ಕೊಲಂಬೊ: ಪ್ರತಿಕೂಲ ಹವಾಮಾನದಿಂದ ಶ್ರೀಲಂಕಾದಲ್ಲಿ 15 ಮಂದಿ ಸಾವಿಗೀಡಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (ಡಿಎಂಸಿ) ಶನಿವಾರ ತಿಳಿಸಿದೆ.

ದೇಶದಲ್ಲಿ ಪ್ರವಾಹ, ಬಿರುಗಾಳಿ ಹಾಗೂ ಭೂಕುಸಿತದಂತಹ ಅವಘಡಗಲ್ಲಿ 4,50,000ಕ್ಕೂ ಹೆಚ್ಚು ಜನ ತೊಂದರೆಗೀಡಾಗಿದ್ದಾರೆ ಎಂದು ಡಿಎಂಸಿ ಹೇಳಿದೆ.

ನವೆಂಬರ್ 21ರಿಂದ ಈವರೆಗೆ 15 ಮಂದಿ ಮೃತಪಟ್ಟಿದ್ದಾರೆ. ಪೂರ್ವ ಪ್ರಾಂತ್ಯದಲ್ಲಿ ಅತಿ ಹೆಚ್ಚು (10) ಸಾವುಗಳು ವರದಿಯಾಗಿವೆ.

ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ತೀವ್ರ ವಾಯು ಭಾರ ಕುಸಿತದಿಂದ ಶ್ರಿಲಂಕಾದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿ ಸೃಷ್ಟಿಯಾಗಿದೆ.

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಫೆಂಗಲ್’ ಚಂಡಮಾರುತವು ಶನಿವಾರ ಮಧ್ಯಾಹ್ನ ದಕ್ಷಿಣ ಭಾರತದ ತಮಿಳುನಾಡಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
.ಶ್ರೀಲಂಕಾ | ಭಾರಿ ಮಳೆ: 12 ಮಂದಿ ಸಾವು, 3.30 ಲಕ್ಷ ಮಂದಿ ಸಂಕಷ್ಟದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.