ಢಾಕಾ, ಬಾಂಗ್ಲಾದೇಶ: ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ದಡಾರ ರೋಗವು ವ್ಯಾಪಕವಾಗಿ ಹರಡುತ್ತಿದ್ದು, ಸಾವಿರಾರು ಮಂದಿ ಕಾಯಿಲೆಗೆ ತುತ್ತಾಗಿದ್ದಾರೆ. ಇವರಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರ ತುರ್ತು ಲಸಿಕಾ ಅಭಿಯಾನ ನಡೆಸುವ ಮೂಲಕ ರೋಗವನ್ನು ಹತೋಟಿಗೆ ತರಲು ಮುಂದಾಗಿದೆ.

‘ಕಳೆದ ಮಾರ್ಚ್ನಿಂದ ಈ ವರೆಗೆ 8 ಸಾವಿರ ಮಂದಿ ಶಂಕಿತ ಸೋಂಕಿಗೆ ತುತ್ತಾಗಿದ್ದಾರೆ. ಇದು ಕಳೆದೆರಡು ದಶಕದಲ್ಲಿಯೇ ಅತ್ಯಂತ ಗರಿಷ್ಠ ಪ್ರಮಾಣವಾಗಿದೆ. ಈ ಅವಧಿಯಲ್ಲಿ 401 ಮಂದಿ ಮೃತಪಟ್ಟಿದ್ದಾರೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘5 ವರ್ಷದ ಒಳಗಿನ ಪ್ರತಿ ಐದು ಮಕ್ಕಳ ಪೈಕಿ ನಾಲ್ಕು ಮಕ್ಕಳಲ್ಲಿ ದಡಾರ ಕಾಣಿಸಿಕೊಂಡಿದೆ’ ಯುನಿಸೆಫ್ನ ಬಾಂಗ್ಲಾದೇಶದ ಪ್ರತಿನಿಧಿ ರಾಣಾ ಫ್ಲವರ್ಸ್ ಮಾಹಿತಿ ನೀಡಿದ್ದಾರೆ.

‘ಕಾಯಿಲೆ ಉಲ್ಬಣಗೊಂಡಿರುವ ಕಾರಣ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಢಾಕಾದ ‘ಶಿಶು ಆಸ್ಪತ್ರೆ’ಯಲ್ಲಿ 120 ಹಾಸಿಗೆಗಳನ್ನು ದಡಾರ ರೋಗಿಗಳಿಗೆ ಮೀಸಲಿರಿಸಲಾಗಿದೆ. ಇದು, ದೇಶದಲ್ಲಿಯೇ ಅತೀ ದೊಡ್ಡ ಮಕ್ಕಳ ಆಸ್ಪತ್ರೆಯಾಗಿದ್ದು, ಎಲ್ಲ ಹಾಸಿಗೆಗಳು ಭರ್ತಿಯಾಗಿವೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಅಂತರರಾಷ್ಟ್ರೀಯ ಸಂಸ್ಥೆಗಳ ನೆರವಿನೊಂದಿಗೆ ದೇಶದಾದ್ಯಂತ ತುರ್ತು ಲಸಿಕಾ ಅಭಿಯಾನವನ್ನು ಕಳೆದ ತಿಂಗಳಿನಿಂದಲೇ ಆರಂಭಿಸಿದ್ದು, ಇದರಿಂದ ರೋಗ ಹರಡುವುದು ಕಡಿಮೆಯಾಗಿದೆ’ ಎಂದು ಬಾಂಗ್ಲಾದೇಶ ರೋಗ ನಿಯಂತ್ರಣ ವಿಭಾಗದ ನಿರ್ದೇಶಕ ಡಾ.ಹಲಿಮುರ್ ರಷೀದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.