ಪುರಿ(ಒಡಿಶಾ)(ಪಿಟಿಐ): ಬ್ರಿಕ್ಸ್ ವಿಪತ್ತು ಅಪಾಯ ತಗ್ಗಿಸುವ ಕುರಿತ ಕಾರ್ಯಕಾರಿ ಗುಂಪಿನ ಎರಡನೇ ತಾಂತ್ರಿಕ ಸಭೆ ಪುರಿಯಲ್ಲಿ ಬುಧವಾರ ಆರಂಭವಾಯಿತು.

‘ಬ್ರಿಕ್ಸ್’ ಗುಂಪಿನ 11 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿರುವ ಈ ಸಭೆಯು ಜೂನ್ 5ರವರೆಗೆ ನಡೆಯಲಿದೆ. ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಗುರುವಾರ ನಡೆಯುವ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಭಾರತವು ಬ್ರಿಕ್ಸ್ನ ಅಧ್ಯಕ್ಷ ಸ್ಥಾನ ವಹಿಸಿದ ಬಳಿಕ ಭೌತಿಕವಾಗಿ ನಡೆಯುತ್ತಿರುವ ಮೊದಲ ತಾಂತ್ರಿಕ ಸಭೆ ಇದಾಗಿದೆ. ಏಪ್ರಿಲ್ 29 ಹಾಗೂ 30ರಂದು ಈ ಸಭೆಯು ವರ್ಚುವಲ್ ಆಗಿ ನಡೆದಿತ್ತು’ ಎಂದು ಒಡಿಶಾದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಹೇಳಿದರು.

‘ಒಡಿಶಾದಲ್ಲಿ ಇದೇ ಮೊದಲ ಬಾರಿಗೆ ಈ ಸಭೆಯು ನಡೆಯುತ್ತಿದ್ದು, ಬ್ರಿಕ್ಸ್ ರಾಷ್ಟ್ರಗಳ ನೀತಿ ನಿರೂಪಕರು ಹಾಗೂ ವಿಪತ್ತು ನಿರ್ವಹಣಾ ತಜ್ಞರು ಈ ಸಭೆಯಲ್ಲಿ ಪಾಲ್ಗೊಳ್ಳುವರು’ ಎಂದೂ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-2038640911

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.