ಒಟ್ಟಾವ: ‘ಭಾರತ ಸರ್ಕಾರದ ನಂಟಿರುವ ಯಾವುದೇ ಗೋಪ್ಯ ಅಥವಾ ವಿಧ್ವಂಸಕರ ಚಟುವಟಿಕೆಗಳು ಕೆನಡಾದಲ್ಲಿ ನಡೆಯುತ್ತಿಲ್ಲ’ ಎಂದು ಕೆನಡಾದ ಪೊಲೀಸ್ ಮುಖ್ಯಸ್ಥರೊಬ್ಬರು ಹೇಳಿದ್ದಾರೆ.

ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್ಸಿಎಂಪಿ) ಆಯುಕ್ತ ಮೈಕ್ ಡುಹೀಮ್ ಅವರು ಸಿಟಿವಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ. ಮೈಕ್ ಅವರ ಸಂದರ್ಶನ ಭಾನುವಾರ ಪ್ರಸಾರಗೊಳ್ಳಲಿದೆ.

‘ದೇಶದಲ್ಲಿ ಭಾರತೀಯ ಏಜೆಂಟರ ದಮನಕಾರಿ ಚಟುವಟಿಕೆಗಳ ಆತಂಕ ಇದೆಯೇ’ ಎಂಬ ಪ್ರಶ್ನೆಗೆ,‘ನಮ್ಮ ತನಿಖೆಯಲ್ಲಿ ಈವರೆಗೂ ಅಪರಾಧಿಕ ಚಟುವಟಿಕೆ ಕುರಿತ ಮಾಹಿತಿಗಳನ್ನು ಪರಿಶೀಲಿಸಿದಾಗ ಸದ್ಯಕ್ಕೆ ಯಾವುದೇ ವಿದೇಶಿ ಶಕ್ತಿಯ ನಂಟು ಕಂಡು ಬರುತ್ತಿಲ್ಲ’ ಎಂದಿದ್ದಾರೆ.

‘ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ’ ಎಂದು 2023ರಲ್ಲಿ ಕೆನಡಾದ ಅಂದಿನ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಇದನ್ನು ಭಾರತ ಸರ್ಕಾರ ತಳ್ಳಿಹಾಕಿತ್ತು. 2024ರಲ್ಲಿ ಭಾರತ ತನ್ನ ರಾಯಭಾರಿ ಸೇರಿದಂತೆ ಐವರು ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತ್ತು. ಅಂದಿನಿಂದ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು.

2025ರ ಏಪ್ರಿಲ್ನಲ್ಲಿ ಲಿಬರಲ್ ಪಕ್ಷದ ಮಾರ್ಕ್ ಕಾರ್ನಿ ಅವರು ಪ್ರಧಾನಿಯಾಗಿ ಆಯ್ಕೆಯಾದ ನಂತರ ಸಂಬಂಧ ಪುನರ್ ಸ್ಥಾಪನೆಯ ಯತ್ನ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಕೆನಡಾ ಪ್ರಧಾನಿ ಭಾರತಕ್ಕೆ ಭೇಟಿ ನೀಡಿ ಆರ್ಥಿಕ ಪಾಲುದಾರಿಕೆ ಸೇರಿದಂತೆ ಹಲವು ಒಪ್ಪಂದಕ್ಕೆ ಸಹಿ ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.