ಬೈರೂತ್: ಲೆಬನಾನ್ನ ರಾಜಧಾನಿ ಬೈರೂತ್ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ಶುಕ್ರವಾರ ಬೆಳಿಗ್ಗೆ ಭಾರಿ ವಾಯುದಾಳಿ ನಡೆಸಿದೆ.

‘ಹಿಜ್ಬುಲ್ಲಾ ಉಗ್ರರ ತಾಣಗಳ ಮೇಲೆ ದಾಳಿ ನಡೆಸಲಾಗಿದೆ. ಆ ಪ್ರದೇಶಗಳಲ್ಲಿರುವ ಜನರು ಸ್ಥಳಾಂತರಗೊಳ್ಳುವಂತೆ ಮೊದಲೇ ಮುನ್ನೆಚ್ಚರಿಕೆ ನೀಡಲಾಗಿತ್ತು. ದಾಳಿಯು ಯಶಸ್ವಿಯಾಗಿದ್ದು, ಭಯೋತ್ಪಾದಕರ ಮಿಲಿಟರಿ ನೆಲೆಗಳನ್ನು ನಾಶಪಡಿಸಲಾಗಿದೆ’ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಇಸ್ರೇಲ್ ವಾಯುದಾಳಿ ನಡೆಸಿದ ಉಪನಗರಗಳ ವಸತಿ ಸಮುಚ್ಚಯಗಳು ಹಾನಿಗೊಳಗಾಗಿವೆ. ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಇಡೀ ಪ್ರದೇಶದಲ್ಲಿ ದೂಳು ತುಂಬಿರುವ ವಿಡಿಯೊ ತುಣಕನ್ನು ಎಎಫ್ಪಿಟಿವಿಯು ಬಿತ್ತರಿಸಿದೆ.

ಸೋಮವಾರದಿಂದ ನಡೆದಿರುವ ದಾಳಿಯಲ್ಲಿ 123 ಜನರು ಮೃತಪಟ್ಟಿದ್ದಾರೆ ಎಂದು ಲೆಬನಾನ್ನ ಆರೋಗ್ಯ ಸಚಿವಾಲಯ ತಿಳಿಸಿದೆ.

‘ದಕ್ಷಿಣ ಉಪನಗರಗಳ ಬೀದಿಗಳು ಶುಕ್ರವಾರ ಬೆಳಿಗ್ಗೆ ನಿರ್ಜನವಾಗಿದ್ದವು. ನೆಲಸಮವಾಗಿದ್ದ ಕಟ್ಟಡಗಳ ಅವಶೇಷಗಳಿಂದ ಹೊಗೆ ಬರುತ್ತಿತ್ತು. ಧರೆಗುರುಳಿದ್ದ ಕಟ್ಟಡಗಳ ತ್ಯಾಜ್ಯ ತೆರವಿಗಾಗಿ ಬುಲ್ಡೋಜರ್ ಚಲಿಸುತ್ತಿರುವುದು ಬಿಟ್ಟರೆ, ಬೇರೆ ಯಾವೊಂದು ಚಲನೆಯೂ ಇಲ್ಲಿ ಕಂಡುಬರಲಿಲ್ಲ’ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಸ್ರೇಲ್ ಸೋಮವಾರದಿಂದ ಇಲ್ಲಿಯವರೆಗೂ ಲೆಬನಾನ್ ಮೇಲೆ ಒಟ್ಟು 26 ಸಲ ವಾಯುದಾಳಿ ನಡೆಸಿದೆ.

ಹಿಜ್ಬುಲ್ಲಾ ಬಂಡುಕೋರರ ಭದ್ರಕೋಟೆಯಂತಿದ್ದ ಕಮಾಂಡ್ ಕೇಂದ್ರಗಳ ಮೇಲೆ ಇಸ್ರೇಲ್ ಸೇನೆ ಗುರುವಾರ ರಾತ್ರಿ ಸಹ ಬೃಹತ್ ಪ್ರಮಾಣದಲ್ಲಿ ದಾಳಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.