರಿಯ ಸಮಯದಲ್ಲಿ ಬಾಹ್ಯಾಕಾಶದಿಂದ ಭಾರತ-ಪಾಕ್ ಗಡಿಯನ್ನು ಗುರುತಿಸಬಹುದು ಎಂದು ಅವರು ಹೇಳುತ್ತಾರೆ. ಆದರೆ ಕಕ್ಷೆಯಿಂದಲೂ ಇದು ಸ್ಪಷ್ಟವಾಗಿ ಕಾಣಿಸುತ್ತದೆ' ಎಂದು ಪ್ರದೀಪ್ ಅಡಿಬರಹ ನೀಡಿದ್ದಾರೆ.

ಕಾಪ್ಪಿಟ್ನಲ್ಲಿ ಪ್ರಯಾಣಿಕರೊಂದಿಗೆ ಮಾತನಾಡುತ್ತಾ, 'ವಿಮಾನದ ಕಿಟಕಿಯಿಂದ ಹೊರಗಡೆ ನೋಡಿದರೆ ವಿಶ್ವದ ಅತ್ಯಂತ ಸೂಕ್ಷ್ಮ ಮತ್ತು ಕಠಿಣ ಭದ್ರತೆ ಹೊಂದಿರುವ ಭಾರತ ಹಾಗೂ ಪಾಕಿಸ್ತಾನದ ಗಡಿಯ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ' ಎಂದಿದ್ದಾರೆ.
.IndiGo Crisis | ಮುಂದುವರಿದ ಇಂಡಿಗೊ ಬಿಕ್ಕಟ್ಟು; 180 ವಿಮಾನಗಳ ಹಾರಾಟ ರದ್ದು.ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಹೋದ ಮೊಬೈಲ್ 15 ನಿಮಿಷದಲ್ಲೇ ಪತ್ತೆ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.