ಬೊಗೋಟಾ: ಕೊಲಂಬಿಯಾದ ದಕ್ಷಿಣ ಭಾಗದಲ್ಲಿ ಸೋಮವಾರ ಸೇನಾ ಸಾರಿಗೆ ವಿಮಾನ ಅಪಘಾತಕ್ಕಿಡಾಗಿದ್ದು, ಕನಿಷ್ಠ 80 ಸೈನಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಕೊಲಂಬಿಯಾದ ಸೇನೆ ತಿಳಿಸಿದೆ.

ಈಕ್ವೆಡಾರ್ನ ದಕ್ಷಿಣ ಗಡಿ ಬಳಿಯ ಪೋರ್ಟೊ ಲೆಗಿಜಾಮೊದಿಂದ ಸೈನಿಕರು ಮತ್ತು ಸಿಬ್ಬಂದಿ ಸೇರಿದಂತೆ 125 ಜನರನ್ನು ಹೊತ್ತೊಯ್ಯತ್ತಿದ್ದ ‘ಸಿ–130 ಹರ್ಕ್ಯುಲಸ್’ ವಿಮಾನ ‘ಟೇಕ್ ಆಫ್’ ಆಗುತ್ತಿದ್ದಂತೆ ಪತನಗೊಂಡು ಅಪಘಾತ ಸಂಭವಿಸಿದೆ.

‘ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಸ್ಪಷ್ಟವಾಗಿಲ್ಲ. ಆದರೆ 40ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿ 114 ಸೈನಿಕರು ಮತ್ತು 11 ಸಿಬ್ಬಂದಿ ಇದ್ದರು ಎಂದು ಸೇನಾ ಮೂಲಗಳು ತಿಳಿಸಿವೆ.

ವಿಮಾನವು ಸಮೀಪದ ಅರಣ್ಯದಲ್ಲಿ ಪತನಗೊಂಡ ಬೆನ್ನಲ್ಲೇ ದೊಡ್ಡ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿತು. ಬಳಿಕ ಅಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ಆವರಿಸಿಕೊಂಡಿತು ಎಂದು ಮೂಲಗಳು ತಿಳಿಸಿವೆ. ವಿಮಾನ ಪತನದ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿದರು.

ಇತ್ತೀಚಿನ ವಾರಗಳಲ್ಲಿ ಕೊಲಂಬಿಯಾ ಮತ್ತು ಈಕ್ವೆಡಾರ್ನ ಸೇನೆಗಳು ಮಾದಕವಸ್ತು ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಹೀಗಾಗಿ ಈ ಭಾಗದಲ್ಲಿ ಸೈನಿಕರ ಚಲನವಲನ ಹೆಚ್ಚಿದೆ.

‘ವಿಮಾನದಲ್ಲಿದ್ದ ಅನೇಕರು ಮೃತಪಟ್ಟಿದ್ದಾರೆ, ಸಾವಿನ ಸಂಖ್ಯೆ ನಿರ್ದಿಷ್ಟವಾಗಿ ಗೊತ್ತಾಗಿಲ್ಲ’ ಎಂದು ಕೊಲಂಬಿಯಾದ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ತಿಳಿಸಿದ್ದಾರೆ.

‘ಇದು ದೊಡ್ಡ ದುರಂತ ಮತ್ತು ಅತ್ಯಂತ ನೋವಿನ ಘಟನೆ. ರಕ್ಷಣಾ ಪಡೆಗಳು ಈಗಾಗಲೇ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಅಪಘಾತಕ್ಕೆ ಕಾರಣವೂ ದೃಢಪಟ್ಟಿಲ್ಲ’ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

‘ವಿಮಾನದಲ್ಲಿ 110ಕ್ಕೂ ಹೆಚ್ಚು ಸೈನಿಕರಿದ್ದರು. ವಿಮಾನವು ನಗರ ಕೇಂದ್ರದಿಂದ ಕೇವಲ 3 ಕಿ.ಮೀ. ದೂರದಲ್ಲಿ ಅಪಘಾತಕ್ಕೀಡಾಗಿದೆ’ ಎಂದು ಅಲ್ಲಿನ ಸ್ಥಳೀಯ ಮಾಧ್ಯಮ ‘ಬ್ಲೂ ರೇಡಿಯೊ’ ವರದಿ ಮಾಡಿದೆ.

ಇದು, ದಕ್ಷಿಣ ಅಮೆರಿಕದಲ್ಲಿ ತಿಂಗಳೊಳಗೆ ‘ಸಿ–130 ಹರ್ಕ್ಯುಲಸ್’ ವಿಮಾನ ಅಪಘಾತಗೊಂಡ ಎರಡನೇ ಪ್ರಕರಣ. ಫೆಬ್ರುವರಿ 27ರಂದು ಲಾ ಪಾಜ್ ಬಳಿ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಬೊಲಿವಿಯನ್ ಸೇನಾ ಸರಕು ವಿಮಾನ ಇಳಿಯುವಾಗ ಅಪಘಾತಕ್ಕೀಡಾಗಿತ್ತು. ಅದರಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.