ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶೀಯರಿಗೆ ಕೋಪವಿಲ್ಲ, ನೋವಿದೆ: ಮಾಜಿ ಸಚಿವ ಅಬ್ದುಲ್ ಮೊಯೀನ್ ಖಾನ್

Published 23 ಆಗಸ್ಟ್ 2024, 15:14 IST
Last Updated 23 ಆಗಸ್ಟ್ 2024, 15:14 IST
ಅಕ್ಷರ ಗಾತ್ರ

ಢಾಕಾ: ‘ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಇರುವ ಕುರಿತು ಬಾಂಗ್ಲಾದೇಶೀಯರಿಗೆ ಕೋಪವಿಲ್ಲ, ನೋವಿದೆ’ ಎಂದು ಮಾಜಿ ಕ್ಯಾಬಿನೆಟ್ ಸಚಿವ ಅಬ್ದುಲ್ ಮೊಯೀನ್ ಖಾನ್ ಹೇಳಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಖಾನ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದರು. 

ಭಾರತದಲ್ಲಿ ಹಸೀನಾ ಇರುವ ಕಾರಣ ಬಾಂಗ್ಲಾ–ಭಾರತದ ಸಂಬಂಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ಭಾರತದ ನಿರ್ಧಾರದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ’ ಎಂದು ಹೇಳಿದರು.

‘ನಮ್ಮ ದೇಶವು ಭಾರತದೊಂದಿಗೆ ಮೂರು ಕಡೆ ಗಡಿಯನ್ನು ಹಂಚಿಕೊಂಡಿದೆ ಮತ್ತು ಅದು ದೊಡ್ಡ ನೆರೆಯ ದೇಶವಾಗಿದೆ. ಆದ್ದರಿಂದ ಭಾರತವು ನಮ್ಮ ಉತ್ತಮ ಸ್ನೇಹಿತನಾಗದಿರಲು ಯಾವುದೇ ಕಾರಣವಿಲ್ಲ’ ಎಂದರು.

ಪ್ರಸ್ತುತ ಬಾಂಗ್ಲಾ ಪರಿಸ್ಥಿತಿಯು ಸುಧಾರಿಸುತ್ತಿದ್ದು, ಸಹಜ ಸ್ಥಿತಿಗೆ ಮರಳುತ್ತಿದೆ. ಮಧ್ಯಂತರ ಸರ್ಕಾರವು ದೇಶವನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಖಾನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT