ಬೀಜಿಂಗ್: ನಮ್ಮ ತೈಲ, ಸೋಯಾಬೀನ್ ಖರೀದಿಸಲು ಚೀನಾ ಆಸಕ್ತಿ ತೋರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಬೀಜಿಂಗ್ನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರನ್ನು ಭೇಟಿ ಮಾಡಿದ ಬಳಿಕ ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು ಈ ಹೇಳಿಕೆ ನೀಡಿದ್ದಾರೆ.

ಅಮೆರಿಕದಿಂದ ತೈಲ ಖರೀದಿ ಮಾಡಲು ಚೀನಾ ಒಪ್ಪಿಗೆ ನೀಡಿದೆ, 200 ಬೋಯಿಂಗ್ ಜೆಟ್ಗಳನ್ನು ಕೂಡ ಆಮದು ಮಾಡಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಇರಾನ್ನಿಂದ ತೈಲ ಖರೀದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಚೀನಾ ಪ್ರಮುಖವಾಗಿದ್ದು, ಅಮೆರಿಕದಿಂದ ಅಲ್ಪ ಪ್ರಮಾಣದ ತೈಲ ಖರೀದಿ ಮಾಡುತ್ತಿತ್ತು. ಕಳೆದ ವರ್ಷ ಟ್ರಂಪ್ ಸರ್ಕಾರವು ಹೆಚ್ಚುವರಿ ಸುಂಕ ಜಾರಿಗೊಳಿಸಿದ ಮೇಲೆ ಚೀನಾ, ಅಮೆರಿಕದ ತೈಲ, ಸೋಯಾಬೀನ್ ಖರೀದಿಯನ್ನು ಕಡಿಮೆಗೊಳಿಸಿತ್ತು. ಇರಾನ್ನಿಂದ ತೈಲ ಮತ್ತು ಬ್ರೆಜಿಲ್ನಿಂದ ಸೋಯಾಬೀನ್ ಆಮದು ಮಾಡಿಕೊಳ್ಳುತ್ತಿತ್ತು.

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಒಪ್ಪಂದದ ಕುರಿತ ಟ್ರಂಪ್-ಷಿ ಮಾತುಕತೆಯ ಸಂಪೂರ್ಣ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.