ಬೀಜಿಂಗ್: ಬಾಹ್ಯಾಕಾಶದಲ್ಲಿ ಏಳು ತಿಂಗಳು ಕಳೆದು, ಗಗನಯಾನಿಗಳ ಮತ್ತೊಂದು ತಂಡಕ್ಕೆ ಕಾರ್ಯಭಾರ ಹಸ್ತಾಂತರಿಸಿರುವ ಚೀನಾದ ಮೂವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಶುಕ್ರವಾರ ಹಿಂದಿರುಗಿದರು.

ಗಗನಯಾನಿಗಳಾದ ಝಾಂಗ್ ಲು, ವು ಫಿ ಹಾಗೂ ಝಾಂಗ್ ಹಾಂಗ್ಝಾಂಗ್ ಅವರನ್ನು ಹೊತ್ತ ಗಗನನೌಕೆ ‘ಶೆಂಝೌ–21’, ಚೀನಾದ ಮಂಗೋಲಿಯಾ ಪ್ರದೇಶದಲ್ಲಿನ ನಿಗದಿತ ಸ್ಥಳದಲ್ಲಿ ಸುರಕ್ಷಿತವಾಗಿ ಇಳಿಯಿತು.

ಚೀನಾ, 2030ರ ವೇಳೆಗೆ ತನ್ನ ಗಗನಯಾನಿಗಳನ್ನು ಚಂದ್ರನ ಅಂಗಳದಲ್ಲಿ ಇಳಿಸಲು ಸಿದ್ಧತೆ ನಡೆಸಿದೆ.

ಗಗನಯಾನಿಗಳಾದ ಝು ಯಾಂಗ್ಝು, ಝಾಂಗ್ ಜಿಯುಯಾನ್ ಹಾಗೂ ಲೈ ಕಯಿಂಗ್ ಅವರು ‘ಶೆಂಝೌ–23’ ಗಗನನೌಕೆ ಮೂಲಕ ಚೀನಾದ ‘ತಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣ’ಕ್ಕೆ ತೆರಳಿದ್ದಾರೆ. ಇವರು ಮುಂದಿನ ಒಂದು ವರ್ಷ ಸಂಶೋಧನೆ, ಪ್ರಯೋಗಗಳನ್ನು ನಡೆಸಲಿದ್ದಾರೆ ಎಂದು ಷಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಚೀನಿ ಭಾಷೆಯಲ್ಲಿ ತಿಯಾಂಗಾಂಗ್ ಎಂದರೆ ‘ಸ್ವರ್ಗದ ಅರಮನೆ’ ಎಂದರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.