ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮಹಾಸಾಗರ ತೊರೆದ ಚೀನಿ ಗೂಢಚರ್ಯೆ ಹಡಗು

Last Updated 14 ಡಿಸೆಂಬರ್ 2022, 16:03 IST
ಅಕ್ಷರ ಗಾತ್ರ

ನವದೆಹಲಿ: ವಾರದಿಂದ ಹಿಂದೂ ಮಹಾಸಾಗರದಲ್ಲಿ ಬೀಡುಬಿಟ್ಟಿದ್ದಚೀನಾದ ಅತ್ಯಾಧುನಿಕ ಗೂಢಚರ್ಯೆ ಹಡಗು ‘ಯುವಾನ್ ವಾಂಗ್ ವಿ’ ಬುಧವಾರ ನಿರ್ಗಮಿಸಿರುವುದು ವರದಿಯಾಗಿದೆ.

ಭಾರತವು ಬಂಗಾಳ ಕೊಲ್ಲಿಯಲ್ಲಿ ದೀರ್ಘ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಚೀನಾದ ಈ ಹಡುಗು ಹಿಂದೂ ಮಹಾ ಸಾಗರಕ್ಕೆ ಡಿ.5ರಂದು ಪ್ರವೇಶಿಸಿತ್ತು.ಕ್ಷಿಪಣಿಯ ಪರೀಕ್ಷೆಗಳು ಮತ್ತು ರಾಕೆಟ್‌ಗಳ ಉಡಾವಣೆಯ ಮೇಲೆ ಗೂಢಚರ್ಯೆ ನಡೆಸುವ ಅತ್ಯಾಧುನಿಕ ಉಪಕರಣಗಳು ಈ ಹಡಗಿನಲ್ಲಿವೆ.

ಈ ಹಡಗಿನ ಮೇಲೆ ಭಾರತೀಯ ನೌಕೆ ಪಡೆಯು ತೀವ್ರ ನಿಗಾ ಇರಿಸಿತ್ತು. ಆಗಸ್ಟ್ ತಿಂಗಳಲ್ಲಿಶ್ರೀಲಂಕಾದ ಹಂಬಂಟೋಟ ಬಂದರಿನಲ್ಲಿ ಈ ಹಡಗು ಮೊದಲು ಲಂಗರು ಹಾಕಿದಾಗ ಭಾರತ ಭದ್ರತಾ ದೃಷ್ಟಿಯಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದಶ್ರೀಲಂಕಾ ಮತ್ತುಚೀನಾನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿತ್ತು.

ಏಮ್ಸ್‌ ಮೇಲಿನ ಸೈಬರ್‌ ದಾಳಿ ಮೂಲ ಚೀನಾ:

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ವೆಬ್‌ಸೈಟ್ ಮೇಲೆ ನಡೆದಿದ್ದ ಸೈಬರ್ದಾಳಿಹಿಂದೆಯ ಚೀನಾ ಮತ್ತು ಹಾಂಕ್‌ಕಾಂಗ್‌ ಕೈವಾಡ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

‘ಚೀನಾ ಮತ್ತು ಹಾಂಗ್ ಕಾಂಗ್ ಕಂಪನಿಗಳಿಂದ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಕೋರಲಾಗಿದೆ. ದೆಹಲಿ ಪೊಲೀಸರು ಈ ಸಂಬಂಧ ಸಿಬಿಐಗೆ ಪತ್ರ ಬರೆದಿದ್ದು, ಇಂಟರ್‌ಪೋಲ್‌ ಮೂಲಕ ಮಾಹಿತಿ ಪಡೆಯಲಾಗುತ್ತದೆ’ ಎಂದು ಅಧಿಕೃತ ಮೂಲಗಳು

ನವೆಂಬರ್‌ 23ರಂದುಏಮ್ಸ್ ಸರ್ವರ್ ಮೇಲಿನದಾಳಿಯ ಮೂಲ ಚೀನಾ ಮತ್ತು ಹಾಂಗ್‌ಕಾಂಗ್‌ನ ಎರಡು ಸ್ಥಳಗಳಿಂದ ನಡೆದಿದೆ. 100 ವರ್ಚುವಲ್‌ ಸರ್ವರ್‌ಗಳು ಮತ್ತು40 ಭೌತಿಕ ಸರ್ವರ್‌ಗಳನ್ನು ಹೊಂದಿದ್ದು. ಇದರಲ್ಲಿ ಐದು ಸರ್ವರ್‌ಗಳ ಮೇಲೆ ವೈರಸ್‌ ದಾಳಿಯಾಗಿರುವುದು ಕಂಡುಬಂದಿತ್ತು. ಐದೂ ಸರ್ವರ್‌ಗಳು ಭಾಗಶಃ ಕಾರ್ಯನಿರ್ವಹಿಸುತ್ತಿವೆ ಎಂದು ಮೂಲಗಳು ಹೇಳಿವೆ.

ಸೈಬರ್‌ ಭಯೋತ್ಪಾದನೆ ದಾಳಿ ಪ್ರಕರಣವನ್ನು ದೆಹಲಿ ಪೊಲೀಸ್‌ ಇಲಾಖೆಯ ಐಎಫ್‌ಎಸ್‌ಒ ಘಟಕ ದೂರು ದಾಖಲಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT