ವಾಷಿಂಗ್ಟನ್: ರಷ್ಯಾ ಅಥವಾ ಇರಾನ್ನಿಂದ ತೈಲ ಖರೀದಿಯ ಮೇಲೆ ವಿಧಿಸಿರುವ ನಿರ್ಬಂಧಗಳಿಗೆ ಯಾವುದೇ ವಿನಾಯಿತಿ ನೀಡುವುದನ್ನು ಅಮೆರಿಕ ಬುಧವಾರ ತಳ್ಳಿಹಾಕಿದೆ.

ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್, ‘ರಷ್ಯಾದ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನು ನವೀಕರಿಸುವುದಿಲ್ಲ. ಇರಾನ್ನ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನೂ ನವೀಕರಿಸುವುದಿಲ್ಲ. ಮಾರ್ಚ್ 11ಕ್ಕಿಂತ ಮೊದಲು ಸಮುದ್ರ ಮಾರ್ಗದಲ್ಲಿ ಸಾಗಣೆ ಮಾಡುತ್ತಿದ್ದ ತೈಲವನ್ನು ಈಗಾಗಲೇ ಬಳಸಲಾಗಿದೆ’ ಎಂದು ಹೇಳಿದ್ದಾರೆ.

ಮಾರ್ಚ್ 5ರಂದು ಅಮೆರಿಕವು ಭಾರತಕ್ಕೆ ತೈಲ ಖರೀದಿ ಮೇಲಿನ ನಿರ್ಬಂಧದಿಂದ 30 ದಿನಗಳವರೆಗೆ ವಿನಾಯಿತಿ ನೀಡಿತ್ತು. ರಷ್ಯಾದ ತೈಲ ಖರೀದಿಸುವುದಕ್ಕೂ ಭಾರತಕ್ಕೆ ಅನುಮತಿ ನೀಡಿತ್ತು. ಕೆಲ ದಿನಗಳ ನಂತರ, ಈ ವಿನಾಯಿತಿಯನ್ನು ಇತರ ರಾಷ್ಟ್ರಗಳಿಗೂ ವಿಸ್ತರಿಸಿತ್ತು. ಇದು ಏಪ್ರಿಲ್ 11ರಂದು ಮುಕ್ತಾಯಗೊಂಡಿತ್ತು.

‘ಫೆಬ್ರುವರಿಯಲ್ಲಿ ಕಡಿಮೆ ತೈಲ ಖರೀದಿಸಿದ್ದ ಭಾರತವು ಮಾರ್ಚ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸಿದೆ’ ಎಂದು ಯುರೋಪಿನ ಚಿಂತಕರ ಚಾವಡಿಯಾದ ‘ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್’ ತನ್ನ ವರದಿಯಲ್ಲಿ ತಿಳಿಸಿದೆ.

‘2026ರ ಮಾರ್ಚ್ನಲ್ಲಿ ರಷ್ಯಾದ ಪಳೆಯುಳಿಕೆ ಇಂಧನಗಳನ್ನು ಖರೀದಿಸಿದ ದೇಶಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಭಾರತವು ಒಟ್ಟು 580 ಕೋಟಿ ಯುರೋ (ಸುಮಾರು ₹63,724 ಕೋಟಿ) ಮೌಲ್ಯದ ರಷ್ಯಾದ ಹೈಡ್ರೋಕಾರ್ಬನ್ಗಳನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಕಚ್ಚಾ ತೈಲ ಉತ್ಪನ್ನಗಳೇ ಶೇಕಡ 91ರಷ್ಟಿದ್ದು, ಅವುಗಳ ಒಟ್ಟು ಮೌಲ್ಯ 530 ಕೋಟಿ ಯುರೋ (ಸುಮಾರು ₹58,231 ಕೋಟಿ) ಆಗಿದೆ’ ಎಂದು ಹೇಳಿದೆ.

33.7 ಕೋಟಿ ಯುರೋ (ಸುಮಾರು ₹3,702 ಕೋಟಿ) ಮೌಲ್ಯದ ಕಲ್ಲಿದ್ದಲು ಮತ್ತು 17.85 ಕೋಟಿ ಯುರೋ (ಸುಮಾರು ₹1,961 ಕೋಟಿ) ಮೌಲ್ಯದ ತೈಲ ಉತ್ಪನ್ನಗಳನ್ನು ಖರೀದಿಸಿತ್ತು. ಫೆಬ್ರುವರಿಯಲ್ಲಿ ಭಾರತವು ಮೂರನೇ ಅತಿದೊಡ್ಡ ಆಮದು ದೇಶವಾಗಿದ್ದು, ರಷ್ಯಾದಿಂದ 180 ಕೋಟಿ ಯುರೋ (₹19,776 ಕೋಟಿ) ಮೌಲ್ಯದ ಹೈಡ್ರೋಕಾರ್ಬನ್ಗಳನ್ನು ಖರೀದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.