ಕೀವ್ (ಎಪಿ): ಹಾರ್ಕಿವ್ ಸೇರಿದಂತೆ ಉಕ್ರೇನ್‌ನ ಈಶಾನ್ಯ ಭಾಗದಲ್ಲಿ ರಷ್ಯಾ ಪಡೆಗಳು ತೀವ್ರ ದಾಳಿ ಪ್ರಾರಂಭಿಸಿವೆ. ದಾಳಿಯ ಪರಿಣಾಮ ಹಾರ್ಕಿವ್ ಪ್ರದೇಶದಿಂದ ಸುಮಾರು 1,700ಕ್ಕೂ ಹೆಚ್ಚು ನಾಗರಿಕರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
30ಕ್ಕೂ ಹೆಚ್ಚು ಹಳ್ಳಿಗಳು ಮತ್ತು ಪಟ್ಟಣಗಳ ಮೇಲೆ ರಷ್ಯಾ ಫಿರಂಗಿ ಮತ್ತು ವೈಮಾನಿಕ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ ಮೂವರು ಸಾವಿಗೀಡಾಗಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಹಾರ್ಕಿವ್ ಗವರ್ನರ್ ಓಲೆಹ್ ಸಿನಿಹುಬೊವ್ ಮಾಹಿತಿ ನೀಡಿದ್ದಾರೆ.
ರಷ್ಯಾ ದಾಳಿಯನ್ನು ಎದುರಿಸಲು ಉಕ್ರೇನ್ ಶುಕ್ರವಾರ ಹಾರ್ಕೀವ್ ಪ್ರದೇಶದಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸಿದೆ. ಮಾರ್ಚ್ ಅಂತ್ಯದಿಂದ ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದೆ.