ಢಾಕಾ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಸರ್ಕಾರದ ಅವಧಿಯಲ್ಲಿ ಇದ್ದ 9 ಸಂಸದರು, 17 ಮಾಜಿ ಸಚಿವರು ದೇಶದಿಂದ ಹೊರಹೋಗದಂತೆ ನ್ಯಾಯಾಲಯವೊಂದು ನಿರ್ಬಂಧ ಹೇರಿದೆ.
ಇವರೆಲ್ಲ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ದೇಶದ ಭ್ರಷ್ಟಾಚಾರ ನಿಗ್ರಹ ಆಯೋಗ ಅರ್ಜಿ ಸಲ್ಲಿಸಿರುವುದರಿಂದ ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ. ಮಾಜಿ ವಿದೇಶಾಂಗ ಸಚಿವ ಮೊಹಮ್ಮದ್ ಹಸನ್ ಮಹ್ಮುದ್ ಅವರೂ ಈ 17 ಜನರ ಪಟ್ಟಿಯಲ್ಲಿದ್ದಾರೆ.