ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತ್ತೀಚಿನ ವರ್ಷಗಳಲ್ಲಿ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಕ್ಕೆ ಹಿನ್ನಡೆ: ವಾಂಗ್ ಯಿ

ಗಡಿ ಬಿಕ್ಕಟ್ಟು ನಿರ್ವಹಣೆಗೆ ಸಮಾಲೋಚನೆಗೆ ಕರೆ
Last Updated 7 ಮಾರ್ಚ್ 2022, 13:24 IST
ಅಕ್ಷರ ಗಾತ್ರ

ಬೀಜಿಂಗ್: ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಚೀನಾದ ದ್ವಿಪಕ್ಷೀಯ ಸಂಬಂಧದಲ್ಲಿ ಕೆಲವು ಹಿನ್ನಡೆಯಾಗಿದೆ ಎಂಬುದನ್ನು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಒಪ್ಪಿಕೊಂಡಿದ್ದಾರೆ. ಸಮಾನ ಹಂತದ ಸಮಾಲೋಚನೆಗಳ ಮೂಲಕ ಗಡಿ ಬಿಕ್ಕಟ್ಟುಗಳನ್ನು ನಿರ್ವಹಿಸಲು ಕರೆ ನೀಡಿದ್ದಾರೆ.

ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಂಗ್ ಯಿ ಅವರು, ಭಾರತ ಮತ್ತು ಚೀನಾ ನಡುವಿನ ಪ್ರಕ್ಷುಬ್ಧತೆಯನ್ನು ಪ್ರಚೋದಿಸುವ ಕೆಲಸಕ್ಕೆ ಕೆಲವು ಶಕ್ತಿಗಳು ಮುಂದಾಗುತ್ತವೆ ಎಂದಿದ್ದಾರೆ. ತನ್ಮೂಲಕ ಅಮೆರಿಕದ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಭಾರತ ಮತ್ತು ಚೀನಾದ ದ್ವಿಪಕ್ಷೀಯ ಸಂಬಂಧದಲ್ಲಿ ಕೆಲವು ಹಿನ್ನಡೆಯಾಗಿದೆ. ಇದರಿಂದ ಉಭಯ ದೇಶಗಳ ಮೂಲಭೂತ ಹಿತಾಸಕ್ತಿಗಳನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಭಾರತ ಮತ್ತು ಚೀನಾ ಎದುರಾಳಿಯಾಗಬಾರದು. ಬದಲಾಗಿ ಪಾಲುದಾರಿಕೆ ರಾಷ್ಟ್ರಗಳಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT