ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎನ್ನುವ ಗಾದೆಯನ್ನು ಕೇಳಿರುತ್ತೇವೆ. ಯಾರನ್ನಾದ್ರೂ ಬೈಯ್ಯುವಾಗ ಕತ್ತೆಗೆ ಹೋಲಿಸುವುದು, ಅದೊಂದು ಕೆಲಸಕ್ಕೆ ಬಾರದ ಪ್ರಾಣಿ ಎಂಬಂತೆ ಬಿಂಬಿಸುವುದು ಸಾಮಾನ್ಯವಾಗಿತ್ತು. ಆದರೆ, ಅದಕ್ಕೆ ಭಾರಿ ಬೆಲೆ ಇದೆ ಎನ್ನುತ್ತಾರೆ ಚೀನಾ ಜನರು.

ಚೀನಾದ ಸಾಂಪ್ರದಾಯಿಕ ಸೌಂದರ್ಯವರ್ಧಕಗಳ ಉತ್ಪಾದನೆಗೆ ಕತ್ತೆ ಬೇಕೆ ಬೇಕು. ಕತ್ತೆಯ ಚರ್ಮದಿಂದ ಪಡೆದ ಕೊಲಾಜಿನ್ನಿಂದ ತಯಾರಾದ ಕಾಸ್ಮೆಟಿಕ್ಸ್ಗಳನ್ನು ಚೀನಿಯರು ವಯಸ್ಸಾಗುವಿಕೆಯನ್ನು ತಡೆಯಲು ಮತ್ತು ಚರ್ಮದ ಕಾಂತಿಗಾಗಿ ಬಳಸುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ಕತ್ತೆಗಳನ್ನು ಹತ್ಯೆ ಮಾಡಿ ಕೊಲಾಜಿನ್ ಪಡೆಯಲಾಗುತ್ತದೆ.
.ಬಂಗಾರದ ಗಣಿ ಈ ಕತ್ತೆ ಫಾರ್ಮ್.VIDEO | ಕತ್ತೆ ನಂಬಿದವರು ಮತ್ತೆ ತಿರುಗಿ ನೋಡಬೇಕಿಲ್ಲ: ಪದವೀಧರ ರಂಗೇಗೌಡರ ಮಾತು.
ಕೊಲಾಜಿನ್ಗೆ ಬೇಡಿಕೆ ಹೆಚ್ಚಿದ್ದೇಕೆ?

ಮೊದಲೆಲ್ಲ ಇಷ್ಟು ಬೇಡಿಕೆ ಇರಲಿಲ್ಲ. ಈಗ ಚೀನಾದಲ್ಲಿ ಜನಸಂಖ್ಯೆ ಹೆಚ್ಚಾಗಿರುವ ಕಾರಣ ಕೊಲಾಜಿನ್ ಬೇಡಿಕೆಯೂ ಹೆಚ್ಚಿದ್ದು, ಅದರ ತಯಾರಿಗೆ ಕತ್ತೆಗಳ ಹತ್ಯೆಯ ಪ್ರಮಾಣವೂ ಜಾಸ್ತಿಯಾಗಿದೆ. ಇದರಿಂದ ಕತ್ತೆ ಸಂತತಿ ನಾಶವಾಗುತ್ತಿದೆ.

ಚೀನಾದಲ್ಲಿ ‘ಎಜಿಯಾವೊ’ ಎನ್ನುವ ಸಾಂಪ್ರದಾಯಿಕ ಔಷಧ ಮತ್ತು ಸೌಂದರ್ಯವರ್ಧಕಕ್ಕೆ ಕತ್ತೆಯ ಚರ್ಮವನ್ನು ಕುದಿಸಿ, ಅದರಲ್ಲಿನ ಕೊಲಾಜಿನ್ ಬಳಸಲಾಗುತ್ತದೆ. ಟಾನಿಕ್ ಮತ್ತು ಆಹಾರ ರೂಪದಲ್ಲಿ ಅಥವಾ ಔಷಧದ ರೂಪದಲ್ಲಿ ಎಜಿಯಾವೊ ಸೇವಿಸುತ್ತಾರೆ. ಟೀ, ಸೂಪ್ ಹಾಗೂ ಕೆಲವು ತಿಂಡಿಗಳಲ್ಲಿ ಬೆರೆಸಿಯೂ ಸೇವಿಸಲಾಗುತ್ತದೆ.

ಈ ಎಜಿಯಾವೊ ದೇಹದಲ್ಲಿ ರಕ್ತವನ್ನು ಶುದ್ಧೀಕರಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸದಾ ಯೌವ್ವನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುವುದು ಚೀನಿಯರ ನಂಬಿಕೆ.

ಈಗ ಚೀನಾದಲ್ಲಿ ಮಧ್ಯಮ ವರ್ಗದ ಜನರೂ ಈ ಉತ್ಪನ್ನಗಳನ್ನು ಬಳಸುತ್ತಿರುವ ಕಾರಣ ಬೇಡಿಕೆ ಹೆಚ್ಚಾಗಿದೆ. ಇದಕ್ಕಾಗಿ ಪ್ರತಿ ವರ್ಷ ಸುಮಾರು 48 ರಿಂದ 59 ಲಕ್ಷ ಕತ್ತೆಗಳನ್ನು ಕೊಲ್ಲಲಾಗುತ್ತಿದೆ ಎಂದು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ತಿಳಿಸಿದೆ.

ಕತ್ತೆಗಳ ಸಂಖ್ಯೆಯಲ್ಲಿ ಕುಸಿತ

ಕತ್ತೆಗಳ ಗರ್ಭಾವಸ್ಥೆಯ ಅವಧಿ 12 ತಿಂಗಳು. ಹೀಗಾಗಿ ಕತ್ತೆಗಳು ವರ್ಷಕ್ಕೆ ಒಂದೇ ಮರಿ ಹಾಕುತ್ತವೆ. ಇದೇ ಕಾರಣಕ್ಕೆ ಚೀನಾ ಪಕ್ಕದ ಬ್ರೆಜಿಲ್ ಮತ್ತು ಆಫ್ರಿಕಾದಿಂದ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತಿತ್ತು.

ಇದರ ಪರಿಣಾಮ ಬ್ರೆಜಿಲ್ನಲ್ಲೂ ಕತ್ತೆಗಳ ಸಂತತಿ ಕುಸಿತ ಕಂಡಿದೆ. ವರದಿಗಳ ಪ್ರಕಾರ, 1996ರಲ್ಲಿ 13 ಲಕ್ಷವಿದ್ದ ಕತ್ತೆಗಳ ಸಂಖ್ಯೆ, 2025ರ ವೇಳೆಗೆ ಕೇವಲ 78,000ಕ್ಕೆ ಕುಸಿದಿದೆ.

2024ರಲ್ಲಿ ಆಫ್ರಿಕಾದಲ್ಲಿ ಕತ್ತೆಗಳ ಸಂತತಿಯನ್ನು ಉಳಿಸಲು ಆಫ್ರಿಕನ್ ಯೂನಿಯನ್, ಕತ್ತೆಗಳ ಚರ್ಮದ ವ್ಯಾಪಾರದ ಮೇಲೆ ಸಂಪೂರ್ಣ 15 ವರ್ಷಗಳ ಕಾಲ ನಿಷೇಧ ಹೇರಿತು.

ಇತ್ತ, ಬ್ರೆಜಿಲ್ ಕತ್ತೆಗಳನ್ನು ಕೊಲ್ಲುವುದು ಕಾನೂನು ಬಾಹಿರ ಎಂದು ಘೋಷಿಸಿತು. ಜತೆಗೆ ಕೊನೆಯಾದಾಗಿ ಉಳಿದುಕೊಂಡಿದ್ದ ಅತಿ ದೊಡ್ಡ ಕತ್ತೆಗಳ ಕಸಾಯಿಖಾನೆಯೂ ಮುಚ್ಚಿತು. ಇದರಿಂದ ಚೀನಾಕ್ಕೆ ಕತ್ತೆಗಳ ಚರ್ಮ ಸಿಗುವುದು ಕಷ್ಟವಾಯಿತು. ಆಗ ವಿಜ್ಞಾನಿಗಳಿಗೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯುವ ತುರ್ತು ಎದುರಾಯಿತು.

ವಿಜ್ಞಾನಿಗಳ ಹೊಸ ಮಾರ್ಗ

ಚೀನಾದ ಜನರ ಸೌಂದರ್ಯದ ದುರಾಸೆಗೆ ಅಮಾಯಕ ಕತ್ತೆಗಳು ಜೀವ ತೆರುತ್ತಿರುವುದಕ್ಕೆ ತಡೆಯೊಡ್ಡಲು ಬ್ರೆಜಿಲ್ನ ವಿಜ್ಞಾನಿಗಳು ಜೈವಿಕ ತಂತ್ರಜ್ಞಾನದ ಪರಿಹಾರವನ್ನು ಕಂಡುಹಿಡಿದಿದ್ದಾರೆ. ಈ ಬಗ್ಗೆ ವಿಜ್ಞಾನಿಗಳು, ಫೆಡರಲ್ ಯೂನಿವರ್ಸಿಟಿ ಆಫ್ ಕಾರ್ಲಾ ಪರಾನಾದಲ್ಲಿ ಸಂಶೋಧನೆ ನಡೆಸಿದ್ದಾರೆ.

ಈ ತಂತ್ರಜ್ಞಾನದ ಮೂಲಕ ವಿಜ್ಞಾನಿಗಳು ಕತ್ತೆಗಳನ್ನು ಕೊಲ್ಲದೆ, ಪ್ರಯೋಗಾಲಯದಲ್ಲಿಯೇ ಕತ್ತೆಯ ಚರ್ಮದಲ್ಲಿರುವಂತಹದ್ದೇ ಕೊಲಾಜಿನ್ ಪ್ರೊಟೀನ್ ತಯಾರಿಸುತ್ತಿದ್ದಾರೆ.

ಪ್ರೆಸಿಸಿಷನ್ ಫರ್ಮೆಂಟೇಶನ್ ಎನ್ನುವ ತಂತ್ರಜ್ಞಾನದ ಮೂಲಕ ಕತ್ತೆಯ ಡಿಎನ್ಎ ಕೋಡ್ ಅನ್ನು ಯೀಸ್ಟ್ನಂತಹ ಸೂಕ್ಷ್ಮಜೀವಿಗಳೊಳಗೆ ಸೇರಿಸಲಾಗುತ್ತದೆ. ಈ ಯೀಸ್ಟ್ ಕತ್ತೆಯ ಚರ್ಮದಿಂದ ಸಿಗುವ ಅದೇ ರೀತಿಯ ಶುದ್ಧ ಪ್ರೊಟೀನ್ ಅನ್ನು ಉತ್ಪಾದಿಸುತ್ತದೆ.

ಇದರಿಂದ ಯಾವುದೇ ಪ್ರಾಣಿ ಹತ್ಯೆ ಇಲ್ಲದೆ ಕೊಲಾಜಿನ್ ಸಿಗುತ್ತದೆ. ಇದು ನೈಜ ಚರ್ಮದಲ್ಲಿರಬಹುದಾದ ರೋಗಾಣುಗಳು ಅಥವಾ ಹೆವಿ ಮೆಟಲ್ನಂತಹ ಕಲುಷಿತತೆಯಿಂದಲೂ ಮುಕ್ತವಾಗಿಯೂ, ಶುದ್ಧವಾಗಿಯೂ ಇರುತ್ತದೆ ಎಂದಿದ್ದಾರೆ ವಿಜ್ಞಾನಿಗಳು.

ಈ ಬಗ್ಗೆ ಯೋಜನೆಯ ಮುಖ್ಯಸ್ಥೆ, ಫೆಡರಲ್ ಯೂನಿವರ್ಸಿಟಿ ಆಫ್ ಪರಾನಾದ ಪ್ರಾಣಿ ಕಲ್ಯಾಣ ಪ್ರಾಧ್ಯಾಪಕಿ ಮತ್ತು ಅದರ ಸೆಲ್ಯುಲಾರ್ ಅನಿಮಲ್ ಸೈನ್ಸ್ ಲ್ಯಾಬೋರೇಟರಿಯ ಮುಖ್ಯಸ್ಥೆ ಕಾರ್ಲಾ ಮೊಲೆಂಟೊ ಮಾಹಿತಿ ನೀಡಿದ್ದು, ‘2027ರ ಹೊತ್ತಿಗೆ ಈ ತಂತ್ರಜ್ಞಾನ ತಯಾರಾಗಲಿದೆ ಎಂಬುದು ನಮ್ಮ ಆಶಯ. ಅಂದರೆ ಕೊಲಾಜಿನ್ ಪುಡಿಯಂತಹ ವಿವಿಧ ರೀತಿಯ ಉತ್ಪನ್ನಗಳು ಸಿದ್ಧವಾಗಲಿದೆ. ಕತ್ತೆಗಳ ಕೊಲಾಜಿನ್ ಪ್ರಕಾರಗಳ ಬಗ್ಗೆ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ಏಕೆಂದರೆ ಕತ್ತೆಗಳ ವಿವಿಧ ತಳಿಗಳಿವೆ. ಹೀಗಾಗಿ ಅವುಗಳಿಂದ ಉತ್ಪಾದಿಸುವ ಕೊಲಾಜಿನ್ ಹೇಗಿರುತ್ತದೆ ಎಂಬುದರ ಕುರಿತೂ ತಿಳಿದುಕೊಳ್ಳಬೇಕಾಗಿದೆ’ ಎಂದಿದ್ದಾರೆ.

‘ಮುಂದಿನ ಒಂದೆರಡು ದಶಕಗಳಲ್ಲಿ ಜಾಗತಿಕವಾಗಿಯೂ ಚೀನಾಕ್ಕೆ ಕತ್ತೆಗಳ ರಫ್ತು ಆರಂಭವಾಗಬಹುದು’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಚೀನೀ ಔಷಧ ಮತ್ತು ವಿಜ್ಞಾನದ ಇಬ್ಬರು ಇತಿಹಾಸಕಾರರಾದ ನಟಾಲಿ ಕೋಹ್ಲೆ ಮತ್ತು ಗ್ರೆಗೊರಿ ಕ್ಲಾನ್ಸಿ.

ಎಜಿಯಾವೊ ತಯಾರಿ ಬಗ್ಗೆ ಚೀನಿಯರಿಗೇ ಗೊತ್ತಿಲ್ಲ

ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ ಎನ್ನಲಾಗುವ ‘ಎಜಿಯಾವೊ’ವನ್ನು ಹೇಗೆ ತಯಾರಿಸುತ್ತಾರೆ ಎನ್ನುವ ಬಗ್ಗೆ ಚೀನಾದ ಬಹಳಷ್ಟು ಯುವಜನತೆಗೆ ಅರಿವೇ ಇಲ್ಲ.

ಈ ಬಗ್ಗೆ ಲಂಡನ್ ಮೂಲದ ಮಾರುಕಟ್ಟೆ ಸಂಶೋಧನಾ ಕಂಪನಿ ಕಾಂಟಾರ್ ಸಮೀಕ್ಷೆಯೊಂದನ್ನು ನಡೆಸಿತ್ತು. ಇದರಲ್ಲಿ 1,000 ಚೀನೀ ವಯಸ್ಕರಲ್ಲಿ ಸುಮಾರು ಮೂರನೇ ಎರಡರಷ್ಟು ಜನರು ಈ ಹಿಂದೆ ಎಜಿಯಾವೊ ಸೇವಿಸಿದ್ದರು. ಅವರಲ್ಲಿ ಶೇ 46 ರಷ್ಟು ಜನರಿಗೆ ಎಜಿಯಾವೊದಲ್ಲಿ ಕತ್ತೆ ಚರ್ಮದ ಅಂಶವಿದೆ ಎನ್ನುವುದೇ ತಿಳಿದಿರಲಿಲ್ಲ. ಶೇ70 ರಷ್ಟು ಜನರಿಗೆ ಕತ್ತೆಗಳ ಕಳ್ಳ ಸಾಗಣೆ, ಪ್ರಾಣಿಗಳ ಕಾಳಜಿಗೆ ಇರುವ ಇಲಾಖೆ ಸೇರಿದಂತೆ ಎಜಿಯಾವೊ ಉತ್ಪಾದನೆಯ ಸುತ್ತಲಿನ ಘಟನೆ, ವಿಚಾರಗಳ ಬಗ್ಗೆ ತಿಳಿದಿರಲಿಲ್ಲ ಎನ್ನುವುದು ಗೊತ್ತಾಗಿದೆ.

ಮಾಹಿತಿ: ಸೌತ್ ಚೀನಾ ಮಾರ್ನಿಂಗ್ ಪೋಸ್ಟ್, ದಿ ಹಿಂದೂ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.