ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2024ರಲ್ಲಿ ಸ್ವಯಂ ಸೇವಕರ ಸಾವಿನ ಸಂಖ್ಯೆ ಹೆಚ್ಚಾದೀತು: ವಿಶ್ವಸಂಸ್ಥೆ

Published 19 ಆಗಸ್ಟ್ 2024, 15:42 IST
Last Updated 19 ಆಗಸ್ಟ್ 2024, 15:42 IST
ಅಕ್ಷರ ಗಾತ್ರ

ಬರ್ಲಿನ್‌: ಕಳೆದ ವರ್ಷ ವಿಶ್ವದಾದ್ಯಂತ ನಡೆದ ಘರ್ಷಣೆಗಳಲ್ಲಿ ದಾಖಲೆ ಸಂಖ್ಯೆಯ ಸ್ವಯಂ ಸೇವಕರು ಮೃತಪಟ್ಟಿದ್ದು, ಈ ವರ್ಷವೂ ಅಂತಹ ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ವಿಶ್ವಸಂಸ್ಥೆ ಸೋಮವಾರ ತಿಳಿಸಿದೆ.

2023ರಲ್ಲಿ, 33 ದೇಶಗಳಲ್ಲಿ ಸುಮಾರು 280 ಸ್ವಯಂ ಸೇವಕರು ಮೃತಪಟ್ಟಿದ್ದು, ಇದು 2022ರಲ್ಲಿ ಮೃತಪಟ್ಟವರ (118) ಸಂಖ್ಯೆಯ ದುಪ್ಪಟ್ಟು ಎಂದು ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ಇರುವ ವಿಶ್ವಸಂಸ್ಥೆಯ ಕಚೇರಿ (ಒಸಿಎಚ್‌ಎ) ತಿಳಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆರಂಭವಾದ ಇಸ್ರೇಲ್-ಗಾಜಾ ನಡುವಿನ ಯುದ್ಧದ ಮೊದಲ ಮೂರು ತಿಂಗಳಲ್ಲಿಯೇ ವರ್ಷದ ಒಟ್ಟು ಮೃತರ ಸಂಖ್ಯೆಯ ಅರ್ಧದಷ್ಟು ದಾಖಲಾಗಿದೆ ಎಂದು ಅದು ಮಾಹಿತಿ ನೀಡಿದೆ. 

‘ಆಗಸ್ಟ್‌ 7ರೊಳಗೆ 172 ಸ್ವಯಂ ಸೇವಕರು ಮೃತಪಟ್ಟಿದ್ದು, ಈ ವರ್ಷವೂ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು’ ಎಂದು ಕಚೇರಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT