ಕಾಬೂಲ್: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದಾಗಿನಿಂದ ಮಹಿಳೆಯರ, ಹೆಣ್ಣುಮಕ್ಕಳ ಹಕ್ಕಿಗೆ, ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿ ಒಂದಲ್ಲ ಒಂದು ಕಾನೂನನ್ನು ಜಾರಿಗೊಳಿಸಲಾಗುತ್ತಿದೆ.

ಈ ಹಿಂದೆ, ಹೆಣ್ಣುಮಕ್ಕಳು ಶಿಕ್ಷಣ ಪಡೆಯುವಂತಿಲ್ಲ, ಸರ್ಕಾರಿ ಕೆಲಸಗಳಿಗೆ ಹೋಗುವಂತಿಲ್ಲ, ಪುರುಷ ಜೊತೆಯಿದ್ದರೆ ಮಾತ್ರ ಸಾರ್ವಜನಿಕವಾಗಿ ಓಡಾಡಬಹುದೇ ಹೊರತು ಒಂಟಿ ಮಹಿಳೆ ಓಡಾಡುವಂತಿಲ್ಲ, ಪಾರ್ಕ್, ಜಿಮ್, ಬ್ಯೂಟಿ ಪಾರ್ಲರ್ಗೆ ಹೋಗುವಂತಿಲ್ಲ, ಇಡೀ ದೇಹ ಮುಚ್ಚುವಂತೆ ಬಟ್ಟೆ ಧರಿಸಬೇಕು ಹೀಗೆ ನೂರೆಂಟು ಕಾನೂನುಗಳನ್ನು ಜಾರಿಗೆ ತರಲಾಗಿದೆ.

ಇವೆಲ್ಲದರ ಹೊರತಾಗಿ ಈಗ ಮದುವೆ, ವಿಚ್ಛೇದನ, ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಹೊಸ ಕುಟುಂಬ ಕಾನೂನನ್ನು ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ. ಇದು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳವನ್ನು ಹುಟ್ಟುಹಾಕಿದೆ.

‘ಪ್ರಿನ್ಸಿಪಲ್ಸ್ ಆಫ್ ಸಪರೇಶನ್ ಬಿಟ್ವೀನ್ ಸ್ಪೌಸ್’ ಎಂಬ ಶೀರ್ಷಿಕೆಯ ಆರ್ಟಿಕಲ್ 31ಕ್ಕೆ ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾಡಾ ಅನುಮೋದಿಸಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಆಡಳಿತದ ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಲಾಗಿದೆ ಎಂದು ಅಫ್ಗನ್ ಪ್ರಸಾರಕ ‘ಅಮು ಟಿವಿ’ ವರದಿ ಮಾಡಿದೆ.

ಹೊಸ ಕಾನೂನಿನಲ್ಲಿ ಬಾಲ್ಯ ವಿವಾಹ, ಪತಿ ನಾಪತ್ತೆಯಾದರೆ, ಒತ್ತಾಯ ಪೂರ್ವಕವಾಗಿ ದೂರವಾಗುವುದು, ಸೇರಿದಂತೆ ಹಲವು ಅಂಶಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಹೊಸ ನಿಯಮದ ಪ್ರಕಾರ, ಪ್ರಾಯಕ್ಕೆ ಬಂದ ಒಬ್ಬ ಕನ್ಯೆ ಮದುವೆಯ ಪ್ರಸ್ತಾಪಕ್ಕೆ ಮೌನವಾಗಿದ್ದರೆ, ಅದನ್ನು ಆಕೆಯ ಸಮ್ಮತಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಒಬ್ಬ ಹುಡುಗ ಅಥವಾ ಈ ಮೊದಲೇ ಮದುವೆಯಾಗಿದ್ದ ಮಹಿಳೆಯ ಮೌನವನ್ನು ಸಮ್ಮತಿ ಎಂದು ಪರಿಗಣಿಸಲಾಗುವುದಿಲ್ಲ.

ಆರ್ಟಿಕಲ್ 5ರಡಿ ತಂದೆ ಅಥವಾ ಅಜ್ಜಂದಿರನ್ನು ಹೊರತುಪಡಿಸಿ ಇತರ ಸಂಬಂಧಿಕರೂ ಅಪ್ರಾಪ್ತ ಹೆಣ್ಣು ಮಕ್ಕಳ ಮದುವೆ ಮಾಡಿದರೆ, ಆ ಮದುವೆಯನ್ನು ಕಾನೂನುಬದ್ಧ ಎಂದು ಪರಿಗಣಿಸಲಾಗುತ್ತದೆ. ಮಗು ಪ್ರಾಯಕ್ಕೆ ಬಂದ ನಂತರ ಮದುವೆ ರದ್ದು ಮಾಡಲು ಕೋರಬಹುದು, ಆದರೆ ಅದಕ್ಕೆ ತಾಲಿಬಾನ್ ನ್ಯಾಯಾಲಯದ ಅನುಮತಿ ಕಡ್ಡಾಯವಾಗಿದೆ.

ಮದುವೆಯಾದ ಹೆಣ್ಣಿನ ಮೇಲೆ ಪತಿ ದೌರ್ಜನ್ಯ ಎಸಗುತ್ತಿದ್ದರೆ ಕೇವಲ ಪತ್ನಿಯ ಮನವಿಯ ಮೇರೆಗೆ ನ್ಯಾಯಾಧೀಶರು ವಿಚ್ಛೇದನ ನೀಡುವಂತಿಲ್ಲ. ಪತಿಯ ಸಮ್ಮತಿಯೂ ಇದಕ್ಕೆ ಬೇಕಾಗುತ್ತದೆ.

ಒಂದು ವೇಳೆ ದೀರ್ಘಕಾಲ ಪತಿ ನಾಪತ್ತೆಯಾಗಿದ್ದರೆ ಅಥವಾ ವ್ಯಭಿಚಾರದ ಆರೋಪಗಳನ್ನು ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ತಾಲಿಬಾನ್ ನ್ಯಾಯಾಧೀಶರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಉಲ್ಲೇಖಿಸಲಾಗಿದೆ.

ತಾಲಿಬಾನ್ ನಿರ್ಬಂಧಗಳಿಂದ ಮಹಿಳೆಯರ ಆರೋಗ್ಯಕ್ಕೆ ಆಪತ್ತು ಎಂದಿದ್ದ ವಿಶ್ವಸಂಸ್ಥೆ

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ವಿಧಿಸಿರುವ ನಿರ್ಬಂಧಗಳಿಂದಾಗಿ, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಜೀವಕ್ಕೆ ಆಪತ್ತು ಎದುರಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ತಜ್ಞರು ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದರು.

‘ಪುರುಷರು ಜೊತೆಗಿಲ್ಲ ಎಂಬ ಕಾರಣಕ್ಕೆ ಗರ್ಭಿಣಿಯೊಬ್ಬರಿಗೆ ಆಸ್ಪತ್ರೆ ಪ್ರವೇಶ ನಿರಾಕರಿಸಲಾಗಿತ್ತು. ಹೀಗಾಗಿ, ಅವರಿಗೆ ಬಾಗಿಲಲ್ಲೇ ಹೆರಿಗೆಯಾಗಿತ್ತು. ಮತ್ತೊಬ್ಬ ಮಹಿಳೆಯು ಜೊತೆಯಲ್ಲಿ ಬರಲು ಪುರಷರಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಗೆ ಹೋಗಲಾಗದೆ, ತಮ್ಮ ನಾಲ್ಕು ವರ್ಷದ ಮಗುವನ್ನು ಕಳೆದುಕೊಳ್ಳಬೇಕಾಗಿತ್ತು ’ ಎಂಬ ವರದಿಯನ್ನು ಅಫ್ಗಾನಿಸ್ತಾನದಲ್ಲಿ ವಿಶೇಷ ವರದಿಗಾರರಾಗಿ ನಿಯೋಜನೆಗೊಂಡಿದ್ದ ಮಾನವ ಹಕ್ಕು ತಜ್ಞ ರಿಚರ್ಡ್ ಬೆನೆಟ್ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಸಲ್ಲಿಸಿದ್ದರು.

ಅಧಾರ: ಅಫ್ಗನ್ ಪ್ರಸಾರಕ ಅಮು ಟಿವಿ, ಇಂಡಿಯಾ ಟುಡೇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.