ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಜಾ ಕದನ ವಿರಾಮಕ್ಕೆ ಇದು ಕಡೆಯ ಅವಕಾಶ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ

Published : 19 ಆಗಸ್ಟ್ 2024, 14:17 IST
Last Updated : 19 ಆಗಸ್ಟ್ 2024, 14:17 IST
ಫಾಲೋ ಮಾಡಿ
Comments

ಟೆಲ್ ಅವೀವ್: ಕದನ ವಿರಾಮ ಒಪ್ಪಂದವನ್ನು ಗಾಜಾದಲ್ಲಿ ಕಾರ್ಯರೂಪಕ್ಕೆ ತರಲು ಇದು ಸರಿಯಾದ ಸಮಯ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಸೋಮವಾರ ಹೇಳಿದ್ದಾರೆ. ಈ ಒಪ್ಪಂದ ಸಾಧ್ಯವಾದರೆ ಹಮಾಸ್ ಬಂಡುಕೋರರು ಒತ್ತೆಯಾಳಾಗಿ ಇರಿಸಿಕೊಂಡಿರುವವರ ಬಿಡುಗಡೆ ಸಾಧ್ಯವಾಗುತ್ತದೆ, ಗಾಜಾ ಪಟ್ಟಿಯಲ್ಲಿ ಇರುವ ಪ್ಯಾಲೆಸ್ಟೀನ್ ನಾಗರಿಕರಿಗೆ ತುಸು ನೆಮ್ಮದಿ ಸಿಗುತ್ತದೆ ಎಂದಿದ್ದಾರೆ.

ಹಮಾಸ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ಆರಂಭವಾದ ನಂತರದಲ್ಲಿ ಬ್ಲಿಂಕನ್ ಅವರು ಮಧ್ಯಪ್ರಾಚ್ಯಕ್ಕೆ ತುರ್ತು ಭೇಟಿ ನೀಡುತ್ತಿರುವುದು ಇದು ಒಂಬತ್ತನೆಯ ಬಾರಿ. ಹಮಾಸ್ ಮತ್ತು ಇಸ್ರೇಲ್ ನಡುವೆ ಒಪ್ಪಂದವೊಂದು ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ಅಮೆರಿಕ ಸೇರಿದಂತೆ ಕೆಲವು ಮಧ್ಯಸ್ಥಿಕೆದಾರರು ವ್ಯಕ್ತಪಡಿಸಿದ ನಂತರ ಬ್ಲಿಂಕನ್ ಇಲ್ಲಿಗೆ ಬಂದಿದ್ದಾರೆ.

ಆದರೆ, ಈಗಿನ ಪ್ರಸ್ತಾವಕ್ಕೆ ಹಮಾಸ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ. ಕೆಲವು ವಿಷಯಗಳಲ್ಲಿ ರಾಜಿ ಸಾಧ್ಯವೇ ಇಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.

ಕದನ ವಿರಾಮಕ್ಕೆ ಸಂಬಂಧಿಸಿದಂತೆ ಈಜಿಪ್ಟ್‌ನಲ್ಲಿ ಈ ವಾರ ಮಾತುಕತೆ ನಡೆಯುವ ನಿರೀಕ್ಷೆ ಇದೆ. ‘ಇದು ಬಹಳ ನಿರ್ಣಾಯಕವಾದ ಸಂದರ್ಭ. ಒತ್ತೆಯಾಳುಗಳನ್ನು ವಾಪಸ್ ಕರೆತರುವುದಕ್ಕೆ ಇದು ಬಹುಶಃ ಅತ್ಯುತ್ತಮವಾದ ಹಾಗೂ ಕೊನೆಯ ಅವಕಾಶ ಆಗಿರಬಹುದು’ ಎಂದು ಅವರು ಇಸ್ರೇಲ್ ಅಧ್ಯಕ್ಷ ಐಸಕ್ ಹಟ್ಜಾಗ್ ಜೊತೆಗಿನ ಮಾತುಕತೆಯ ಆರಂಭದಲ್ಲಿ ಹೇಳಿದರು.

‘ಈ ಪ್ರಕ್ರಿಯೆಯನ್ನು ಯಾರೂ ಹಳಿತಪ್ಪಿಸದಂತೆ ನೋಡಿಕೊಳ್ಳಬೇಕು’ ಎಂದು ಅವರು ಪರೋಕ್ಷವಾಗಿ ಇರಾನ್ ಉದ್ದೇಶಿಸಿ ಹೇಳಿದರು. ಇಸ್ರೇಲ್ ಪ್ರವಾಸ ಮುಗಿಸಿ ಬ್ಲಿಂಕನ್ ಅವರು ಈಜಿಪ್ಟ್‌ಗೆ ತೆರಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT