ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವನ್ನು ಇಲ್ಲಿನ ಮಧ್ಯಂತರ ಸರ್ಕಾರವು ಶನಿವಾರ ನಿಷೇಧಿಸಿದೆ.

‘ಭಯೋತ್ಪಾದಕ ನಿಗ್ರಹ ಕಾಯ್ದೆಯಡಿ ಅವಾಮಿ ಲೀಗ್ ಪಕ್ಷದ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಈ ಪಕ್ಷದ ಚಟುವಟಿಕೆಗಳು ಮತ್ತು ನಾಯಕರ ವಿಚಾರಣೆ ಮುಕ್ತಾಯವಾಗುವವರೆಗೆ ನಿಷೇಧ ಮುಂದುವರಿಯಲಿದೆ’ ಎಂದು ಸರ್ಕಾರದ ಕಾನೂನು ಮತ್ತು ನ್ಯಾಯದ ಸಲಹೆಗಾರ ಆಸಿಫ್ ನಜ್ರುಲ್ ತಿಳಿಸಿದ್ದಾರೆ.

ದೇಶದ ಸಾರ್ವಭೌಮ ಮತ್ತು ಭದ್ರತೆ ಹಾಗೂ ಪ್ರತಿಭಟನಕಾರರ ಭದ್ರತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಮತ್ತೊಂದೆಡೆ ರಾಜಕೀಯ ಪಕ್ಷಗಳು ಮತ್ತು ಆ ಪಕ್ಷಗಳಿಗೆ ಸಂಬಂಧಿಸಿದ ಸಂಸ್ಥೆಗಳನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಲು ಅವಕಾಶ ನೀಡುವ ದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಾಧಿಕರಣ ಕಾಯ್ದೆ (ಇಂಟರ್ ನ್ಯಾಷನಲ್ ಕ್ರೈಮ್ಸ್ ಟ್ರಿಬ್ಯುನಲ್ ಆ್ಯಕ್ಟ್)ಗೆ ತಿದ್ದುಪಡಿಗೆ ಯೂನಸ್ ಆಡಳಿತವು ಅನುಮೋದಿಸಿದೆ.

ಆಡಳಿತದ ಕ್ರಮವನ್ನು ತಳ್ಳಿಹಾಕಿರುವ ಅವಾಮಿ ಲೀಗ್ ಪಕ್ಷವು, ಇದು ಕಾನೂನು ಬಾಹಿರ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.