ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ವಿರೋಧಿ ಕೃತ್ಯದ ವಿರುದ್ಧ ಕ್ರಮ: ಬ್ರಿಟನ್ ಸಂಸತ್ತಿನಲ್ಲಿ ನಿರ್ಣಯ

Published 4 ನವೆಂಬರ್ 2023, 13:23 IST
Last Updated 4 ನವೆಂಬರ್ 2023, 13:23 IST
ಅಕ್ಷರ ಗಾತ್ರ

ಲಂಡನ್: ಹಿಂದೂ ವಿರೋಧಿ ಕೃತ್ಯಗಳ ವಿರುದ್ಧ ಮೆಟ್ರೊಪಾಲಿಟನ್‌ ಪೊಲೀಸರು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಭಾರತ ಮೂಲದ ಬ್ರಿಟನ್‌ ಸಂಸದ ಕೃಪೇಶ್‌ ಹಿರಾನಿ ಅವರು ಸಂಸತ್ತಿನಲ್ಲಿ ಮಂಡಿಸಿದ ನಿರ್ಣಯಕ್ಕೆ ಸರ್ವಾನುಮತದ ಒಪ್ಪಿಗೆ ದೊರೆತಿದೆ. 

ಸ್ಥಳೀಯ ಹಿಂದೂ ಸಮುದಾಯದವರಲ್ಲಿ ವಿಶ್ವಾಸ ಮೂಡಿಸಿ, ಅವರ ಸಹಕಾರದೊಂದಿಗೆ ಇಂತಹ ಕೃತ್ಯಗಳನ್ನು ತಡೆಗಟ್ಟಬೇಕು ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಇದಕ್ಕೂ ಮುನ್ನ ಮಾತನಾಡಿದ ಕೃಪೇಶ್‌ ಹಿರಾನಿ, ‘ಹಿಂದೂಫೋಬಿಯಾ’ ಮತ್ತು ಲಂಡನ್‌ ಜನರ ಮೇಲೆ ಅದು ಬೀರುತ್ತಿರುವ ಪರಿಣಾಮದ ಬಗ್ಗೆ ವಿವರಿಸಿದರು.

‘ಲಂಡನ್‌ ಅಥವಾ ಅದರಾಚೆಗೆ ಹಿಂದೂಫೋಬಿಯಾಗೆ ಜಾಗ ಇಲ್ಲ. ದುರದೃಷ್ಟವಶಾತ್‌ ಕಳೆದ ಕೆಲ ವರ್ಷಗಳಿಂದ ನಮ್ಮ ಸಮುದಾಯದ ವಿರುದ್ಧ ದ್ವೇಷದ ಕೃತ್ಯಗಳು ಹೆಚ್ಚಾಗಿವೆ’ ಎಂದು ಹಿರಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT