ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಮೂಲದ ಈ 11 ವರ್ಷದ ಬಾಲೆ ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ

Last Updated 3 ಆಗಸ್ಟ್ 2021, 6:31 IST
ಅಕ್ಷರ ಗಾತ್ರ

ವಾಷಿಂಗ್ಟನ್; ಭಾರತೀಯ ಮೂಲದ 11 ವರ್ಷದ ಅಮೆರಿಕನ್ ಬಾಲೆ ನತಾಶಾ ಪೇರಿ ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂಬ ಮಾನ್ಯತೆಯನ್ನು ಪಡೆದಿದ್ದಾರೆ.

ಅಮೆರಿಕದ ಉನ್ನತ ವಿಶ್ವವಿದ್ಯಾಲಯ ನಡೆಸುವ ಸ್ಕಾಲಸ್ಟಿಕ್ ಅಸ್ಸೇಸ್‌ಮೆಂಟ್ ಟೆಸ್ಟ್ (ಎಸ್‌ಎಟಿ) ಮತ್ತು ಅಮೆರಿಕನ್ ಕಾಲೇಜ್ ಟೆಸ್ಟಿಂಗ್(ಎಸಿಟಿ) ಪರೀಕ್ಷೆಯಲ್ಲಿ ನೀಡಿದ ಅದ್ವಿತೀಯ ಫಲಿತಾಂಶ ನತಾಶಾಳನ್ನು ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂದು ಗುರುತಿಸಿದೆ.

ನತಾಶಾ ನ್ಯೂಜೆರ್ಸಿಯ ಥೇಲ್ಮಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ.ಎಸ್‌ಎಟಿ ಮತ್ತು ಎಸಿಟಿ ಪರೀಕ್ಷೆಯಲ್ಲಿ 84 ದೇಶಗಳ ಸುಮಾರು 19,000 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಶಸ್ತಿ ದೊರಕಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ನತಾಶಾ, ‘ಇದು ನನಗೆ ಇನ್ನೂ ಹೆಚ್ಚಿನದನ್ನು ಮಾಡಲು ಪ್ರೇರಣೆ ನೀಡಿದೆ’ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT