ಕ್ಯಾನ್ಬೆರಾ: ಭಾರತದ ಜಾಗತಿಕ ಆರ್ಥಿಕ ಬೆಳವಣಿಗೆಯು ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಒಂದು ಅಸಾಮಾನ್ಯ ಅವಕಾಶ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಬಣ್ಣಿಸಿದ್ದಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶಕ್ಕೆ ಮತ್ತೊಮ್ಮೆ ಸ್ವಾಗತಿಸಲು ತಾವು ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಕ್ಯಾನ್ಬೆರಾದಲ್ಲಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅಲ್ಬನೀಸ್, ‘ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವು ಪ್ರಸ್ತುತ ದಶಕದಲ್ಲೇ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲು ಸಜ್ಜಾಗಿದೆ’ ಎಂದರು.

‘ಇದು ನಮ್ಮ ಪ್ರದೇಶಕ್ಕೆ ಸಿಕ್ಕಿರುವ ಅತ್ಯಂತ ದೊಡ್ಡ ಅವಕಾಶವಾಗಿದೆ. ನಮ್ಮದು ಫೆಸಿಫಿಕ್ ರಾಷ್ಟ್ರ ಹೌದು, ಜೊತೆಗೆ ಹಿಂದೂ ಮಹಾಸಾಗರದ ರಾಷ್ಟ್ರವೂ ಆಗಿದ್ದೇವೆ’ ಎಂದು ಉಭಯ ದೇಶಗಳ ಭೌಗೋಳಿಕ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

2022ರಲ್ಲಿ ಸಹಿ ಹಾಕಲಾದ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದವು ಉಭಯ ದೇಶಗಳ ನಡುವಿನ ವಾಣಿಜ್ಯ ಸಂಬಂಧವನ್ನು ಬಲಪಡಿಸಿದೆ. ಸಂಸ್ಕೃತಿ, ಶಿಕ್ಷಣ ಮತ್ತು ಕ್ರಿಕೆಟ್ ನಮ್ಮನ್ನು ಮತ್ತಷ್ಟು ಹತ್ತಿರ ತಂದಿವೆ ಎಂದು ಅವರು ಸ್ಮರಿಸಿದರು.

1991ರಲ್ಲಿ ತಾವು ಮೊದಲ ಬಾರಿಗೆ ಸಾಮಾನ್ಯ ಪ್ರವಾಸಿಯಾಗಿ ಭಾರತಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಅಲ್ಬನೀಸ್, ಪ್ರಧಾನಿಯಾದ ಬಳಿಕ ಎರಡು ಬಾರಿ ಭಾರತಕ್ಕೆ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.

ಭಾರತದ ನೈಜ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುವುದೇ ಅತ್ಯುತ್ತಮ ಮಾರ್ಗ. ಭಾರತೀಯರ ಆತ್ಮೀಯತೆಯನ್ನು ಹತ್ತಿರದಿಂದ ನೋಡುವುದು ಒಂದು ಅದ್ಭುತ ಅನುಭವ. ಈಗ ಅದೇ ರೀತಿ ಶೀಘ್ರದಲ್ಲೇ ಪ್ರಧಾನಿ ಮೋದಿ ಅವರನ್ನು ಇಲ್ಲಿ ಆತಿಥ್ಯ ನೀಡುವ ಸೌಭಾಗ್ಯ ನನ್ನದಾಗಲಿದ್ದು, ಎರಡನೇ ಬಾರಿಗೆ ಈ ಅವಕಾಶವನ್ನು ಪುನರಾವರ್ತಿಸಲು ನಾನು ಉತ್ಸುಕನಾಗಿದ್ದೇನೆ ಎಂದರು.

ಆಸ್ಟ್ರೇಲಿಯಾದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ವಲಸೆ ಸಮುದಾಯವಾಗಿರುವ 10 ಲಕ್ಷಕ್ಕೂ ಅಧಿಕ ಭಾರತೀಯ-ಆಸ್ಟ್ರೇಲಿಯನ್ನರು ಪ್ರಧಾನಿ ಮೋದಿಯವರ ಈ ಭೇಟಿಯನ್ನು ಮತ್ತಷ್ಟು ಐತಿಹಾಸಿಕವಾಗಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಕೊನೆಯದಾಗಿ 2023ರ ಮೇ ತಿಂಗಳಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದರು.

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯವು ದೇಶದ ಆರ್ಥಿಕತೆಯನ್ನು ಬಲಪಡಿಸಿದೆ ಮತ್ತು ಅಸಂಖ್ಯಾತ ಸಣ್ಣ ಉದ್ಯಮಗಳಿಗೆ ನೆರವಾಗಿದೆ. ನಿಮ್ಮಿಂದಾಗಿ ನಮ್ಮ ದೇಶ ಮತ್ತಷ್ಟು ಉತ್ತಮಗೊಂಡಿದೆ. ನನ್ನ ಸರ್ಕಾರ ಯಾವಾಗಲೂ ನಿಮ್ಮ ಹಿತಾಸಕ್ತಿಗಳ ಪರವಾಗಿ ನಿಲ್ಲುತ್ತದೆ. ಸಮಾಜವನ್ನು ಒಡೆಯುವ ಯಾವುದೇ ಪ್ರಯತ್ನಗಳನ್ನು ನಾವು ತಳ್ಳಿಹಾಕುತ್ತೇವೆ’

ಆಸ್ಟ್ರೇಲಿಯಾ ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಿದ ವಿಡಿಯೊ ತುಣುಕನ್ನು ಭಾರತದಲ್ಲಿನ ಆಸ್ಟ್ರೇಲಿಯಾ ಹೈಕಮಿಷನರ್ ಫಿಲಿಪ್ ಗ್ರೀನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪ್ರಧಾನಿಗೆ ಭಾರತದ ಮೇಲಿರುವ ಗೌರವವು ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರನ್ನು ಭೇಟಿ ಮಾಡಿ ಉಭಯ ದೇಶಗಳ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಬಗ್ಗೆ ಚರ್ಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.