ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ. 80ರಷ್ಟು ಭಾರತೀಯರು ಮೋದಿ ಪರ ಒಲವು ಹೊಂದಿದ್ದಾರೆ: ಪಿವ್‌ ಸಮೀಕ್ಷೆ

Published 30 ಆಗಸ್ಟ್ 2023, 16:10 IST
Last Updated 31 ಆಗಸ್ಟ್ 2023, 8:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಭಾರತದ ಶೇ 80 ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿ ಪರ ಒಲವು ಹೊಂದಿದ್ದಾರೆ. ಅಂದಾಜು 10 ಮಂದಿ ಭಾರತೀಯರಲ್ಲಿ ಏಳು ಮಂದಿ, ತಮ್ಮ ದೇಶವು ಇತ್ತೀಚೆಗಷ್ಟೇ ಹೆಚ್ಚು ಪ್ರಭಾವಶಾಲಿಯಾಗಿ ಹೊರಹೊಮ್ಮಿದೆ ಎಂದು ನಂಬಿರುವುದಾಗಿ ಪಿವ್‌ ಸಂಶೋಧನಾ ಕೇಂದ್ರದ ಸಮೀಕ್ಷೆ ಹೇಳಿದೆ.

ಜಿ. 20 ಶೃಂಗಸಭೆಯ ಪೂರ್ವಭಾವಿಯಾಗಿ ಈ ಸಮೀಕ್ಷೆ ವರದಿ ಬಿಡುಗಡೆ ಆಗಿದೆ.  

ಇಸ್ರೇಲ್‌ನಲ್ಲಿ ಭಾರತದ ಕುರಿತ ದೃಷ್ಟಿಕೋನಗಳು ಹೆಚ್ಚು ಸಕಾರಾತ್ಮಕವಾಗಿವೆ. ಅಲ್ಲಿ ಶೇ 71ರಷ್ಟು ಜನರು ಭಾರತದ ಪರ ಒಲವು ಹೊಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಫೆಬ್ರುವರಿ 20ರಿಂದ ಮೇ 22ರ ನಡುವೆ ಸಮೀಕ್ಷೆ ನಡೆಸಲಾಗಿದೆ ಎಂದು ಪಿವ್‌ ಹೇಳಿದೆ. 

ಮೋದಿ ಅವರು ಎರಡನೆಯ ಅವಧಿಗೆ ಪ್ರಧಾನಿಯಾಗಿರುವ ಕುರಿತು ಹತ್ತರಲ್ಲಿ ಎಂಟು ಮಂದಿ ಭಾರತೀಯರು ಮೋದಿ ಪರ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಶೇ 55ರಷ್ಟು ಜನರು ಈ ಗುಂಪಿನಲ್ಲಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಅವರು ಮತ್ತೆ ಪ್ರಧಾನಿಯಾಗುವ ಕುರಿತು ಐದರಲ್ಲಿ ಒಂದನೇ ಭಾಗದಷ್ಟು ಜನ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. 

ಈಚೆಗಿನ ವರ್ಷಗಳಲ್ಲಿ ಅಮೆರಿಕದ ಪ್ರಭಾವವು ಬಲಗೊಳ್ಳುತ್ತಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿರುವವರಲ್ಲಿ ಶೇ 49ರಷ್ಟು ಭಾರತೀಯರು ಹೇಳಿದ್ದಾರೆ. ಶೇ 41ರಷ್ಟು ಮಂದಿ ರಷ್ಯಾದ ಪ್ರಭಾವ ಬಲಗೊಳ್ಳುತ್ತಿದೆ ಎಂದಿರುವುದಾಗಿ ಸಮೀಕ್ಷೆ ಹೇಳಿದೆ. ಚೀನಾದ ಪ್ರಭಾವದ ಬಗ್ಗೆ ಭಾರತೀಯರಿಂದ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ.

ಶೇ. 80ರಷ್ಟು ಭಾರತೀಯರು ಮೋದಿ ಪರ ಒಲವು ಹೊಂದಿದ್ದಾರೆ: ಪಿವ್‌ ಸಮೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT