ಬೆಂಗಳೂರು: ವಿವಿಧ ಪ್ರಕರಣಗಳಲ್ಲಿ ಸಿಲುಕಿ ಜೈಲಿಗೆ ಬರುವ ಕೈದಿಗಳನ್ನು ನಿಭಾಯಿಸುವುದೇ ಜೈಲು ಅಧಿಕಾರಿ, ಸಿಬ್ಬಂದಿಗಳಿಗೆ ಹರಸಾಹಸವಾಗಿರುತ್ತದೆ. ಅದರಲ್ಲೂ ಜೈಲು ಅಧಿಕಾರಿ (ಜೈಲರ್) ಸಿಬ್ಬಂದಿಗಳಿಂದ ಬಹಳಷ್ಟು ಕೈದಿಗಳಿಗೆ ಕಹಿ ಅನುಭವವೇ ಹೆಚ್ಚು.

ಆದರೆ, ಇದಕ್ಕೆ ವ್ಯತಿರಿಕ್ತ ಹಾಗೂ ವಿಶೇಷ ಘಟನೆಯೊಂದು ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ.

ಸಾತ್ನಾ ಸೆಂಟ್ರಲ್ ಜೈಲು ಉಪ ಅಧೀಕ್ಷಕಿ ಫೀರೋಜಾ ಖಾತೂನ್ ಎನ್ನುವರು ಕೊಲೆ ಕೇಸ್ ಅಡಿ 14 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.

ಕೊಲೆ ಪ್ರಕರಣದಲ್ಲಿ 14 ವರ್ಷ ಶಿಕ್ಷೆ ಅನುಭವಿಸಿ ಸದ್ಯ ಬಿಡುಗಡೆಯಾಗಿರುವ ಮಧ್ಯಪ್ರದೇಶದ ಛತ್ತರ್ಪುರ್ ಜಿಲ್ಲೆಯ ಚಾಂಡ್ಲಾದ ಧರ್ಮೆಂದ್ರ ಸಿಂಗ್ ಎನ್ನುವರನ್ನು ಫೀರೋಜಾ ಇದೇ ಮೇ 5ರಂದು ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

2007 ರಲ್ಲಿ ಚಾಂಡ್ಲಾದ ರಾಜಕಾರಣಿಯೊಬ್ಬರ ಕೊಲೆ ಮಾಡಿ ಹೂತು ಹಾಕಿದ್ದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿ 2024ರವರೆಗೆ ಧರ್ಮೆಂದ್ರ ಸಿಂಗ್ ಸಾತ್ನಾ ಸೆಂಟ್ರಲ್ ಜೈಲಿನಲ್ಲಿದ್ದ. ಸನ್ನಡತೆ ಆಧಾರದಲ್ಲಿ ಧರ್ಮೆಂದ್ರ ಸಿಂಗ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ.

ಧರ್ಮೆಂದ್ರ ಬಿಡುಗಡೆಗೂ ಮುನ್ನ ಕೆಲ ವರ್ಷಗಳ ಹಿಂದೆ ಸಾತ್ನಾ ಜೈಲಿಗೆ ಫೀರೋಜಾ ಖಾತೂನ್ ಉಪ ಜೈಲು ಅಧೀಕ್ಷಕಿಯಾಗಿ ನಿಯೋಜನೆಗೊಂಡಿದ್ದರು. ಜೈಲಲ್ಲಿ ಫೀರೋಜಾ ಅವರಿಗೆ ವಾರಂಟ್ ವಿಭಾಗದ ಕೆಲಸವನ್ನು ನೀಡಲಾಗಿತ್ತು. ಈ ಕೆಲಸದಲ್ಲಿ ಫೀರೋಜಾ ಅವರಿಗೆ ಧರ್ಮೆಂದ್ರ ಆಗಾಗ ಸಹಾಯ ಮಾಡುತ್ತಿದ್ದ.

ಈ ಸಂಪರ್ಕವೇ ಕ್ರಮೇಣ ಇಬ್ಬರಲ್ಲೂ ಪ್ರೀತಿ ಚಿಗುರಲು ಕಾರಣವಾಗಿದೆ. ಪ್ರೀತಿ ಚಿಗುರಿ ಈಗ ಹೆಮ್ಮರವಾಗಿದೆ.

ಮೇ 5 ರಂದು ಛತ್ತರ್ಪುರ್ ಜಿಲ್ಲೆಯಲ್ಲಿ ಈ ಇಬ್ಬರ ವಿವಾಹ ಹಿಂದೂ ಸಂಪ್ರದಾಯದಂತೆ ನೆರವೇರಿದೆ. ಈ ಮದುವೆಗೆ ಫೀರೋಜಾ ಮನೆಯವರ ವಿರೋಧವಿತ್ತು. ಕಡೆಗೆ ಭಜರಂಗದಳದ ಕಾರ್ಯಕರ್ತರು ಮುಂದೆ ನಿಂತು ಈ ಮದುವೆ ಮಾಡಿಸಿದ್ದಾರೆ ಎಂದು ಇಂಡಿಯಾ ಟುಡೇ ವೆಬ್ಸೈಟ್ ವರದಿ ಮಾಡಿದೆ.
.2025 ಹಿಂದಣ ಹೆಜ್ಜೆ | ಜಿಲ್ಲೆ ಹೆಸರು ಮರು ನಾಮಕರಣ; ಕಾಡಾನೆ ಸಂಘರ್ಷಕ್ಕಿಲ್ಲ ಕೊನೆ.ಶುಕ್ರಾದಿತ್ಯರ ಬೆಂಬಲವಿದ್ದ ಪ್ರಧಾನಿ ಮೋದಿಗೆ ಈಗ ಪಂಚಮ ಶನಿ ಕಾಟ: ಪಾರಾಗುವರೇ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.