ವಾಷಿಂಗ್ಟನ್ : ಇರಾನ್ ಜತೆಗಿನ ಮಾತುಕತೆ ಸ್ಥಗಿತಗೊಂಡಿರುವುದರಿಂದ ಅಮೆರಿಕವು ಹೊರ್ಮುಜ್ ಜಲಸಂಧಿ ತೆರೆಯಲು ಅಂತರರಾಷ್ಟ್ರೀಯ ಸಾಗರ ಸುರಕ್ಷತಾ ಒಕ್ಕೂಟದ (ಎಂಎಫ್ಸಿ) ಮೂಲಕ ಶತಪ್ರಯತ್ನ ನಡೆಸಿದೆ.

ಪಶ್ಚಿಮ ಏಷ್ಯಾದಲ್ಲಿ, ವಿಶೇಷವಾಗಿ ಹೊರ್ಮುಜ್ ಜಲಸಂಧಿ ಮತ್ತು ಪರ್ಶಿಯನ್ ಕೊಲ್ಲಿಯಲ್ಲಿ ಹಡಗುಗಳ ಸುರಕ್ಷಿತ ಸಂಚಾರ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ‘ಎಂಎಫ್ಸಿ’ ಕ್ರಮ ತೆಗೆದುಕೊಳ್ಳುತ್ತದೆ. ಇದು 2019ರಲ್ಲಿ ರೂಪುಗೊಂಡ ಬಹುರಾಷ್ಟ್ರೀಯ ಒಕ್ಕೂಟವಾಗಿದೆ.

‘ಅಮೆರಿಕವು ಹೊರ್ಮುಜ್ ಮುಕ್ತ ಗೊಳಿಸಲು ಎಂಎಫ್ಸಿ ಮೂಲಕ ಪ್ರಯತ್ನ ನಡೆಸಿದೆ. ಈ ಪ್ರಯತ್ನಕ್ಕೆ ಕೈಜೋಡಿಸುವಂತೆ ಅಮೆರಿಕದ ರಾಯಭಾರ ಕಚೇರಿಯು ಇತರೆ ದೇಶಗಳಿಗೂ ಮನವಿ ಮಾಡಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಯೊಬ್ಬರು ಎಎಫ್ಪಿ ಸುದ್ದಿಸಂಸ್ಥೆಗೆ ಖಚಿತಪಡಿಸಿದ್ದಾರೆ.

‘ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಸೇನಾ ಪಡೆಗಳನ್ನು ಮೇಲ್ವಿಚಾರಣೆ ಮಾಡುವ ವಿದೇಶಾಂಗ ಇಲಾಖೆ ಮತ್ತು ಯುಎಸ್ ಸೆಂಟ್ರಲ್ ಕಮಾಂಡ್ ನಡುವಿನ ಜಂಟಿ ಪ್ರಯತ್ನವಾಗಿ ಎಂಎಫ್ಸಿ ಕಾರ್ಯನಿರ್ವಹಿ ಸಲಿದೆ’ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಫೆಬ್ರುವರಿ 28ರಿಂದ ಅಮೆರಿಕ–ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಆರಂಭಗೊಂಡಿದ್ದು, ಅಂದಿನಿಂದ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಹಡಗುಗಳ ಸಂಚಾರಕ್ಕೆ ಇರಾನ್ ನಿರ್ಬಂಧ ಹೇರಿದೆ. ಇದರ ಪರಿಣಾಮವಾಗಿ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಕೊರತೆ ಎದುರಾಗಿದ್ದು, ಎರಡು ತಿಂಗಳಿಂದ ಇಂಧನ ಅನಿಶ್ಚಿತತೆ ಮುಂದುವರಿದಿದೆ.

‘ಇರಾನ್ ನಿರ್ಬಂಧದಿಂದ ಹೊರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಂತರ ರಾಷ್ಟ್ರೀಯ ಮಟ್ಟದ ಸಾಮೂಹಿಕ ಕ್ರಮ ಅತ್ಯಗತ್ಯ’ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

‘ಹೊರ್ಮುಜ್ ಜಲಸಂಧಿಯಲ್ಲಿ ಸಂಚಾರ ಸ್ವಾತಂತ್ರ್ಯ ಮರುಸ್ಥಾಪಿಸಲು ಆ ಮೂಲಕ ಜಾಗತಿಕ ಆರ್ಥಿಕತೆಯನ್ನು ರಕ್ಷಿಸಲು ಎಂಸಿಎಫ್ ಪಾತ್ರ ಮಹತ್ವದ್ದು’ ಎಂದು ಅಮೆರಿಕ ಹೇಳಿದೆ.

ದಾಳಿ, ಪ್ರತಿದಾಳಿ ಎಚ್ಚರಿಕೆ

ಹೊರ್ಮುಜ್ ಮುಕ್ತಗೊಳಿಸದಿದ್ದರೆ ಇರಾನ್ ಮೇಲೆ ಸರಣಿ ಮಿಲಿಟರಿ ದಾಳಿಗಳನ್ನು ನಡೆಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶೀಘ್ರದಲ್ಲೇ ಅಧಿಕಾರಿ ಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರಸ್ತಾವಿತ ಎರಡನೆಯ ಸುತ್ತಿನ ಮಾತುಕತೆಯಲ್ಲಿ ಸಮೃದ್ಧೀಕರಿಸಿದ ಯುರೇನಿಯಂ ವಿಚಾರದಲ್ಲಿ ಇರಾನ್ ಪೂರ್ಣವಾಗಿ ಮಣಿಯುವಂತೆ ಮಾಡಲು ಅಮೆರಿಕ ಯೋಜನೆ ರೂಪಿಸಿದೆ ಎಂದು ಅಕ್ಸಿಯೊಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಇರಾನ್ ಕೂಡ ಸಂಭಾವ್ಯ ಒಪ್ಪಂದವನ್ನು ಪರಿಶೀಲಿಸುತ್ತಿದೆ’ ಎಂದು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ಮೂಲಗಳು ಹೇಳಿವೆ. ಆದರೆ, ಅಮೆರಿಕವು ಇರಾನ್ ಬಂದರು ಮತ್ತು ಹಡಗುಗಳ ಮೇಲೆ ಹೇರಿರುವ ದಿಗ್ಭಂಧನದ ತೆರವುಗೊಳಿಸದಿದ್ದರೆ ಭಾರಿ ಮಿಲಿಟರಿ ದಾಳಿ ನಡೆಸಲಾಗುವುದು ಎಂದು ಇರಾನ್ ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.