ಇಸ್ಲಾಮಾಬಾದ್: ಚೀನಾ ಮತ್ತು ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅಭಿವೃದ್ಧಿಪಡಿಸಲು ಮತ್ತು ಗ್ವಾದರ್ ಬಂದರನ್ನು ಪ್ರಾದೇಶಿಕ ಸಂಪರ್ಕ ಕೇಂದ್ರವಾಗಿ ಸ್ಥಾಪಿಸುವ ಹೊಸ ನಿರ್ಧಾರಕ್ಕೆ ಉಭಯ ದೇಶಗಳೂ ಸಮ್ಮತಿಸಿವೆ.

ಈ ಮಹತ್ವಾಕಾಂಕ್ಷೆ ಯೋಜನೆಯ ಕಾರ್ಯತಂತ್ರದ ಸಂಬಂಧಗಳನ್ನು ಗಟ್ಟಿಗೊಳಿಸುವ ಕುರಿತು ಉಭಯ ದೇಶಗಳು ಒಮ್ಮತಕ್ಕೆ ತಲಪಿವೆ ಎಂದು ಮಂಗಳವಾರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರ ಬೀಜಿಂಗ್ ಪ್ರವಾಸವನ್ನು ಮುಕ್ತಾಯಗೊಳಿಸುವ ವೇಳೆ ಮತ್ತು ಅಮೆರಿಕ–ಇರಾನ್ ನಡುವಿನ ಯುದ್ಧ ನಿಲ್ಲಿಸಲು ಪಾಕಿಸ್ತಾನ ಮಧ್ಯಸ್ಥಿಕೆವಹಿಸಿರುವ ನಡುವೆಯೇ ಈ ಜಂಟಿ ಹೇಳಿಕೆಗಳು ಬಿಡುಗಡೆಯಾಗಿವೆ.

ಒಪ್ಪಿಕೊಂಡ ಮಾದರಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅಭಿವೃದ್ಧಿಯಲ್ಲಿ ಮೂರನೇ ವ್ಯಕ್ತಿಯು ಪಾಲ್ಗೊಳ್ಳುವುದನ್ನು ಎರಡೂ ದೇಶಗಳು ಸ್ವಾಗತಿಸಿವೆ’ ಎಂದು ಚೀನಾದ ಅಧ್ಯಕ್ಷ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತು ಪ್ರಧಾನಿ ಲಿ ಕ್ವಿಯಾಂಗ್ ಅವರನ್ನು ಪಾಕಿಸ್ತಾನ ಪ್ರಧಾನಿ ಷರೀಫ್ ಅವರು ಭೇಟಿಮಾಡಿದ ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಚೀನಾದ ‘ಬೆಲ್ಟ್ ಆ್ಯಂಡ್ ರೋಡ್’ ಉಪಕ್ರಮದ ಪ್ರಮುಖ ಯೋಜನೆಯಾಗಿರುವ ‘ಸಿಪಿಇಸಿ’ ಯೋಜನೆಯನ್ನು ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲು ಎರಡೂ ದೇಶಗಳು ಒಪ್ಪಿವೆ. ಜೊತೆಗೆ ಪಾಕಿಸ್ತಾನದ ಗ್ವಾದರ್ ಬಂದರನ್ನು ಅಭಿವೃದ್ಧಿಪಡಿಸಲು ಮತ್ತು ರಸ್ತೆ ಹಾಗೂ ಬಂದರು ಸಂಪರ್ಕಗಳನ್ನು ಬಲಪಡಿಸುವುದಕ್ಕೂ ಸಮ್ಮತಿಸಿವೆ. ಈ ಯೋಜನೆಗಳು ಖುಂಜೆರಾಬ್ ಪಾಸ್ ಮತ್ತು ಚೀನಾ ಮತ್ತು ಪಾಕಿಸ್ತಾನ ನಡುವಿನ ಪ್ರಮುಖ ಭೂಪ್ರದೇಶದ ಸಂಪರ್ಕವಾಗಿರುವ ಕಾರಕೋರಂ ಹೆದ್ದಾರಿಯ ನವೀಕರಣವನ್ನು ಒಳಗೊಂಡಿವೆ.

ಪಾಕಿಸ್ತಾನವು, ಚೀನಾದ ಕಾರ್ಮಿಕರ ಸುರಕ್ಷತೆ ಮತ್ತು ಪಾಕಿಸ್ತಾನದಲ್ಲಿ ಹೂಡಿಕೆಗಳನ್ನು ಖಚಿತಪಡಿಸಿಕೊಳ್ಳಲು ಭದ್ರತೆ ಮತ್ತು ಸಹಕಾರವನ್ನು ಹೆಚ್ಚಿಸಲು ಉದ್ದೇಶಿತ ಕ್ರಮಗಳನ್ನು ಭರವಸೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.