ನ್ಯೂಯಾರ್ಕ್/ವಾಷಿಂಗ್ಟನ್: ‘ಇರಾನ್ ಜೊತೆಗಿನ ಸಂಘರ್ಷದ ಕಾರಣ ಇಂಧನ ಪೂರೈಕೆಯು ಸುಗಮವಾಗಬೇಕು ಎಂಬುದು ನಮ್ಮ ಉದ್ದೇಶ. ಭಾರತವು ನಾವು ಹೇಳಿದಂತೆ ಕೇಳುವವರು. ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ನಾವು ಹೇಳಿದ್ದೆವು. ಅದನ್ನು ಅವರು ಪಾಲಿಸಿದ್ದರು. ಆದ್ದರಿಂದಲೇ ಅದಕ್ಕೆ ನಾವು ರಷ್ಯಾದಿಂದ ತೈಲ ಖರೀದಿಸಲು ಅನುಮತಿ ನೀಡಿದ್ದೇವೆ’ ಎಂದು ಶ್ವೇತಭವನ ಹೇಳಿದೆ.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೆರೋಲಿನ್ ಲೀವಿಟ್ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ರಷ್ಯಾದ ತೈಲ ತುಂಬಿದ ಹಡಗುಗಳು ಈಗಾಗಲೇ ಸಮುದ್ರದಲ್ಲಿರುವುದರಿಂದ ಈ ತೈಲವನ್ನು ಪಡೆದುಕೊಳ್ಳಲು ನಾವು ಭಾರತಕ್ಕೆ ತಾತ್ಕಾಲಿಕವಾದ ಅನುಮತಿ ನೀಡಿದ್ದೇವೆ. ಈ ತೈಲವನ್ನು ಭಾರತವು ಸ್ವೀಕರಿಸುವುದರಿಂದ ರಷ್ಯಾಕ್ಕೂ ಭಾರಿ ಹಣಕಾಸಿನ ಲಾಭ ಆಗದು’ ಎಂದರು.

‘ಹೊರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆ ಆಗದಿರುವುದರಿಂದ ತೈಲ ದರದಲ್ಲಿ ಏರಿಕೆಯಾಗಿದೆ. ಈ ಎಲ್ಲವನ್ನೂ ನಿರ್ವಹಿಸಲು ನಾವು ಭಾರತಕ್ಕೆ ಅಲ್ಪಾವಧಿ ಅವಕಾಶ ನೀಡಿದ್ದೇವೆ. ತೈಲ ತುಂಬಿದ ಹಡಗುಗಳು ರಷ್ಯಾದಿಂದ ಈಗಾಗಲೇ ಹೊರಟು ಸಮುದ್ರದಲ್ಲಿ ಹಾಗೆಯೇ ನಿಂತಿವೆ. ಚೀನಾ ಇವುಗಳನ್ನು ದಾಸ್ತಾನು ಮಾಡಿಕೊಳ್ಳುತ್ತದೆ. ಆದ್ದರಿಂದ, ನಿಮ್ಮ ತೈಲ ಸಂಸ್ಕರಣಾ ಘಟಕಗಳಗೆ ಇವನ್ನು ತುಂಬಿಕೊಳ್ಳಿ ಎಂದು ನಮ್ಮ ಸ್ನೇಹಿತ ಭಾರತಕ್ಕೆ ಹೇಳಿದ್ದೇವೆ’ ಎಂದು ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.