ಕಲಬುರಗಿ: ‘ಪವಿತ್ರ ರಂಜಾನ್ ಮಾಸದ ಉದ್ದಕ್ಕೂ ಜೆರುಸಲೇಂನ ಅಲ್ ಅಕ್ಸಾ ಮಸೀದಿ ಅಲ್-ಅಕ್ಸಾವನ್ನು ಮುಚ್ಚಲಾಗಿದೆ. ಆದರೆ ಮುಸ್ಲಿಂ ರಾಷ್ಟ್ರಗಳು ಯಾವುದೇ ದೃಢವಾದ ಕ್ರಮ ಕೈಗೊಂಡಿಲ್ಲ. ಇಸ್ರೇಲ್ ಮತ್ತು ಅಮೆರಿಕದ ಭಯವು ಅವರ ಹೃದಯದಲ್ಲಿ ಮನೆಮಾಡಿದ್ದು, ಈ ಮೌನವು ಅತ್ಯಂತ ವಿಷಾದನೀಯವಾಗಿದೆ’ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಸೀರತ್-ಉನ್-ನಬಿ ಸ್ಟಡಿ ಅಂಡ್ ರಿಸರ್ಚ್ ಸೆಂಟರ್ ಕರ್ನಾಟಕದ ಅಧ್ಯಕ್ಷ ಮುಹಮ್ಮದ್ ಅಸಗರ ಚುಲಬುಲ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಪಡಾ ಅಲ್ಲಾ ಕಾಲೊನಿಯ ಉಮರ್ ಫಾರೂಕ್ ಮಸೀದಿಯಲ್ಲಿ ಈಚೆಗೆ ಆಯೋಜಿಸಿದ್ದ ‘ಯೌಮ್-ಅಲ್-ಖುದ್ಸ್’ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

‘ಪ್ಯಾಲೆಸ್ಟೈನ್ ಅನ್ನು ತಕ್ಷಣವೇ ಸ್ವತಂತ್ರ ರಾಷ್ಟ್ರವೆಂದು ಘೋಷಿಸಬೇಕು ಮತ್ತು ಜೆರುಸಲೇಂ ಹಾಗೂ ಗಾಜಾದ ಮೇಲಿನ ಅಕ್ರಮ ಕಬಳಿಕೆಯನ್ನು ಕೊನೆಗೊಳಿಸಲು ಇಸ್ರೇಲ್ ವಿರುದ್ಧ ಕಠಿಣ ನಿರ್ಣಯ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಮೌಲಾನಾ ಫಕ್ರುದ್ದೀನ್ ಮಾನ್ಯಾಲ್, ಮೌಲಾನಾ ಶೇಖ್ ಸಲೀಮುದ್ದೀನ್ ನಿಜಾಮಿ, ಅಬ್ದುಲ್ ಜಬ್ಬಾರ್ ಗೋಲಾ, ಮೌಲಾನಾ ಯೂಸುಫ್ ಖುರೇಷಿ, ಅಫ್ಜಲ್ ಮಹಮೂದ್ ಮತ್ತಿತರರು ಮಾತನಾಡಿದರು.

ಖಾರಿ ಸಿದ್ದಿಕ್ ಹುಸೇನ್ ಕುರ್ಆನ್ ಪಠಣ ಮಾಡಿದರು. ಮುಹಮ್ಮದ್ ಅಫಾನ್ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-34-274875700

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.