ಡಿಯೆಗೊ ಗಾರ್ಸಿಯಾ ವಾಯುನೆಲೆಯು ಹಿಂದೂ ಮಹಾಸಾಗರದಲ್ಲಿ ಇರುವ ಚಾಗೋಸ್ ದ್ವೀಪ ಸಮೂಹದ ಭಾಗ. ಈ ದ್ವೀಪಗಳು 1814ರಿಂದ ಬ್ರಿಟಿಷ್ ನಿಯಂತ್ರಣ ದಲ್ಲಿದ್ದು, ಅಮೆರಿಕದ 2,500 ಸಿಬ್ಬಂದಿಗೆ ನೆಲೆಯಾಗಿದೆ. ಅಮೆರಿಕದ ಹಲವು ಕಾರ್ಯಾಚರಣೆಗಳಲ್ಲಿ ಇದು ಬಳಕೆಯಾಗಿದೆ.

ಬ್ರಿಟನ್ ಖಂಡನೆ: ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಬ್ರಿಟನ್ ತೀವ್ರವಾಗಿ ಖಂಡಿಸಿದೆ. ಈ ದಾಳಿ ಮೂಲಕ ಇರಾನ್ ಅಜಾಗರೂಕವಾಗಿ ವರ್ತಿಸಿದೆ ಎಂದು ಅದು ಟೀಕಿಸಿದೆ. ಅಲ್ಲದೆ, ಹೊರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸುವ ಯತ್ನ, ಬ್ರಿಟನ್ ಹಿತಾಸಕ್ತಿ ಮತ್ತು ಮಿತ್ರರಾಷ್ಟ್ರ ಭದ್ರತೆಗೆ ಬೆದರಿಕೆಯಾಗಿದೆ ಎಂದು ಬ್ರಿಟನ್ನ ರಕ್ಷಣಾ ಸಚಿವಾಲಯ ಆಕ್ರೋಶ ವ್ಯಕ್ತಪಡಿಸಿದೆ.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಲ್ಲಿ ಇಲ್ಲಿಯವರೆಗೆ ಬ್ರಿಟನ್ ನೇರವಾಗಿ ಭಾಗಿಯಾಗಿಲ್ಲ. ಆದರೆ, ಅಮೆರಿಕಕ್ಕೆ ತನ್ನ ನೆಲೆಗಳನ್ನು ಬಳಸಲು ಅವಕಾಶ ಮಾಡಿಕೊಟ್ಟಿದೆ. ಇದೀಗ ಇರಾನ್ ಕ್ಷಿಪಣಿ ದಾಳಿಯಿಂದ ಅದು ಕುಪಿತಗೊಂಡಿದೆ.

ಟ್ರಂಪ್, ಕಾಟ್ಜ್ ವ್ಯತಿರಿಕ್ತ ಹೇಳಿಕೆ: ‘ಪಶ್ಚಿಮ ಏಷ್ಯಾದಲ್ಲಿ ಸೇನಾ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸುತ್ತಿರುವುದಾಗಿ’ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ, ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು, ‘ಇರಾನ್ ಮೇಲಿನ ದಾಳಿಗಳು ಮುಂದಿನ ವಾರಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಲಿವೆ’ ಎಂದಿದ್ದಾರೆ. ಹೀಗಾಗಿ ಸದ್ಯಕ್ಕೆ ಯುದ್ಧ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಇರಾನ್ ತನ್ನ ಮೇಲೆ ಕ್ಷಿಪಣಿಗಳನ್ನು ಹಾರಿಸುವುದನ್ನು ಮುಂದುವರಿಸಿದೆ ಎಂದು ಇಸ್ರೇಲ್ ಹೇಳಿದೆ. ಸೌದಿ ಅರೇಬಿಯಾವು ಪೂರ್ವ ಭಾಗದಲ್ಲಿ ಒಂದೆರಡು ಗಂಟೆಗಳಲ್ಲಿ ಬಂದ 20 ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ. ಇನ್ನೊಂದೆಡೆ, ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಏರಿಕೆ ದಾಖಲಾದ ಬಳಿಕ ಷೇರು ಮಾರುಕಟ್ಟೆಯಲ್ಲಿ ಇನ್ನಷ್ಟು ಕುಸಿತ ಕಂಡಿದೆ. ಇದರ ಬೆನ್ನಲ್ಲೇ ಟ್ರಂಪ್ ಆಡಳಿತವು, ಈಗಾಗಲೇ ಹಡಗುಗಳಲ್ಲಿ ತುಂಬಿರುವ ಇರಾನ್ ತೈಲದ ಮೇಲಿನ ನಿರ್ಬಂಧಗಳನ್ನು ತೆಗೆದಿರುವುದಾಗಿ ಘೋಷಿಸಿದೆ.

ಇದರ ನಡುವೆಯೇ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು, ‘ಇಸ್ರೇಲ್ ಹೊರತುಪಡಿಸಿ ನೆರೆಹೊರೆಯ ದೇಶಗಳ ಜತೆ ನಮಗೆ ಯಾವುದೇ ವಿವಾದ ಇಲ್ಲ’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-51-133928163

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.