ಬೆಂಗಳೂರು: ‘ಸಾಮ್ರಾಜ್ಯಶಾಹಿ ಮನಸ್ಥಿತಿಯನ್ನು ಈಗಲೂ ಮುಂದುವರಿಸಿರುವ ಕೆಲವು ದೇಶಗಳು ತಮ್ಮ ಪ್ರಾಬಲ್ಯ ಸಾಧನೆಗೆ ಜಗತ್ತಿನಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣ ಮಾಡಿವೆ’ ಎಂದು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯ ಕೆ.ರಾಧಾಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ 78ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಒಂದು ಕಾಲದಲ್ಲಿ ರಷ್ಯಾ ಮತ್ತು ಚೀನಾ ಕಮ್ಯುನಿಸ್ಟ್, ಸಮಾಜವಾದಿ ಹಿನ್ನೆಲೆ ಹೊಂದಿದ್ದ ದೇಶಗಳಾಗಿದ್ದವು. ಈಗಂತೂ ಚೀನಾ ಜಗತ್ತಿನ ಆರ್ಥಿಕತೆಯ ಮೇಲೆ ಪ್ರಾಬಲ್ಯ ಸಾಧಿಸುತ್ತಿದೆ. ಇದನ್ನು ತಡೆಯಲು ಅಮೆರಿಕ ಪ್ರಯತ್ನ ನಡೆಸುತ್ತಿದೆ. ಜಗತ್ತಿನ ನಾನಾ ದೇಶಗಳಲ್ಲಿ ನಡೆದಿರುವ ಯುದ್ಧಗಳು ಅಮೆರಿಕ, ಚೀನಾ ಸಹಿತ ಹಲವು ದೇಶಗಳ ಸಾಮ್ರಾಜ್ಯಶಾಹಿ ಬಿಕ್ಕಟ್ಟಿನ ಪ್ರತಿಫಲನ’ ಎಂದು ಟೀಕಿಸಿದರು.

‘ಭಾರತದಲ್ಲೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಕಾರ್ಪೊರೇಟ್ ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿದೆ. ಇದರ ಪರಿಣಾಮ ನೊಯ್ಡಾ, ಗುರುಗ್ರಾಮ, ಪನೇಸರ್, ದೆಹಲಿ ಸಹಿತ ನಾನಾ ಕಡೆಗಳಲ್ಲಿ ನಡೆದ ಕಾರ್ಮಿಕ ಹೋರಾಟಗಳಲ್ಲಿ ಪ್ರತಿಫಲಿಸಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಎನ್ನುವುದು ಮತ್ತೊಂದು ರೀತಿ ಜನರ ಹಕ್ಕು ಕಸಿಯುವ ಪ್ರಯತ್ನವಾಗಿದೆ. ದೇಶದ ವಿದ್ಯಮಾನ ಅರ್ಥೈಸಿಕೊಂಡು ಜನ ಹೋರಾಟ ರೂಪಿಸಬೇಕಾಗಿದೆ’ ಎಂದು ಹೇಳಿದರು.

ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಡಾ ಸುನೀತ್ ಕುಮಾರ್ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಮರು ವರ್ಷವೇ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷ ಆರಂಭಗೊಂಡು ನಿರಂತರ ವಾಗಿ ಜನಪರ ಹೋರಾಟ, ಸಂಘಟನೆಯಲ್ಲಿ ತೊಡಗಿಸಿಕೊಂಡಿದೆ. ಭಾರತದ ರೈತರು, ಕಾರ್ಮಿಕರಿಗೆ ನಿಜಾರ್ಥದಲ್ಲಿ ಇನ್ನೂ ಸ್ವಾತಂತ್ರ್ಯ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಮಿತಿ ಸದಸ್ಯ ಎಂ.ಎನ್.ಶ್ರೀರಾಮ್, ‘ಯಾವುದೇ ದೇಶದಲ್ಲಿ ಕ್ರಾಂತಿ ಆಗಬೇಕು ಎಂದರೆ ಕ್ರಾಂತಿಕಾರಿ ಸಿದ್ಧಾಂತ, ಪಕ್ಷ ಬೇಕು ಎಂಬ ಲೆನಿನ್, ಶಿವದಾಸ್ ಘೋಷ್ ಅವರವಿಚಾರದಂತೆ ಈ ಪಕ್ಷ ಆರಂಭ ಗೊಂಡಿದೆ. ಪಕ್ಷದ ಸಿದ್ಧಾಂತ, ವಿಚಾರ ಗಳನ್ನು ಕಾರ್ಯಕರ್ತರು ಆಳವಾಗಿ ಅರ್ಥೈಸಿಕೊಂಡು ಜನಪರವಾಗಿ ಕೆಲಸ ಮಾಡಬೇಕು’ ಎಂದರು.

ರಾಜ್ಯ ಸಮಿತಿಯ ಸದಸ್ಯರಾದ ಜ್ಞಾನ ಮೂರ್ತಿ, ಬಿ.ಆರ್.ಅಪರ್ಣಾ, ವಿ.ಎನ್.ರಾಜಶೇಖರ್, ಬಿ.ರವಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-4-1622426955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.