ದುಬೈ: ‘ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಇಂಧನ ಬೆಲೆಗಳಲ್ಲಿ ಏರಿಕೆ ಆಗಿರುವ ಬಗ್ಗೆ ಅಸಮಾಧಾನಗೊಂಡಿರುವ ದೇಶಗಳು, ತಮಗೆ ಅಗತ್ಯವಿರುವ ಇಂಧನದ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು’ ಎಂದು ಮಂಗಳವಾರ ಹೇಳಿದ್ದಾರೆ.

ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿ ಮೂಲಕ ಹಡಗುಗಳು ಸಾಗಲು ಇರಾನ್ ಅವಕಾಶ ನೀಡದ ಕಾರಣ, ಇಂಧನ ಬೆಲೆಗಳು ಹೆಚ್ಚಿವೆ.

ತೈಲ ಹೊತ್ತ ಹಡಗುಗಳ ಸಂಚಾರಕ್ಕೆ ಹೊರ್ಮುಜ್ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸುವ ಪ್ರಯತ್ನಗಳಿಗೆ ನೆರವು ನೀಡುವಂತೆ ಟ್ರಂಪ್ ಮಾಡಿದ್ದ ಮನವಿಗೆ ಅಮೆರಿಕದ ಮಿತ್ರ ರಾಷ್ಟ್ರಗಳು ಸ್ಪಂದಿಸಿಲ್ಲ. ಈ ಕಾರಣಕ್ಕೆ ಅವುಗಳನ್ನು ಉದ್ದೇಶಿಸಿ ಟ್ರಂಪ್ ಈ ಮಾತು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಟ್ರೂತ್ ಸೋಷಿಯಲ್’ನಲ್ಲಿ ಬರೆದುಕೊಂಡಿರುವ ಅವರು,‘ನಿಮಗೆ ಬೇಕಿರುವ ತೈಲದ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳಿ. ಇಲ್ಲವೇ ಸಾಕಷ್ಟು ಸಂಗ್ರಹ ಹೊಂದಿರುವ ಅಮೆರಿಕದಿಂದಲೇ ತೈಲ ಖರೀದಿಸಿ’ ಎಂದು ಮಿತ್ರ ರಾಷ್ಟ್ರಗಳಿಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.