ಸಂಸತ್‌ನಲ್ಲಿ ಭಾರತ–ಚೀನಾ ಬಂಧದ ಬಗ್ಗೆ ಚರ್ಚೆಯಾಗಲಿ: ಕಾಂಗ್ರೆಸ್
ಭಾರತ–ಚೀನಾ ಸಂಬಂಧದ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿ ಎಂದು ಕಾಂಗ್ರೆಸ್ ಶುಕ್ರವಾರ ಒತ್ತಾಯಿಸಿದೆ. ‘ಈ ಬಗ್ಗೆ ಚರ್ಚೆ ನಡೆದಲ್ಲಿ ಚೀನಾ ದೇಶವು ನೇರವಾಗಿ ಅಥವಾ ಪಾಕಿಸ್ತಾನದ ಮೂಲಕ ಭಾರತದ ಮೇಲೆ ಒಡ್ಡುತ್ತಿರುವ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಸವಾಲುಗಳ ಕುರಿತು ವ್ಯಕ್ತವಾಗುವ ಸಾಮೂಹಿಕ ಪ್ರತಿಕ್ರಿಯೆಗಳಲ್ಲಿ ಒಮ್ಮತ ಮೂಡಲು ಸಾಧ್ಯ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದರು.