ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಹಲವು ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಅಹ್ಮದಿ ಸಮುದಾಯದ ಜನರು ಈದ್ ಹಬ್ಬದಂದು ತಮ್ಮ ಆಚರಣೆಗಳನ್ನು ನಡೆಸದಂತೆ ಪೊಲೀಸರು ನಿರ್ಬಂಧಿಸಿದ್ದಾರೆ ಎಂದು ಜಮಾತ್ ಅಹ್ಮದೀಯ ಪಾಕಿಸ್ತಾನ (ಜೆಎಪಿ) ಬುಧವಾರ ಆರೋಪಿಸಿದೆ.

ಗುಜ್ರನ್ವಾಲಾ, ಸೈಲ್ಕೋಟ್, ಫೈಸಲಾಬಾದ್, ಸರ್ಗೋದಾ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಅಹ್ಮದೀಯರ ಪ್ರಾರ್ಥನಾ ಸ್ಥಳಗಳನ್ನು ಸರ್ಕಾರದ ಆದೇಶದ ಮೇರೆಗೆ ಪೊಲೀಸರು ಬಲವಂತವಾಗಿ ಮುಚ್ಚಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸಲಾಗಿದೆ ಎಂದು ಜೆಎಪಿ ವಕ್ತಾರ ಆಮಿರ್ ಮೊಹಮ್ಮದ್ ಹೇಳಿದ್ದಾರೆ.

ಶಾಂತಿಯುತ ಸಮುದಾಯವೊಂದು ತನ್ನ ನಂಬಿಕೆಯನ್ನು ಪಾಲಿಸದಂತೆ ತಡೆಯುವ ಮೂಲಕ ಪಾಕಿಸ್ತಾನದ ಜಾಗತಿಕ ಮಟ್ಟದ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.